Skip to main content

4142.ಹಿಮಾಲಯಕ್ಕೆ_ಹೋಗುವುದಕ್ಕಿಂತ_ಮೊದಲು_ನಿಮ್ಮ_ಮನೆಯನ್ನು_ಹಿಮಾಲಯವಾಗಿಸಿ!...ಬ್ರಾಹ್ಮಿ_ಮಹೂರ್ತದ_ಸಮಯದ_ಸದುಪಯೋಗ.


ಹಿಮಾಲಯಕ್ಕೆ_ಹೋಗುವುದಕ್ಕಿಂತ_ಮೊದಲು_ನಿಮ್ಮ_ಮನೆಯನ್ನು_ಹಿಮಾಲಯವಾಗಿಸಿ!...
ಬ್ರಾಹ್ಮಿ_ಮಹೂರ್ತದ_ಸಮಯದ_ಸದುಪಯೋಗ.

   ಅನೇಕ ಗೆಳೆಯರು ಈ ವರ್ಷದ ಶ್ರಾವಣ ಮಾಸದ ನಿಮ್ಮ ಹೊಸ ಪ್ರಯೋಗ ಏನು? ಅಂತ ಕೇಳುತ್ತಿದ್ದಾರೆ.

   ಈ ವರ್ಷ ಶ್ರಾವಣ ಮಾಸ 13- ಆಗಸ್ಟ್ -2026 ರ ಗುರುವಾರದಿಂದ ಪ್ರಾರಂಭ ಆಯಿತು ಈ ವರ್ಷ ನನ್ನ ಹೊಸ ಪ್ರಯೋಗ #ಬ್ರಾಹ್ಮಿ_ಮಹೂರ್ತದ_ಸಮಯದ ಸದುಪಯೋಗದ ದ ಕೆಲಸ ಪ್ರಾರಂಬಿಸಿ ಇವತ್ತಿಗೆ 25 ಆಗಸ್ಟ್ ಗೆ 13 ದಿನ ಆಯಿತು.

  ಬೆಳಿಗ್ಗೆ 3.30 ಕ್ಕೆ ಏಳುವುದು, ಸ್ನಾನ ಮುಗಿಸಿ ಪೂಜೆ - ಮಂಗಲಾರತಿ ನಂತರ ಸಿದ್ದ ಸಮಾದಿಯೋಗದ ವಿಭಾಗಿಯಾ ಪ್ರಾಣಯಾಮ,ಮುದ್ರಾ ಪ್ರಾಣ ಯಾಮ_ನಾಡಿಶೋಧನಾ / ಸುಖ ಪ್ರಾಣಯಾಮ - ಕಪಾಲಭಾತಿ - 15 ನಿಮಿಷದ ಧ್ಯಾನ ನಂತರ ಓದು ಬರಹ, ಶಂಭೂ ರಾಮನ ಜೊತೆ ಒಂದು ಗಂಟೆ ವಾಕಿಂಗ್.

   ಒಂದು ಮುಷ್ಟಿ ಮೆಂತೆ -ಹೆಸರುಕಾಳಿನ ಮೊಳಕೆ, 8-10 ಒಣ ಖರ್ಜೂರ ಮತ್ತು ಒಂದು ಕಪ್ ಹಾರ್ಲಿಕ್ಸ್ ಕುಡಿಯುತ್ತೇನೆ ಯಾಕೆಂದರೆ ಕಾಫಿ ಟೀ ಈ ತಿಂಗಳು ಕುಡಿಯುವುದಿಲ್ಲ.

   ವಾರದಲ್ಲಿ ಸೋಮವಾರ ಮತ್ತು ಗುರುವಾರ ಉಪವಾಸ, ರಾತ್ರಿ ಊಟ ತ್ಯಜಿಸಿ ಅನೇಕ ವರ್ಷ ಆಯಿತು ಅದು ಮುಂದುವರಿದಿದೆ.

   ಬೆಳಿಗ್ಗೆ ಒಂದು ಇಡ್ಲಿ + ಒಂದು ಸಣ್ಣ ಕಪ್ ಪಲಾವ್, ಮಧ್ಯಾಹ್ನ 3 ರಿಂದ 4 ರ ಒಳಗೆ ಅನ್ನ ತರಕಾರಿ ಸಾಂಬಾರ್ ಪಲ್ಯ ಸೇವಿಸುತ್ತೇನೆ ಇದು ಅನೇಕ ವರ್ಷದ ಅಭ್ಯಾಸ ಆಗಿದೆ.

