Skip to main content

ಬೆಸ್ತರ ರಾಣಿ ಚಂಪಕಾ ವಿಮಷೆ೯ -13

#ಸೋಮೇಶ್ವರ್ 
  ನಾನು ಸಾಗರದ ಸಂಜಯ್ ಮೆಮೋರಿಯಲ್ ಪಾಲಿಟೆಕ್ನಿಕ್ ಗೆ ಡಿಪ್ಲೋಮೋಗೆ ಹೋಗುವಾಗ ಸೋಮೆಶ್ವರ್ ಸಾಗರದ ಎಲ್.ಬಿ. ಕಾಲೇಜಿಗೆ ಬರುತ್ತಿದ್ದರು ನಮಗಿಬ್ಬರಿಗೂ ಸಮಾನ ಸ್ನೇಹ ಬಂದ ಉಂಟು ಮಾಡಿದವರು ನಂಜವಳ್ಳಿ ಮಲ್ಲಿಕಾರ್ಜುನ ಗೌಡರು.
  ಆಗಲೇ ಸೋಮೇಶ್ವರ ಬರೆದ ಕಥೆಗಳು ಪ್ರಜಾವಾಣಿ, ಸುದಾಗಳಲ್ಲಿ ಪ್ರಕಟ ಆಗುತ್ತಿತ್ತು ಇವರ ತಂದೆ ಕೂಡ ಕೆಳದಿ ಮಠದಲ್ಲಿ ಸಲಹೆಗಾರರಾಗಿ ಸಹಕರಿಸಿದವರು.
   ಸೋಮೇಶ್ವರ್ ಈಗ ಬೆಂಗಳೂರಲ್ಲಿ ಯಶಸ್ವಿ ಉದ್ದಿಮೆದಾರರಾಗಿದ್ದಾರೆ ನನ್ನ ಮೊದಲ ಇತಿಹಾಸ ಆದರಿತ ಕಾಲ್ಪನಿಕ ಕಾದಂಬರಿ ಓದಿ ಅಭಿಪ್ರಾಯ ದಾಖಲಿಸಿದ್ದಾರೆ.

#ಸೋಮೇಶ್ವರರ ವಿಮಷೆ೯ .
ಸಾಧಾರಣ ಮಾನವನಲ್ಲಿರುವ ಅರಿವುರಹಿತತೆ ಎನ್ನುವುದು ಶೇಕಡಾ ೯೦% ರಷ್ಟು ಎನ್ನುವುದನ್ನು ಬದುಕು ಕ್ರಮೇಣ ಅರ್ಥವಾಗಿಸುತ್ತಾ ಹೋದಂತೆ, ವೈಯುಕ್ತಿಕವಾಗಿ, ಯಾವುದೇ ಮನುಷ್ಯರ, ರಾಜರ, ಅಧಿಕಾರಸ್ತರ, ರಾಜಕಾರಣಿಗಳ ಪೂರ್ವೇತಿಹಾಸ (ಚರಿತ್ರೆ), ನನ್ನ ಆಸಕ್ತಿಯ ವಿಷಯವಾಗಿ ಉಳಿದಿಲ್ಲ. ತರಾಸುರವರ ಚಿತ್ರದುರ್ಗದ ಕುರಿತಾದ ಕೃತಿಗಳು, ಕೆ.ವಿ.ಅಯ್ಯರ್ ಅವರ ಶಾಂತಲೆಯನ್ನು ಸಹಾ ಅವುಗಳ ರೋಚಕ ಶೈಲಿಗಾಗಿಯೇ ಓದಿದವನು ನಾನು!!  ಆದರೆ....

ಪ್ರಿಯ ಅರುಣ್ ಪ್ರಸಾದ್, ಸಾಗರದ ಕಾಲೇಜಿನ ದಿನಗಳಿಂದ ನನಗೆ ಪರಿಚಿತರೂ ಗೆಳೆಯರೂ ಆದ ನೀವು, ಅಂದಿನಿಂದಲೂ ತುಂಬಾ ವಿಶೇಷ ಹಾಗೂ ಆಸಕ್ತಿದಾಯಕ ವ್ಯಕ್ತಿತ್ವವುಳ್ಳವರು.  ಹಾಗಾಗಿ ಮತ್ತು ನಿಮ್ಮ ಹೋರಾಟಗಳು, ಸಾಹಿತ್ಯ-ಪುಸ್ತಕ ಪ್ರೀತಿಯನ್ನು ತಕ್ಕ ಮಟ್ಟಿಗೆ ಬಲ್ಲ ನನಗೆ, ನೀವು ಐತಿಹಾಸಿಕ ಕಾದಂಬರಿ ಬರೆದಿದ್ದೀರಿ ಎಂದಾಗ, ನಿಮ್ಮ ಪ್ರಸ್ತುತಿಯ, ಅಭಿವ್ಯಕ್ತಿಯ, ಕಥನಗಾರಿಕೆಯ ಬಗ್ಗೆಯೇ ಸಹಜವಾಗಿ ಕುತೂಹಲಗಳಿದ್ದವು!!

