#ಉಪ್ಪಾಗೆ_ತುಪ್ಪ_ಸಿಕ್ಕಿತು.
ಇದು ಸಸ್ಯಹಾರಿ ತುಪ್ಪಾ ಸಾಮಾನ್ಯವಾಗಿ ಪಶು ಸಂಗೋಪನಾ ತುಪ್ಪ ಮಾತ್ರ ಉತ್ಪಾದನೆ ಮತ್ತು ಮಾರಾಟಕ್ಕೆ ಸಿಗುತ್ತೆ.
ಪಶ್ಚಿಮ ಘಟ್ಟದಲ್ಲಿ ಹೆಚ್ಚಾಗಿರುವ ಉಪ್ಪಾಗೆ ಮರದ ಹಣ್ಣಿನ ಬೀಜ ಜಜ್ಜಿ ನೀರಲ್ಲಿ ಬೇಯಿಸಿದಾಗ ಅದರ ಕೊಬ್ಬು ಹೊರ ಬರುತ್ತೆ ಅದನ್ನು ತೆಗೆದು ಪುನಃ ಕುದಿಸಿ ಅದರಲ್ಲಿನ ನೀರು ಆವಿ ಆಗಿಸಿದರೆ ಉಳಿಯುವುದೇ ಉಪ್ಪಾಗೆ ತುಪ್ಪ.
ವಿದೇಶಿ ಮಿತ್ರ ವೇಗನ್ (ಪ್ರಾಣಿ ಜನ್ಯ ಯಾವುದೇ ಹಾಲು, ತುಪ್ಪ ಮತ್ತು ಮಾ೦ಸ ಜೀವಮಾನದಲ್ಲಿ ಬಳಸದವರು) ಅವರಿಗಾಗಿ ಈ ಸಸ್ಯಜನ್ಯ ತುಪ್ಪಕ್ಕೆ ಹುಡುಕಾಟ ಮಾಡಿದಾಗಲೇ ಗೊತ್ತಾಗಿದ್ದು ಇದು ಈಗ ಜನ ಬಳಕೆ ಮರೆತ ಪದಾಥ೯ ಅಂತ.
ಇದರ ರುಚಿ ಸುವಾಸನೆ ಅದ್ಬುತ ಕೂಡ ಹಾಗಾಗಿ ಮೂರು ತಿಂಗಳ ಹಿಂದೆ "ಆತ್ಮ ನಿಬ೯ರ ಸ್ವದೇಶಿ" ಎಂಬ FB ಗುಂಪಿನಲ್ಲಿ ಉಪ್ಪಾಗೆ ತುಪ್ಪಾ ಸಿಗುತ್ತಾ? ಅಂತ ಪ್ರಶ್ನೆ ಪೋಸ್ಟ್ ಮಾಡಿದ್ದೆ ಅದಕ್ಕೆ ಬಂದ ಪ್ರತಿಕ್ರಿಯೆ ಹಾಗೆಂದರೇನು ಅಂತ ಪ್ರಶ್ನೆಗಳ ಸುರಿಮಳೆ.
ಅದರಲ್ಲಿ ಸಿಸಿ೯ಯ ವೀಣಾ ಹೆಗ್ಗಡೆ ಎಂಬ ಸಹೋದರಿ ಈ ಸಾಹಸಕ್ಕೆ ಒಪ್ಪಿ ಸ್ವತಃ ಉಪ್ಪಾಗೆ ತುಪ್ಪಾ ತಯಾರಿಸಿ ಕಳಿಸಿದ್ದರು ಅದು ಉತ್ಕೃಷ್ಟ ದಜೆ೯ಯ ದು ಈಗ ಎರಡನೇ ಬಾರಿ ಅವರಿಂದ ಖರೀದಿಸಿದ್ದೇನೆ ಕಿಲೋಗೆ 800 + ಕೋರಿಯರ್ ವೆಚ್ಚ ಪ್ರತ್ಯೇಕ.
ಈ ತುಪ್ಪಾ ಬೇಕಾದವರು ಅವರನ್ನ ಸಂಪಕಿ೯ಸ ಬಹುದು ಅವರ ವಾಟ್ಸಪ್ 9482429404.
Comments
Post a Comment