   ಬೆಳಿಗ್ಗಿನ ಬ್ರಾಹ್ಮಿ ಮಹೂರ್ತದಲ್ಲಿ ಏಳ ಬೇಕೆಂದು ಅನೇಕ ಬಾರಿ ತೀರ್ಮಾನಿಸಿದ್ದರು ಅದನ್ನು ಮಾಡಲು ಸಾಧ್ಯವಾಗಿರಲಿಲ್ಲ, ಇತ್ತೀಚಿಗೆ ಇಸ್ಕಾನ್ ಕೃಷ್ಣ ದೇವಾಲಯದವರು ಸಂಕೀರ್ತನೆಗೆ ನಮ್ಮ ಊರಿಗೆ ಬಂದವರಿಗೆ ನಮ್ಮ ಶ್ರೀಕೃಷ್ಣಸರಸ ಕನ್ವೆನ್ಷನ್ ಹಾಲ್ ನಲ್ಲಿ ತಂಗಲು ವ್ಯವಸ್ಥೆ ಮಾಡಿದ್ದೆ ಅವರ ಆಹ್ವಾನದ ಮೇಲೆ ಬೆಳಗಿನ ಅವರ ಬ್ರಾಹ್ಮಿ ಮುಹೂರ್ತದ ಮಂಗಲಾರತಿಯಲ್ಲಿ ಭಾಗವಹಿಸಿದ್ದು ಪ್ರೇರಣೆ ಆಗಿ ಪ್ರಾರಂಭ ಮಾಡಿದ್ದೇನೆ ಅದರಿಂದ ನನಗೆ ಏನು ಲಾಭ ಎಂದು ಮುಂದಿನ ಲೇಖನದಲ್ಲಿ ತಿಳು ಸುತ್ತೇನೆ.

   ಈ ವರ್ಷದ 2026ರ ಶ್ರಾವಣ ಮಾಸ ಹೊಸ ಪ್ರಯೋಗಕ್ಕೆ ಬಳಸುತ್ತಿದ್ದೇನೆ, ಬ್ರಾಹ್ಮಿ ಮಹೂರ್ತದಲ್ಲಿ ಏಳುವುದು ಗುರುಕುಲ ಪದ್ಧತಿ ಆಗಿತ್ತು ಇದನ್ನು ವಿಶ್ವದ ಎಲ್ಲಾ ಧರ್ಮಗಳು ಪಾಲಿಸುತ್ತಿದೆ ಇದಕ್ಕೆ ಆಧ್ಯಾತ್ಮಿಕ ಕಾರಣ ಆದರೂ ಅದಕ್ಕೆ ವೈಜ್ಞಾನಿಕ ಸಂಶೋದನೆಗಳೂ ಒಪ್ಪಿ ಕೊಂಡಿದೆ ಅಂದರೆ ಸೂರ್ಯೋದಯದ ಮುಂಚಿನ ಪರಿಸರದಲ್ಲಿ ವಿಶೇಷವಿದೆ.

  ನನ್ನ ಸಮಸ್ಯೆ ಬಗೆ ಹರಿಯಲಿ ಅವಾಗ ನೀವು ಹೇಳಿದ್ದೆಲ್ಲ ಶುರು ಮಾಡುತ್ತೇನೆ ಅಂತ ಕೆಲವರು, ಇನ್ನು ಕೆಲವರು ಇನ್ನೊಂದು ನಾಲ್ಕು ವರ್ಷ ಕಾಯಿರಿ ನಾನು ಹಿಮಾಲಯಕ್ಕೆ ಹೋಗಿ ಇದನ್ನೆಲ್ಲ ಶುರು ಮಾಡುತ್ತೇನೆ ಅನ್ನುವ ಗೆಳೆಯರಿಗೆ ಹೇಗೆ ಹೇಳಲಿ "ಕಳೆದ ಸಮಯ ಮತ್ತೆ ಬರುವುದಿಲ್ಲ" ಅಂತ.

  ಮನೆಯಲ್ಲಿ ಪರಸ್ಪರ ನಂಬಿಕೆ, ಕ್ಷಮೆ ಮತ್ತು ಪ್ರೀತಿ ನೆಲೆಸಿದಾಗ, ಆ ನಾಲ್ಕು ಗೋಡೆಗಳ ನಡುವೆಯೇ ಕೈಲಾಸ ಸೃಷ್ಟಿಯಾಗುತ್ತದೆ.

  ನಾವಿದ್ದಲ್ಲೇ ಸ್ವರ್ಗ ಸೃಷ್ಟಿಸಿ ಕೊಳ್ಳಲು ಸಾಧ್ಯ ಅಂತ ನಾನು ಅನೇಕ ಬಾರಿ ಬರೆದಿದ್ದೇನೆ ಅದರಂತೆ ನಡೆದಿದ್ದೇನೆ.

