ಮ.ರಾ. ಹೆಗ್ಗಡೆ ಮೂಲ ಸಾಗರ ತಾಲ್ಲೂಕಿನ ಅರಲುಗೋಡಿನವರು ಈಗ ಶಿರಾಳಕೊಪ್ಪದಲ್ಲಿ ನೆಲೆಸಿದ್ದಾರೆ, ಪ್ರಖ್ಯಾತ M N ಪಿಕಲ್ಸ್ ಸಂಸ್ಥೆಯಲ್ಲಿ ವ್ಯವಸ್ಥಾಪಕರಾಗಿದ್ದರು ಈಗ ಸ್ವಯ೦ ಉದ್ಯೋಗ ಮತ್ತು ಕೃಷಿ ಸಂಬಂದಿತ ಪಾರಂ ನಡೆಸುತ್ತಿದ್ದಾರೆ.
ಸಾಗರ ತಾಲ್ಲೂಕು ಆನಂದಪುರದಲ್ಲಿ ನೆಲೆಸಿರುವ ಉತ್ಸಾಹೀ ಉದ್ಯಮಿ ಹಾಗೂ ಶಿವಮೊಗ್ಗ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಾನ್ಯಶ್ರೀ|| ಅರುಣ್ ಪ್ರಸಾದ ರವರು ಹತ್ತುವರ್ಷಗಳ ಹಿಂದೆಯೇ ಬರೆದು, ಮೊನ್ನೆ ಮೊನ್ನೆಯಷ್ಟೇ ಮುದ್ರಿಸಿ ಪ್ರಕಾಶಿಸಿದ 'ಕಾಲ್ಪನಿಕ ಕಥಾಹಂದರ'ವೆಂಬ ಚೌಕಟ್ಟಿನ #ಬೆಸ್ತರ_ರಾಣಿ_ಚಂಪಕಾ ಹೆಸರಿನ ಐತಿಹಾಸಿಕ ಕಾದಂಬರಿ ಪುಸ್ತಕವನ್ನು
ಕೆಳದಿ ಸಾಮ್ರಾಜ್ಯದ ರಾಜಾ ವೆಂಕಟಪ್ಪ ನಾಯಕನ ಸ್ವಚ್ಛ, ಜನಪರ, ನ್ಯಾಯಪರ, ಸುದೀರ್ಘ ಆಳ್ವಿಕೆಯ ಕಾಲದಲ್ಲಿ ಆಗಿಹೋಗಿರುವ ಅತ್ಯವಶ್ಯಕವಾಗಿ ದಾಖಲಾಗಲೇಬೇಕಾದ ಐತಿಹಾಸಿಕ ಸತ್ಯವೊಂದು, ಕೇವಲ ಹುಟ್ಟು ಮತ್ತು ಆಹಾರಪದ್ಧತಿಯ ಕಾರಣದಿಂದ, ಇತಿಹಾಸಕಾರರ ಅವಗಣನೆಗೆ ಸಿಲುಕಿ, ಸುಮಕೋಮಲ_ಮುಗ್ಧ ಮನಸ್ಸಿನ ನಿಷ್ಕಲ್ಮಶ ಹೃದಯದ ಹೆಣ್ಣೊಬ್ಬಳ 'ತ್ಯಾಗಸದೃಶ ಜೀವನ'ವು ಇತಿಹಾಸದ ಪುಟಗಳಲ್ಲಿ ಉಲ್ಲೇಖಿತವಾಗದಿರುವ 'ಅಚ್ಚರಿ'ಯನ್ನು ಮನಗಂಡ #ಅರುಣಪ್ರಸಾದ್ ರವರು, ಆಕೆಯ ಬವಣೆಯ ಬದುಕಿನ ಬೆರಗನ್ನು ಕಾದಂಬರಿಯಾಗಿಸಿ #ಬೆಸ್ತರ_ರಾಣಿ_ಚಂಪಕಾ ಎಂಬ ಶೀರ್ಷಿಕೆಯಡಿಯಲ್ಲಿ ಕಲ್ಪನೆಗಳು ಕಣ್ಕೋರೈಸುವಂತೆ, ಯಾರೊಬ್ಬರ ಮನಸ್ಸಿಗೂ ಘಾಸಿಯಾಗದಂತೆ, ಇತಿಹಾಸಕ್ಕೆ ಅಪಚಾರವಾಗದಂತೆ, ಮಾನವೀಯ ಮೌಲ್ಯಗಳಿಗೆ ಬೆಳಕೀಯುವಂತೆ, ಸರಳ_ಸುಂದರ ಹಾಗೂ ನವಿರಾದ ಶೈಲಿಯಲ್ಲಿ ಬರೆದು ಲೋಕಮುಖಕ್ಕೆ ಪರಿಚಯಿಸುವುದರ ಮೂಲಕ ತಾನೊಬ್ಬ 'ಸಮರ್ಥ ಲೇಖಕ' ಎಂಬುದನ್ನು ತಮ್ಮ ಎಂದಿನ ವಿನೀತಭಾವದಿಂದಲೇ ನಿರೂಪಿಸಿ ತೋರಿಸಿಕೊಟ್ಟಿದ್ದಾರೆ.
ಲೇಖಕರು ತಮ್ಮ ಚಿಕ್ಕ ಬರಹದಲ್ಲಿ ವಿಸ್ತ್ರೃತ ವಿಷಯಗಳನ್ನು ಶಬ್ದಾಡಂಬರವಿಲ್ಲದೆ ಅತಿಶಯವೆಂದೆನಿಸದೆ, ಸುಲಭವಾಗಿ ಓದಿಸಿಕೊಂಡುಹೋಗುವ ರೀತಿಯಲ್ಲಿ ರಚಿಸಿರುವುದನ್ನು 'ಸಹೃದಯ ವಾಚಕ ವಿಶಾರದರು' ಗಮನಿಸಬಹುದು.
#ಕನ್ನಡ_ವಾಙ್ಮಯ_ಓದುಗ_ಬಳಗವು
ಈ ಪುಸ್ತಕವನ್ನು ಖರೀದಿಸಿ ಓದಿ ಸುಖಿಸಿ ವಿಮರ್ಶಿಸಿ ಲೇಖಕರನ್ನು ಉತ್ತೇಜಿಸಿ, "ಕನ್ನಡ ಸಾಹಿತ್ಯ
ಸಿಂಧು"ವಿಗೆ ತಮ್ಮ ಹೃನ್ಮನದ 'ಬಹುಬಿಂದುಗಳ ಬಾಗಿನ'ಗಳನ್ನರ್ಪಿಸಿ, 'ನುಡಿಸೇವೆ' ಸಲ್ಲಿಸುವ ಸತ್ಕಾರ್ಯಕ್ಕೆ ಮನಮಾಡಬೇಕೆಂಬ 'ನಮ್ರ ಕೋರಿಕೆ' ಗೈದು ವಿರಮಿಸುತ್ತಿದ್ದೇನೆ.
__ಮ.ರಾ.ಹೆಗಡೆ, ಸಂಪ.
9449170212.
Comments
Post a Comment