Blog number 1190. ಕನಾ೯ಟಕದ ಮನೆ ಮನೆ ತಲುಪಿರುವ ಮಸ್ತ್ ಮಗಾ ಡಾಟ್ ಕಾಂ ನ ಅಮರ್ ಪ್ರಸಾದ್ ಜೊತೆ ಈ ಸಂಜೆ, ಅವರ ಡಿಜಿಟಲ್ ಮೀಡಿಯಾದ ಜನಿ೯ ಹೇಗಿದೆ?
https://youtu.be/J25YtsYMXxE #ಮಸ್ತ್_ಮಗಾ_ಡಾಟ್_ಕಾಂ #ಕನ್ನಡಿಗರ_ಅಚ್ಚುಮೆಚ್ಚಿನ_ಯುಟ್ಯೂಬ್_ಚಾನಲ್ #ಅಮರಪ್ರಸಾದ್_ಜೊತೆ_ಈ_ಸಂಜೆ #ಆರು_ಕೋಟಿ_ದಾಟಿದ_ವೀಕ್ಷಕರು #ಹೊಸತಲೆಮಾರಿನ_ಯುವಕರನ್ನು_ಆಕರ್ಷಿಸಿರುವ_ಮಸ್ತ್_ಮಗಾ_ಡಾಟ್_ಕಾಂ. #ಚಿಕ್ಕಮಗಳೂರು_ಜಿಲ್ಲೆಯ_ಕೊಪ್ಪದ_ಅಮರಪ್ರಸಾದ್_ನಮ್ಮೂರಿನ_ಅಳಿಯಂದಿರು. ಅಮರ ಪ್ರಸಾದ್ ಅವರ ಧ್ವನಿಯಲ್ಲಿ ಏನೋ ಒಂದು ಹೇಳಲಾಗದ ಆಕರ್ಷಣೆ ಇದೆ ಅವರು ಸುವರ್ಣ ನ್ಯೂಸ್, ಪಬ್ಲಿಕ್ ಟೀವಿ, ಟಿವಿ 9 ನಲ್ಲಿ ಮತ್ತು ಈಗ ಇವರದ್ದೇ #ಮಸ್ತ್_ಮಗಾ_ಡಾಟ್_ಕಾಂ ಚಾನಲ್ ನಲ್ಲಿ ಇವರ ಧ್ವನಿ ಆಲಿಸಲೇ ಅನೇಕರು ಇಷ್ಟ ಪಡುತ್ತಾರೆ. ನಾನು ಇವರ ಧ್ವನಿಗೇ ಫಿದಾ ಆಗಿದ್ದೇನೆ ಅಷ್ಟೇಕೆ ಇಡೀ ಕರ್ನಾಟಕ ರಾಜ್ಯದಲ್ಲಿ ಇವರ ಧ್ವನಿಗಾಗಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಅಮರ ಪ್ರಸಾದ್ ರ ಜೊತೆ ಇವತ್ತಿನ ಸಂಜೆ ನನ್ನ ಕಛೇರಿಯಲ್ಲಿ ಅವರ ಟೀವಿ ಮಾಧ್ಯಮದ ಬಗ್ಗೆ ಅವರ ಪ್ರಯಾಣದ ಅನುಭವಗಳನ್ನು ನಾನು ಕೇಳಿದಾಗ ಹಂಚಿಕೊಂಡ ಅವರ ಸಂದರ್ಶನದ ವಿಡಿಯೋ ಇಲ್ಲಿದೆ. ಶಿವಮೊಗ್ಗ ಜಿಲ್ಲೆಯ ಪಕ್ಕದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಒಂದು ಹಳ್ಳಿ ಇವರ ಹುಟ್ಟೂರು, ಸುವರ್ಣ ಟೀವಿಯಲ್ಲಿ ರಂಗನಾಥ್ ಇಡೀ ರಾಜ್ಯದಲ್ಲಿ ಹೆಕ್ಕಿ ಆಯ್ಕೆ ಮಾಡಿದ ಆರು ಪ್ರತಿಭಾವಂತ ಯುವಕರಲ್ಲಿ ಕೊಪ್ಪದ ಅಮರ್ ಪ್ರಸಾದ್ ಒಬ್ಬರು. ನಂತರ ರಂಗನಾಥರು ಪಬ್ಲಿಕ್ ಟೀವಿ ಮಾಡಿದಾಗ ಅವರ ...