ನನ್ನ ಸಣ್ಣ ಕಥಾ ಸಂಕಲನ ಬಿಲಾಲಿ ಬಿಲ್ಲಿ ಅಭ್ಯಂಜನ ಬಿಡುಗಡೆಗೆ, ಇದರಲ್ಲಿನ ಹಾವುಗೊಲ್ಲರ ಕತ್ತೆ ಪುರಾಣದ ಕಥಾನಾಯಕನ ಬಾವ ಕೃಷ್ಣಪ್ಪ ಮತ್ತು ನನ್ನ ಪುನರ್ ಮಿಲನ ವೃತ್ತಾಂತ ಇಲ್ಲದೆ
#ಇದೇ_ತಿಂಗಳ_30ರಂದು_ನನ್ನ_ಸಣ್ಣ_ಕಥಾ_ಸಂಕಲ_ಬಿಲಾಲಿ_ಬಿಲ್ಲಿ_ಅಭ್ಯಂಜನ_ಬಿಡುಗಡೆ. #ಇದರಲ್ಲಿ_ಮೊದಲ_ಕಥೆ_ಹಾವುಗೊಲ್ಲರ_ಕತ್ತೆ_ಪುರಾಣ #ಈ_ಕಥೆಯ_ಕಥಾನಾಯಕ_ವೆಂಕಟೇಶಿಯ_ಬಾವ_ಕೃಷ್ಣಪ್ಪ. #ಹಾವುಗೊಲ್ಲ_ಕೃಷ್ಣಪ್ಪ_ಮತ್ತು_ನನ್ನ_ಪುನರ್_ಮಿಲನದ_ವೃತ್ತಾಂತ_ಕಳೆದವರ್ಷದ್ದು ಸುಮಾರು ವರ್ಷದ ನಂತರ ರಿಪ್ಪನ್ ಪೇಟೆ ಸಮೀಪದ ಹಾಲುಗುಡ್ಡೆ ಹಾವುಗೊಲ್ಲರ ಕ್ಯಾಂಪಿನ ಕೃಷ್ಣಪ್ಪ ಇವತ್ತು ಸಿಕ್ಕಿದ್ದು ಇಬ್ಬರಿಗೂ ಸಂತೋಷ ಆಯಿತು. 1990 ರಲ್ಲಿ ಇವರೆಲ್ಲರದ್ದು ಅಲೆಮಾರಿ ಜೀವನ, ಹೊಟ್ಟೆಪಾಡಿಗೆ ಹಾವು ಹಿಡಿಯುವುದು, ಹಾವು ಆಡಿಸಿ ಬಿಕ್ಷೆ ಬೇಡುವುದು ಇವರ ನಿತ್ಯ ಕಾಯಕ ಆಗಿತ್ತು. ಒಂದೂರಿಂದ ಇನ್ನೊಂದು ಊರಿಗೆ ಇವರ ಕ್ಯಾಂಪ್ ಹೋಗಲು ಕತ್ತೆಗಳೇ ಇವರಿಗೆ ವಾಹನ (ಹೆಚ್ಚು ಕತ್ತೆ ಹೊಂದಿದವ ಶ್ರೀಮಂತ ಅಂತ ಇತ್ತು) ಇವರನ್ನೆಲ್ಲ ಕಾಗೋಡು ತಿಮ್ಮಪ್ಪ ಹೊಸನಗರ ತಾಲ್ಲೂಕಿನ ಹಾಲುಗುಡ್ಡೆ ಮತ್ತು ಸಾಗರ ತಾಲ್ಲೂಕಿನ ಶಿರವಂತೆಯಲ್ಲಿ ಜಾಗ ಮನೆ ನೀಡಿದ್ದರಿಂದ ಈಗ ಇವರ ಜೀವನ ಶೈಲಿ ಬದಲಾಗುತ್ತಿದೆ. ಹಾವು ಹಿಡಿಯುವುದು ಇವರೆಲ್ಲ ಬಿಟ್ಟಿದ್ದಾರೆ (ಕೆಲವೇ ಕೆಲವರು ಮಾತ್ರ ಮುಂದುವರಿಸಿದ್ದಾರೆ) ಹಾವು ನೋಡಿದರೆ ಇವರ ಈಗಿನ ಕಾಲದ ಮಕ್ಕಳು ಹೆದರಿ ಓಡುತ್ತಾರೆ ಅಂತ ಕೃಷ್ಣಪ್ಪ ಹೇಳುತ್ತಿದ್ದ ಮತ್ತೆ ಈಗ ಇವರ ಕ್ಯಾಂಪಿನಲ್ಲಿ ನಾಗ ದೇವರ ಪ್ರತಿಷ್ಠಾಪನೆ ಮಾಡಿಸಿದ್ದಾರಂತೆ ತಲೆತಲಾಂತರದಿಂದ ನಾಗ ಶಾಪ ಕಳೆದು ...