ಚಂಪಕಾಳ ರಂಗೋಲಿಯ ಕುಸುರಿಯನ್ನು ಗಮನಿಸುವಷ್ಟು ಕೆಳದಿಯ ರಾಜ ವೆಂಕಟಪ್ಪನಾಯಕರು ಸೂಕ್ಷ್ಮಜ್ಞರಾಗಿದ್ದರು ಎನ್ನುವುದು ಖುಷಿ ಕೊಡುತ್ತದೆ.  ಮತ್ತು  ಇಕ್ಕೇರಿ ಹಾಗೂ ಕೆಳದಿಯ ದೇವಾಲಯಗಳ ನಿರ್ಮಾಣಗಳಲ್ಲಿ ಅವರ ವಂಶಜರ ಅಪ್ರತಿಮ ಕಲಾಭಿರುಚಿಯನ್ನು ಸಾಬೀತುಗೊಳಿಸುತ್ತದೆ ಕೂಡಾ!. ಚಂಪಕಾರಾಣಿಯ ನಿರ್ವ್ಯಾಜ್ಯ ಪ್ರೇಮ, ಮುಗ್ಧತೆ, ಅಸಹಾಯಕತೆ, ಪ್ರಬುದ್ಧತೆ, ಏಕಾಂತ ಹಾಗೂ ದುರಂತಗಳನ್ನು ನಿಮ್ಮ ಹೃದಯಸ್ಪರ್ಶಿ ಬರವಣಿಗೆಯ ಮೂಲಕ ಮೂಡಿಸಿದ ಬಗೆ ಮೃದು ಹೃದಯದವರನ್ನು ಕಾ...ಡುತ್ತದೆ.

ಚಿಕ್ಕ ಚಿಕ್ಕ ಅಧ್ಯಾಯಗಳಲ್ಲಿ ಆಕರ್ಷಕವಾಗಿ ಒತ್ತರಿಸಿದ ಮಾಹಿತಿಗಳು, ಘಟನೆಗಳನ್ನು ನಮೂದಿಸುತ್ತಲೇ, ತಕ್ಷಣವೇ ಸಂಪೂರ್ಣ ವಿವರಗಳನ್ನು ನೀಡದೇ ಓದುಗನ ಕುತೂಹಲವನ್ನು ಹಿಡಿದಿಡುವ ಬಗೆ, ಹಾಗೂ ಮುಂದೆ ಆ ಘಟನೆಗಳ, ಪಾತ್ರಗಳ ಬಗ್ಗೆ ಇತರ ಪಾತ್ರಗಳ ಮೂಲಕ ವ್ಯಕ್ತಪಡಿಸುವ ರೋಚಕ ತಿರುವುಗಳಿಂದಾಗಿ  ಆಕರ್ಷಣೀಯವಾಗಿಸುವ ಕಥನತಂತ್ರ... ಎಲ್ಲವೂ ಒಟ್ಟಾಗಿ ಕೃತಿಯನ್ನು ಅತ್ಯುತ್ತಮವಾಗಿಸಿವೆ.

ಒಂದು ಸಂದರ್ಭದಲ್ಲಿ ರಾಣೀವಾಸದ ದಾಸಿ ನೀಲಮ್ಮ ಚಂಪಕರಾಣಿಯನ್ನು ಕುರಿತು ಹೇಳುವ," *ನೀವೀಗ ರಾಣಿಯವರು. ಗಂಭೀರವಾಗಿ ನಡೆದುಕೊಂಡರೆ ಸಾಕು. ಗೊತ್ತಿದ್ದರೂ ಗೊತ್ತಿಲ್ಲದಂತೆ, ಗೊತ್ತಿಲ್ಲದಿದ್ದರೆ ಗೊತ್ತಿದ್ದಂತೆ ವರ್ತಿಸಿ ಸಾಕು.  ಎಲ್ಲವೂ ಸರಾಗವಾಗಿ ನಡೆದುಕೊಂಡು ಹೋಗುತ್ತೆ*" ಎನ್ನುವ ಮಾತುಗಳು ಲೇಖಕರ ಜೀವನಾನುಭವಕ್ಕೆ ಸಾಕ್ಷಿಯಾಗುತ್ತವೆ.

ಐತಿಹಾಸಿಕ ಬರಹಗಾರಿಕೆಯ ವಿಶಿಷ್ಟ ಶೈಲಿಯನ್ನು ಕಾದುಕೊಳ್ಳುತ್ತಲೇ, ಎಲ್ಲ ಐತಿಹ್ಯಗಳ ಬಗ್ಗೆ  ವಿವರಗಳನ್ನು ಸೂಕ್ಷ್ಮವಾಗಿ ಜಾಣ್ಮೆಯಿಂದ ದಾಖಲಿಸುತ್ತ ಹೋಗುವ ನಿಮ್ಮ ಬರವಣಿಗೆ ಓದುಗನನ್ನು ಎಲ್ಲಿಯೂ ನಿರಾಸೆಗೊಳಿಸುವುದಿಲ್ಲ. ಅಷ್ಟೇ ಅಲ್ಲದೆ, ಅದು ಮುಂದಿನ ದಿನಗಳಲ್ಲಿ ನಿಮ್ಮನ್ನು ಅತ್ಯಂತ ಸಂವೇದನಾಶೀಲ, ಭರವಸೆಯ ಬರಹಗಾರನನ್ನಾಗಿ ಎದಿರುನೋಡುವಂತೆ ಒತ್ತಾಯಿಸುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ.

ನನಗೆ ವೈಯಕ್ತಿಕವಾಗಿ ಈ ಕಾದಂಬರಿ ಇನ್ನಷ್ಟು ಆಪ್ತವಾಗಲು, ನನ್ನ ಸಾಗರ, ಇಕ್ಕೇರಿ, ಕೆಳದಿ, ಆನಂದಪುರ ಹಾಗೂ ಸುತ್ತಮುತ್ತ ಪ್ರದೇಶದಲ್ಲಿನ ಬಾಲ್ಯದ ಒಡನಾಟದ ದಿನಗಳೂ ಸಹಾ ಕಾರಣ ಎನ್ನುವುದನ್ನು ನಾನಿಲ್ಲಿ ನಮೂದಿಸಲೇಬೇಕು.

ವಂದನೆಗಳು. ಅಭಿನಂದನೆಗಳು!!
ಇಂತಿ,
ಸೋಮೇಶ್ವರ್. ಹೆಚ್

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...