ಚಂಪಕ ಸರಸ್ಸು ವಿನ 400ನೇ ವಷಾ೯ಚರಣೆ 2025ರಲ್ಲಿ ನಡೆಸ ಬಹುದು, ಚಂಪಕಾಳ ನೆನಪಿಗಾಗಿ ಈ ಚಂಪಕ ಸರಸ್ಸು ನಿಮಿ೯ಸಿ 395 ವರ್ಷ ಆಯಿತು, ಹರೀಶ್ ನವಾತೆ ಎಂಬ ಈ ತಜ್ಞರ ಪ್ರೇರಣೆಯಿಂದ ಸ್ವಚ್ಚತೆ ಮತ್ತು ಈಜು ತರಬೇತಿ ನಿರಂತರವಾಗಿ ನಡೆದಿದೆ.
ಇವರು ಸಾಗರದ ಜೀವ ವಿಮಾದಲ್ಲಿ ಕತ೯ವ್ಯ ನಿವ೯ಹಿಸುತ್ತಿದ್ದರು ಇವರ ಒಂದು ಹವ್ಯಾಸ ಅವರು ಹೋಗುವ ಸ್ಥಳದಲ್ಲಿ ಲಭ್ಯವಿರುವ ಕೊಳ, ಕೆರೆ ಕಟ್ಟಿ ಯಾವುದೇ ಇರಲಿ ಅದನ್ನು ಸ್ಥಳಿಯರಿಂದ ಶುಚಿಗೊಳಿಸಿ ಅವರಿಗೆಲ್ಲ ಸುಲಭವಾಗಿ #ಈಜು ಕಲಿಸುವುದು.
ಕೆಲ ವರ್ಷದ ಹಿಂದೆ ಆನಂದಪುರದ ಚಂಪಕ ಸರಸ್ಸು ಸ್ಥಳಿಯರನ್ನ ಸಂಘಟಿಸಿ ಗುರುತು ಹಿಡಿಯಲಾರದಂತೆ ಕಾಡು ಗಿಡ ಬಳ್ಳಿ ಬೆಳೆದಿದ್ದನ್ನ ಲಕ ಲಕ ಎಂದು ಹೊಳೆಯುವಂತೆ ಶುಚಿಗೊಳಿಸಿ ಸರಳ ಜೀವ ರಕ್ಷಕ ವಸ್ತುಗಳನ್ನ ಸಂಗ್ರಹಿಸಿ ಈಜು ತರಬೇತಿ ಶುರು ಮಾಡಿದರು ಆ ವಷ೯ ನೂರಾರು ಜನ ಯುವಕ/ಯುವತಿಯರು / ಮಕ್ಕಳು ಮತ್ತು ವೃದ್ದರೂ ಸೇರಿ ಈಜು ಕಲಿತರು ಈ ಸಂದಭ೯ದಲ್ಲೇ ನನ್ನ ಮಗನೂ ಈಜು ಕಲಿತ.
ಇವರು ಪ್ರಾರಂಬಿಸಿದ ಈಜು ತರಬೇತಿ ಇವತ್ತಿಗೂ ಮುಂದುವರಿದಿದೆ ಮತ್ತು #ಚಂಪಕ_ಸರಸ್ಸು ಸ್ವಚ್ಚತೆ ಕೂಡ ಇದಕ್ಕಾಗಿ ಆನಂದಪುರದ #ಈಜು_ಮಿತ್ರರ_ಬಳಗ ಮತ್ತು #ಇತಿಹಾಸ_ಪರ೦ಪರೆ_ಉಳಿಸಿ_ಅಭಿಯಾನ_ಸಮಿತಿ ಕಟಿಬದ್ದವಾಗಿದೆ.
ಹಾಗಾಗಿಯೆ ನನ್ನ ಕಾದಂಬರಿ #ಬೆಸ್ತರರಾಣಿ_ಚಂಪಕ ಇವರಿಗೆ ಅಪಿ೯ಸಲಾಗಿದೆ. ಕೆಳದಿ ಸಾಮ್ರಾಜ್ಯದ ದುರಂತ ರಾಣಿ ಚಂಪಕಳ ಸ್ಮಾರಕ 2025 ಕ್ಕೆ ನಿಮಾ೯ಣಗೊಂಡು 400 ವರ್ಷ ಆಗಲಿದೆ ಇವತ್ತಿಗೆ 395 ವರ್ಷ ಪೂರೈಸಿದೆ ಇದೆಲ್ಲ ಒಂದು ರೀತಿ ಯೋಗಾ ಯೋಗಾ ಮತ್ತು ಕಾಕತಾಳಿಯವಲ್ಲವೆ!?
Comments
Post a Comment