#ಜಾದುಗಾರ್_ಪ್ರಶಾಂತ್_ಹೆಗ್ಗಡೆ
ನನ್ನ #ಬೆಸ್ತರರಾಣಿ_ಚಂಪಕಾ ಓದಿ ವಿಮಶೆ೯ ಮಾಡಿದ್ದಾರೆ .
ಪ್ರಖ್ಯಾತ ಜಾದುಗಾರರಾಗಿ ನಾಡಿನಾದ್ಯಂತ ಜಾದು ಪ್ರದಶ೯ನ ನೀಡುವ ಪ್ರಶಾಂತ್ ಹೆಗ್ಗಡೆ ಮಲೆನಾಡಿನವರು ಈಗ ಶಿವಮೊಗ್ಗ ಪಟ್ಟಣ ವಾಸಿ ಇವರು ಬಾಲ್ಯದಲ್ಲಿ ಆನಂದಪುರಂ ನಲ್ಲಿ ರಜಾ ದಿನ ಕಳೆಯುತ್ತಿದ್ದರಂತೆ.
ಆಗ ಆನಂದಪುರಂ ಪ್ರಖ್ಯಾತ #ಕೋಮಲಾ_ವಿಲಾಸ್ ಹೋಟೆಲ್ ನ ಮಾಲಿಕರಾದ ಕಿಣಿ ರಾಯರು ಮತ್ತು #ಜಯವೀರ_ನಾಯಕ್ ಇವರ ಬಂದುಗಳು.
ಇವರ ಜಾದು ಪ್ರದಶ೯ನ ಆಯೋಜಿಸುವುದಿದ್ದರೆ ಇವರ ಸೆಲ್ ನಂಬರ್ 9844183344 ಗೆ ಸಂಪಕಿ೯ಸಿ.
ಬೆಸ್ತರ ರಾಣಿ ಚಂಪಕಾ
ಧನ್ಯವಾದ ಗಳು ಮಿತ್ರರಾದ ,Arun Prasad ರವರಿಗೆ.
ತಾವು ಕಳಿಸಿದ ಪುಸ್ತಕ ಕೈ ಸೇರಿತು.
ಇದರ ಬಗ್ಗೆ ನನಗೆ ಅನ್ನಿಸಿದ್ದನ್ನು ಬರೆದಿರುವೆ.
ಸುಮಾರು 1610 ರಲ್ಲಿ ನಡೆದಿರಬಹುದು ಎನ್ನಲಾದ ರಾಜಾ ವೆಂಕಟಪ್ಪ ನಾಯಕರ ಒಂದು ಪ್ರೇಮ ಕಥಾನಕ ದ ವಿಸ್ತಾರ ರೂಪವೇ ಬೆಸ್ರರಾಣಿ ಚಂಪಕಾ.
ಚಂಪಕಾ ಳ ರಂಗೋಲಿ ಕಲೆಗೆ ಮಾರುಹೋಗಿ ಆಕೆಯ ಪ್ರೇಮದಲ್ಲಿ ಮುಳುಗಿ ರಾಜರು ಆಕೆಯನ್ನು ವಿವಾಹವಾಗುವ ತನಕವೂ ಮುಂದುವರೆಯುತ್ತದೆ .
ಮೊದಲೇ ಪುತ್ರಶೋಕದಿಂದ ನೊಂದಿದ್ದ ರಾಜರ ಮನ ಪರಿವರ್ತನೆ ಗಾಗಿ ಆಸ್ಥಾನದ ಸಿಬ್ಬಂದಿ ಕೂಡ ಇವರಿಬ್ಬರ ವಿವಾಹಕ್ಕೆ ಸಹಕರಿಸುತ್ತಾರೆ.ನಂತರದ ವಿಷಯಗಳೆ ಬಹಳ ಕುತೂಹಲ ಕಾರಿ.
ಚಂಪಕಾ ಳು ತನ್ನದಲ್ಲದ ತಪ್ಪಿಗಾಗಿ ಎಲ್ಲರಿಂದಲೂ ಅವಹೇಳನ ಎದುರಿಸಬೇಕಾಗುತ್ತದೆ. ಮನವನ್ನು ಕಲಕುವ ದುರಂತ ಕಥಾನಕ.
ಯಡೆಹಳ್ಳಿಯಿಂದ ಆನಂದಪುರ ವಾದ ಬಗೆಯನ್ನು ಲೇಖಕರು ಬಹಳ ಚೆನ್ನಾಗಿ ಬಣ್ಣಿಸಿದ್ದಾರೆ. ಆಕೆಯ ನೆನಪಿಗಾಗಿ ಕಟ್ಟಿಸಿದ ಚಂಪಕ ಸರಸ್ಸು ಇಂದಿಗೂ ನಮಗೆ ನೋಡಲು ಸಿಗುತ್ತದೆ.
ಕೇರಳದ ಆನಂದಪುರ ದ ಅನಂತ ಪದ್ಮನಾಭ ದೇವಾಲಯ ದ ನಿರ್ಮಾಣ, ಅಲ್ಲಿಯವರೆಗೂ ರಾಜಾ ವೆಂಕಟಪ್ಪ ನಾಯಕರ ಆಳ್ವಿಕೆಗೆ ಒಳಪಟ್ಟಿದನ್ನು ತಿಳಿಸುತ್ತದೆ.
ಮೊದಲಿನಿಂದ ಕೊನೆಯವರೆಗೂ ಸರಾಗವಾಗಿ ಓದಿಸಿಕೊಂಡು ಹೋಗುವ ಹಾಗೆ ಬರೆದಿದ್ದಾರೆ ಲೇಖಕರಾದ ಅರುಣ್ ಪ್ರಸಾದ್ ರವರು.
ಮುಂದಿನ ದಿನಗಳಲ್ಲಿ ಅವರಿಂದ ಬಾರಾಪಂಥಿ ಸನ್ಯಾಸಿ ಗಳ ಬಗ್ಗೆ ಕೂಡ ಪುಸ್ತಕ ಮೂಡಿ ಬರಲಿ ಎನ್ನುವುದು ನನ್ನ ಬಯಕೆ.
ಲೇಖಕರ ಪ್ರಯತ್ನ ಕ್ಕೆ ಶುಭವಾಗಲಿ ಎಂದು ಹಾರೈಸುತ್ತಾ ವಂದನೆಗಳೊಂದಿಗೆ
ಪ್ರತಿಗಳಿಗಾಗಿ ಶಿವಮೊಗ್ಗ ದ ಡಯಾನ ಹಾಗೂ ಸಾಗರದ ಶ್ರೀ ಟ್ರೇಡರ್ಸ್ ನಲ್ಲಿ ದೊರೆಯುತ್ತದೆ
Comments
Post a Comment