#ಗ್ರಾಮ ಪಂಚಾಯತ ಗಳು ಗ್ರಾಮ ಸ್ವಚ್ಚ ತೆಗೆ ಪ್ರಾಮುಖ್ಯತೆ ನೀಡದಿ ರಲು ಕಾರಣ ಗಳು.# ಹಿಂದೆ ವಿಲೇಜ್ ಪಂಚಾಯತಗಳು ಅಸ್ತಿತ್ವದಲ್ಲಿ ಇದ್ದಾಗ ಹಳ್ಳಿಯ ಮುಖ್ಯ ಭಾಗಗಳನ್ನ ನಿತ್ಯ ಗುಡಿಸಿ ಕಸ ವಿಲೇವಾರಿಗೆ ಜನರನ್ನ ನೇಮಿಸಲು ಅವರಿಗೆ ಸಂಬಳ ನೀಡಲು ಅವಕಾಶ ಇತ್ತು, ಅವರುಗಳು ಹಳ್ಳಿಯಲ್ಲಿ ಸತ್ತ ನಾಯಿ, ದನಗಳನ್ನು ತೆಗೆದು ಹಳ್ಳಿಯ ನೈಮ೯ಲ್ಯ ಕಾಪಾಡುತ್ತಿದ್ದರು ಆದರೆ ಪಂಚಾಯತ್ ರಾಜ್ ಕಾಯ್ದೆ ಬಂದು ಗ್ರಾಮ ಪಂಚಾಯತ್ ಅಸ್ತಿತ್ವಕ್ಕೆ ಬಂದ ಮೇಲೆ ಹಳ್ಳಿಯ ಸ್ವಚ್ಚತೆಗೆ ಯಾರನ್ನೂ ನೇಮಿಸಲು ಅಥವ ಈ ಬಗ್ಗೆ ಹಣ ಖಚು೯ ಮಾಡಲು ಅವಕಾಶವಿಲ್ಲ. ಆದರೆ ಕಂದಾಯ ವಶೀಲಿಗೆ, ರೋಜಗಾರ ಯೋಜನೆ ಅನುಷ್ಟಾನಕ್ಕೆ, ನೀರು ಸರಬರಾಜು ಮಾಡಲು ನೌಕರರ ನೇಮಕಾತಿಗೆ ಅವಕಾಶವಿದೆ ಇದರಿಂದ ಯಾವುದೇ ಹಳ್ಳಿಗೆ ಹೋಗಿ ರಸ್ತೆ ಬದಿಯಲ್ಲಿ ಸತ್ತ ನಾಯಿ, ದನ ಅಲ್ಲೆ ಕೊಳೆತು ಕರಗಿ ಮಣ್ಣಾಗಿ ಹೋಗುವ ದೃಷ್ಯ ಕಾಣಬಹುದು. ಇದರ ಮಧ್ಯ ಗ್ರಾಮ ಪಂಚಾಯತಗಳಿಗೆ ಸ್ವಚ್ಚತೆಗಾಗಿ ಪ್ರಶಸ್ತಿ ನೀಡುವ ಕೇಂದ್ರ ಸಕಾ೯ರ, ರಾಜ್ಯ ಸಕಾ೯ರ ಮತ್ತು ಜಿಲ್ಲಾ ಪಂಚಾಯತಗಳು ಯಾವ ಮಾನದಂಡದಲ್ಲಿ ಪ್ರಶಸ್ತಿ ನೀಡುತ್ತದೆ ಎಂಬುದು ಉತ್ತರವಿಲ್ಲದ ಪ್ರಶ್ನೆ. ಇತ್ತೀಚಿಗೆ ಪಟ್ಟಣ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆ ರದ್ದಾಗಿದೆ ಆದರೆ ಅಲ್ಲಿ ಮಾರಾಟ ಮಾಡಲು ಅನುಮತಿ ರದ್ದಾಗಿರುವ ಪ್ಲಾಸ್ಟಿಕಗಳು ಹಳ್ಳಿಗಳ ಅಂಗಡಿಗಳಲ್ಲಿ ಸ್ವಚ್ಚOದವಾಗಿ ಲಭ್ಯವಿದೆ. ಸಕಾ೯ರ ...