ಆನಂದಪುರದ ಇತಿಹಾಸದ ಬಗ್ಗೆ ನಮಗೆಲ್ಲ ತಿಳಿಸಿ, ಇತಿಹಾಸದ ಸ್ಮಾರಕ ರಕ್ಷಣೆಗೆ ನಮಗೆಲ್ಲ ತಯಾರು ಮಾಡಿದ್ದ ಜಯದೇವಪ್ಪ ಜಿನಕೇರಿಯವರಿಗೆ ಅಂತಿಮ ನಮನಗಳು.
#ಜಯದೇವಪ್ಪ_ಜಿನಕೇರಿಯವರಿಗೆ
ಇತ್ತೀಚಿಗೆ ಇವರನ್ನ ಬೇಟಿ ಮಾಡಬೇಕು ಅಂದುಕೊಂಡಿದ್ದು ಲಾಕ್ ಡೌನ್ ಕಾರಣದಿಂದ ಸಾಧ್ಯವಾಗಲಿಲ್ಲ.
1995-2000 ಇಸವಿ ಅವಧಿಯಲ್ಲಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಇವರ ಒಡನಾಟ ಹೆಚ್ಚು ಕಾರಣ ಇವರು ಮತ್ತು ಇವರ ಜೊತೆ ಶಾಸ್ತ್ರೀಗಳು ನನಗೆ ಆನಂದಪುರದ ಇತಿಹಾಸದ ಬಗ್ಗೆ ಹೆಚ್ಚು ಮಾಹಿತಿ ನೀಡಿದವರು.
ಶ್ರೀ ನಿರಂಜನ ಮುರುಘ ರಾಜೇಂದ್ರ ಸ್ವಾಮಿಗಳು ಪ್ರಕಟಿಸಿದ ಕೆಳದಿ ಸಮಗ್ರ ಅಧ್ಯಯನ ಗ್ರಂಥ ಮತ್ತು ಆನಂದಪುರದ ಮುರುಘಾ ಮಠದಲ್ಲಿ ಸ್ಥಾಪಿಸಿರುವ ಕೆಳದಿ ವಸ್ತುಸಂಗ್ರಹಾಲಯಕ್ಕೆ ಇವರ ಶ್ರಮವಿದೆ.
ಇವರು ನನಗೆ ವಹಿಸಿದ ಆನಂದಪುರ ಸಮೀಪದ ಹೊಸಗುಂದದ ಕಲ್ಲೇಶ್ವರ ದೇವಸ್ಥಾನಕ್ಕೆ ಅಂಟಿಕೊಂಡು ಆಕಾಶದೆತ್ತರಕ್ಕೆ ಬೆಳೆದ ನೀರೊಟ್ಟೆ ಮರ ತೆಗೆಸಿ ಈ ದೇವಸ್ಥಾನ ಉಳಿಸುವುದು ಇದನ್ನು 1998ರಲ್ಲಿ ಅವರ ಅಭಿಲಾಷೆಯ೦ತೆ ಎಲ್ಲರ ಸಹಕಾರದಲ್ಲಿ ನಾನು ನೇತೃತ್ವ ವಹಿಸಿ ಮಾಡಿದ್ದೆ.
ಇನ್ನೊಂದು ಆನಂದಪುರಂ ನಲ್ಲಿ ಕೆಳದಿ ರಾಜ ವೆಂಕಟಪ್ಪ ನಾಯಕ ರಾಣಿ ಚಂಪಕಳ ಸ್ಮರಣಾಥ೯ ನಿರ್ಮಿಸಿರುವ ಚಂಪಕ ಸರಸ್ಸು ಪ್ರವಾಸಿ ಕೇಂದ್ರವಾಗಿಸುವುದು ಈ ಕೆಲಸ ಮಾತ್ರ ನಮ್ಮಿಂದ ಸಾಧ್ಯವಾಗಿಲ್ಲ.
ಇದೇ ತಿಂಗಳು ಬಿಡುಗಡೆ ಆದ ನನ್ನ ಕಾದಂಬರಿ "ಬೆಸ್ತರ ರಾಣಿ ಚಂಪಕಾ" ಅವರಿಗೆ ತಲುಪಿಸುವ ಮೊದಲೇ ಅವರಿಲ್ಲ.
ಅವರ ಆತ್ಮಕ್ಕೆ ಶಾಂತಿ ಕೋರುತ್ತಾ.
Comments
Post a Comment