ಬಳ್ಳಿ ಕಾಳ ಬೆಳ್ಳಿ ಕಾದಂಬರಿಯಲ್ಲಿ ಪ್ರಖ್ಯಾತ ಲೇಖಕ ಕೆ.ಎನ್.ಗಣೇಶಯ್ಯ ಕೆಳದಿ ಸಂಶೋದಕ ಗುಂಡಾಜೋಯಿಸ್ ಇಟಲಿ ಮಾಫಿಯಾಗೆ ಮಾಹಿತಿ ನೀಡುವ ವಿಲನ್ ಎಂಬುದಾಗಿ ಚಿತ್ರಿಸಿದ್ದಾರೆ ಇದು ವಯೋವೃದ್ದ ಕೆಳದಿ ಇತಿಹಾಸ ಸಂಶೋದಕರಾದ ಕೆಳದಿ ಗುಂಡಾಜೋಯಿಸರ ತೇಜೋವದೆ ಮಾಡಿದಂತೆ.
#ಕೆ_ಎನ್_ಗಣೇಶಯ್ಯರ_ಬಳ್ಳಿಕಾಳ_ಬೆಳ್ಳಿ
ಗಣೇಶಯ್ಯರ ಕಥೆಗಳೆಂದರೆ ಥ್ರಿಲ್ಲಿ೦ಗ್, ಸಸ್ಪೆನ್ಸ್,ಹಿಡಿದ ಪುಸ್ತಕ ಮುಗಿಯುವವರೆಗೆ ಕೈ ಬಿಡಲಾಗುವುದಿಲ್ಲ ನಾನು ಅವರ ಅಭಿಮಾನಿಯೇ.
ಇವರು 2017ರಲ್ಲಿ ಪ್ರಕಟಿಸಿರುವ #ಬಳ್ಳಿಕಾಳ_ಬೆಳ್ಳಿ ಕಾದಂಬರಿ ನಮ್ಮ ಜಿಲ್ಲೆಯ ಮತ್ತು ಉ.ಕ.ಜಿಲ್ಲೆಯನ್ನ ಕೇಂದ್ರವಾಗಿ ಆಡಳಿತ ನಡೆಸಿದ ಕಾಳು ಮೆಣಸಿನ ರಾಣಿ ಚೆನ್ನಾ ಬೈರಾದೇವಿಯ ನಿದಿ ಶೋದನೆಗೆ ಬರುವ ಇಟಲಿಯ ಮಾಫಿಯಾದ ಪ್ರಯತ್ನ ಭಾರತ ಸಕಾ೯ರ ವಿಫಲಗೊಳಿಸುವ ಕಥೆ.
ಇದರಲ್ಲಿ ಇಟಲಿ ಮಾಫಿಯಾಗೆ ಸಹಾಯ ಮಾಡುವ ಖಳನಾಯಕನ ಹೆಸರು #ಗುಂಡಾ_ಜೋಯಿಸ್ ಮತ್ತು "ಈತ ಕೆಳದಿಯ ಬಗ್ಗೆ ಕೆಲವು ಉತ್ಪ್ರೇಕ್ಷೆಯಿ೦ದ ತುಂಬಿದ ಲೇಖನಗಳನ್ನು ಬರೆದಿದ್ದನಾದ್ದರಿಂದ ಅವನನ್ನ ಮಾಫಿಯಾದವರು ತಮ್ಮ ವ್ಯಕ್ತಿ ಮಾಕೊ೯ಸ್ ಗೆ ಪರಿಚಯಿಸುತ್ತಾರೆ" (ಪುಟ ಸಂಖ್ಯೆ 239) ಎಂಬ ವಿಶ್ಲೇಷಣೆ ಇದರಲ್ಲಿದೆ ಅಂದರೆ ಈ ಪಾತ್ರ ಕೆಳದಿ ಗುಂಡಾ ಜೋಯಿಸರೇ ಎಂದು ಒಪ್ಪುವಂತ ವಿಶ್ಲೇಷಣೆ ಇದಾಗಿದೆ ?!
ಇದು ಸಾಗರ ತಾಲ್ಲೂಕಿನ ವಯೋವೃದ್ದ ಸಂಶೋದಕರಾದ ಕೆಳದಿ ಗುಂಡಾಜೋಯಿಸರನ್ನೆ ಇವರು ವಿಲನ್ ಮಾಡಿದ್ದಾರಾ? ಎಂಬ ಅನುಮಾನ ಈ ಪುಸ್ತಕ ಓದಿದವರಿಗೆ ಅನ್ನಿಸದೇ ಇರಲಾರದು.
ಇದು ಕೆಳದಿ ಗುಂಡಾ ಜೋಯಿಸರ ಅಭಿಮಾನಿಗಳಾದ ನಮಗೇ ನೋವುಂಟು ಮಾಡುತ್ತಿದೆ. ಈ ಬಗ್ಗೆ ಲೇಖಕರ ಸ್ಪಷ್ಟನೆ ಮತ್ತು ಕೆಳದಿ ಗುಂಡಾ ಜೋಯಿಸರ ಕುಟುಂಬದ ಅಭಿಪ್ರಾಯ ತಿಳಿದು ಬಂದಿಲ್ಲ.
ಇದರ ಬಗ್ಗೆ ಯಾರಾದರೂ ಹೆಚ್ಚಿನ ಮಾಹಿತಿ ತಿಳಿಸಬಹುದಾ?
Comments
Post a Comment