   ​ಆಧ್ಯಾತ್ಮಿಕ ಸಾಧನೆ, ಮನಃಶಾಂತಿ ಅಂದ ತಕ್ಷಣ ಹಲವರಿಗೆ ನೆನಪಾಗುವುದು ಹಿಮಾಲಯ ಆದ್ದರಿಂದ ಅನೇಕರು ಇನ್ನೊಂದು ನಾಲ್ಕು ವರ್ಷ ಅಷ್ಟೇ ಆ ಮೇಲೆ ನಾನು ಹಿಮಾಲಯಕ್ಕೆ ಹೋಗುತ್ತೇನೆ ಅಂತ ಅನ್ನುತ್ತಿದ್ದವರು ನಾಕಾರು ದಶಕ ಆದರೂ ಇಲ್ಲೇ ಇದ್ದಾರೆ.

 ಜವಾಬ್ದಾರಿಗಳಿಂದ ಓಡಿಹೋಗುವುದು ಆಧ್ಯಾತ್ಮಿಕತೆಯಲ್ಲ,ಇರುವ ಜಾಗದಲ್ಲೇ ಪ್ರಶಾಂತತೆಯನ್ನು ಕಂಡುಕೊಳ್ಳುವುದು ನಿಜವಾದ ಸಾಧನೆ.

​ಹಿಮಾಲಯ ಕೇವಲ ಒಂದು ಸ್ಥಳವಲ್ಲ ಅದು ನಿಶ್ಚಲತೆಯ ಸಂಕೇತ ಆ ನಿಶ್ಚಲತೆಯನ್ನು ನಮ್ಮ ಮನೆಯಲ್ಲೇ ತರಲು ಸಾಧ್ಯವಿಲ್ಲವೇ?...

​ ಹಿಮಾಲಯದ ಗುಹೆಯಲ್ಲಿ ಯಾರೂ ನಮ್ಮನ್ನು ಪರೀಕ್ಷಿಸಲು ಇರುವುದಿಲ್ಲ ಆದರೆ ಮನೆಯಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳ ನಡುವೆಯೂ ಕೋಪ ಬಿಟ್ಟು ತಾಳ್ಮೆಯಿಂದ ಇರುವುದು ನಿಜವಾದ ತಪಸ್ಸು.

  ಕುಟುಂಬದವರೊಂದಿಗೆ ಕರುಣೆ, ಕೃತಜ್ಞತೆ ಮತ್ತು ನಗುವಿನಿಂದ ಬದುಕುವುದು ಯಾವುದೇ ಕಠಿಣ ಜಪ-ತಪಕ್ಕಿಂತ ದೊಡ್ಡ ಸಾಧನೆ.
​ಕರ್ತವ್ಯವೇ ಯೋಗ.

 ದೈನಂದಿನ ಕೆಲಸಗಳನ್ನು, ಜವಾಬ್ದಾರಿಗಳನ್ನು ಯಾವುದೇ ಅಪೇಕ್ಷೆಯಿಲ್ಲದೆ ಶ್ರದ್ಧೆಯಿಂದ ನಿರ್ವಹಿಸುವುದೇ ನಿಜವಾದ ಕರ್ಮಯೋಗ.

​ ಹೊರಗಿನ ಪ್ರಪಂಚ ಅಥವಾ ಮನೆಯ ಗದ್ದಲದ ನಡುವೆಯೂ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುವುದನ್ನು ಕಲಿತರೆ ನಾವು ಕಾಲಿಡುವ ಜಾಗವೆಲ್ಲವೂ ತೀರ್ಥಕ್ಷೇತ್ರವೇ.

ಮನೆಯಲ್ಲಿ ಪರಸ್ಪರ ನಂಬಿಕೆ, ಕ್ಷಮೆ ಮತ್ತು ಪ್ರೀತಿ ನೆಲೆಸಿದಾಗ, ಆ ನಾಲ್ಕು ಗೋಡೆಗಳ ನಡುವೆಯೇ ಕೈಲಾಸ ಸೃಷ್ಟಿಯಾಗುತ್ತದೆ.

  ​ ಮೊದಲು ನಮ್ಮ ಮನಸ್ಸನ್ನು ಮತ್ತು ಮನೆಯನ್ನು ಪರಿವರ್ತಿಸೋಣ,ಶಾಂತಿ ತಾನಾಗಿಯೇ ಒಲಿಯುತ್ತದೆ. 

#siddasamadiyoga #meditation #brahmimahurtha #shravanamasa
​#ಆಧ್ಯಾತ್ಮ #ಜೀವನಪಾಠ #ಮನಃಶಾಂತಿ #ಮನೆ #ಸಕಾರಾತ್ಮಕಚಿಂತನೆ #KannadaQuotes #LifeLessons

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...