#ಸೋಮೇಶ್ವರ್ ನಾನು ಸಾಗರದ ಸಂಜಯ್ ಮೆಮೋರಿಯಲ್ ಪಾಲಿಟೆಕ್ನಿಕ್ ಗೆ ಡಿಪ್ಲೋಮೋಗೆ ಹೋಗುವಾಗ ಸೋಮೆಶ್ವರ್ ಸಾಗರದ ಎಲ್.ಬಿ. ಕಾಲೇಜಿಗೆ ಬರುತ್ತಿದ್ದರು ನಮಗಿಬ್ಬರಿಗೂ ಸಮಾನ ಸ್ನೇಹ ಬಂದ ಉಂಟು ಮಾಡಿದವರು ನಂಜವಳ್ಳಿ ಮಲ್ಲಿಕಾರ್ಜುನ ಗೌಡರು. ಆಗಲೇ ಸೋಮೇಶ್ವರ ಬರೆದ ಕಥೆಗಳು ಪ್ರಜಾವಾಣಿ, ಸುದಾಗಳಲ್ಲಿ ಪ್ರಕಟ ಆಗುತ್ತಿತ್ತು ಇವರ ತಂದೆ ಕೂಡ ಕೆಳದಿ ಮಠದಲ್ಲಿ ಸಲಹೆಗಾರರಾಗಿ ಸಹಕರಿಸಿದವರು. ಸೋಮೇಶ್ವರ್ ಈಗ ಬೆಂಗಳೂರಲ್ಲಿ ಯಶಸ್ವಿ ಉದ್ದಿಮೆದಾರರಾಗಿದ್ದಾರೆ ನನ್ನ ಮೊದಲ ಇತಿಹಾಸ ಆದರಿತ ಕಾಲ್ಪನಿಕ ಕಾದಂಬರಿ ಓದಿ ಅಭಿಪ್ರಾಯ ದಾಖಲಿಸಿದ್ದಾರೆ. #ಸೋಮೇಶ್ವರರ ವಿಮಷೆ೯ . ಸಾಧಾರಣ ಮಾನವನಲ್ಲಿರುವ ಅರಿವುರಹಿತತೆ ಎನ್ನುವುದು ಶೇಕಡಾ ೯೦% ರಷ್ಟು ಎನ್ನುವುದನ್ನು ಬದುಕು ಕ್ರಮೇಣ ಅರ್ಥವಾಗಿಸುತ್ತಾ ಹೋದಂತೆ, ವೈಯುಕ್ತಿಕವಾಗಿ, ಯಾವುದೇ ಮನುಷ್ಯರ, ರಾಜರ, ಅಧಿಕಾರಸ್ತರ, ರಾಜಕಾರಣಿಗಳ ಪೂರ್ವೇತಿಹಾಸ (ಚರಿತ್ರೆ), ನನ್ನ ಆಸಕ್ತಿಯ ವಿಷಯವಾಗಿ ಉಳಿದಿಲ್ಲ. ತರಾಸುರವರ ಚಿತ್ರದುರ್ಗದ ಕುರಿತಾದ ಕೃತಿಗಳು, ಕೆ.ವಿ.ಅಯ್ಯರ್ ಅವರ ಶಾಂತಲೆಯನ್ನು ಸಹಾ ಅವುಗಳ ರೋಚಕ ಶೈಲಿಗಾಗಿಯೇ ಓದಿದವನು ನಾನು!! ಆದರೆ.... ಪ್ರಿಯ ಅರುಣ್ ಪ್ರಸಾದ್, ಸಾಗರದ ಕಾಲೇಜಿನ ದಿನಗಳಿಂದ ನನಗೆ ಪರಿಚಿತರೂ ಗೆಳೆಯರೂ ಆದ ನೀವು, ಅಂದಿನಿಂದಲೂ ತುಂಬಾ ವಿಶೇಷ ಹಾಗೂ ಆಸಕ್ತಿದಾಯಕ ವ್ಯಕ್ತಿತ್ವವುಳ್ಳವರು. ...