ಜೋಗ್_ಪಾಲ್ಸ್_ನಲ್ಲಿದೆ ರಾಜಾ_ಕಲ್ಲು ಮಡಿಕೇರಿ_ರಾಜಾಸೀಟ್_ನಂತೆ ಜೋಗ್ ಫಾಲ್ಸ್ ನ ರಾಜಾ ಕಲ್ಲು ಮತ್ತು ಮಡಿಕೆರೆಯ ರಾಜಾ ಸೀಟ್ ಗೆ ರಾಜರುಗಳ ನಂಟಿದೆ,ಸಾಮ್ಯತೆ ಇದೆ. ನೀವು ಜೋಗ್ ಫಾಲ್ಸ್ ಗೆ ಹೋದಾಗ ರಾಜಾ ಕಲ್ಲು ಪ್ರದೇಶಕ್ಕೆ ಬೇಟಿ ನೀಡಿದ್ದಿರಾ? ನಿಮಗೆ ಈ ಸ್ಥಳದ ಬಗ್ಗೆ ಮಾಹಿತಿ ಗೊತ್ತಿತ್ತಾ? ... ಆದರೆ ಜೋಗ್ ಫಾಲ್ಸ್ ಅಬ್ಬರದಲ್ಲಿ ಇದು ಪ್ರವಾಸಿಗರಿಗೆ ಗೊತ್ತೇ ಇಲ್ಲ. ರಾಜಾಸೀಟ್ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿರುವ ಅತ್ಯಂತ ಪ್ರಸಿದ್ಧ ಹಾಗೂ ಸುಂದರ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಕೊಡಗನ್ನು ಆಳಿದ ಕೆಳದಿ ವಂಶಸ್ಥರಾದ #ಹಾಲೇರಿ_ರಾಜರು ತಮ್ಮ ರಾಣಿಯರೊಂದಿಗೆ ಸಂಜೆಯ ವೇಳೆ ವಿಶ್ರಾಂತಿ ಪಡೆಯಲು ಹಾಗೂ ಸೂರ್ಯಾಸ್ತದ ಸುಂದರ ನೋಟವನ್ನು ಕಣ್ತುಂಬಿಕೊಳ್ಳಲು ಅಲ್ಲಿಗೆ ಬರುತ್ತಿದ್ದರು. ಆದ್ದರಿಂದ ಅದಕ್ಕೆ ‘ರಾಜಾಸೀಟ್’ (ರಾಜನ ಆಸನ) ಎಂಬ ಹೆಸರು ಬಂದಿದೆ. ಇದೇ ರೀತಿ ಇತಿಹಾಸ ಇರುವ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತದ ಸಮೀಪವಿರುವ #ರಾಜಾ'ಕಲ್ಲು ಒಂದು ಸುಂದರ ಹಾಗೂ ಐತಿಹಾಸಿಕ ವೀಕ್ಷಣಾ ತಾಣವಾಗಿದೆ. ಈ ಸ್ಥಳವು ಮೈಸೂರಿನ ಮಹಾರಾಜರಾದ #ನಾಲ್ವಡಿ_ಕೃಷ್ಣರಾಜ_ಒಡೆಯರ್ ಅವರ ನೆಚ್ಚಿನ ವೀಕ್ಷಣಾ ತಾಣವಾಗಿತ್ತು. 1939 ರಲ್ಲಿ ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶರಾವತಿ ಕಣಿವೆಯ...