ಹಿಂದೂ ದಮ೯ದವನು ಮುಸ್ಲಿ೦ ಗೆಳೆಯರಿಗೆ ಮೆಕ್ಕಾ ಯಾತ್ರೆ ಮಾಡಿಸಬಹುದೆ? ಮುಸ್ಲಿಂ ಗೆಳೆಯ ಈ ರೀತಿ ಮೆಕ್ಕಾ ಯಾತ್ರೆ ಮಾಡಿದರೆ ಹರಾಂ ಅಂತೆ ಅಂತ ಒಂದು ಸುದ್ದಿ ನಮ್ಮ ಊರಲ್ಲಿ ಪ್ರಾರಂಭವಾಗಿತ್ತು. ಬಹುಶಃ ಇದು ಅಪರೂಪದ ಪ್ರಕರಣ ಆದ್ದರಿಂದ ಸ್ಥಳೀಯರಿಗೆ ಇದರ ಬಗ್ಗೆ ಸರಿಯಾದ ತಿಳುವಳಿಕೆ ಇರಲಿಲ್ಲ, ಜೊತೆಗೆ ಮತ್ಸರ, ಹೊಟ್ಟೆಕಿಚ್ಚು ಬೇರೆ ಸೇರಿದ್ದರಿಂದ ಮೆಕ್ಕಾ ಯಾತ್ರೆಗೆ ತಯಾರಿ ನಡೆಸಿದವರಿಗೆ ಒಂದು ರೀತಿ ಕಿರಿಕಿರಿ ಆದರೆ, ಮೆಕ್ಕಾ ಯಾತ್ರೆ ಮಾಡಿಸಲು ಹೊರಟ ಹಿಂದೂ ದಮಿ೯ಯನಿಗೆ ಹಿಂದಿನಿಂದ ಹೋಗಿ ಹೋಗಿ ಸಾಬರಿಗೆ ಮೆಕ್ಕಾ ಕಳಿಸಲು ಅವನಿಗೆ ಬುದ್ಧಿ ಇಲ್ಲ ಅಂತ ಕುಹಕ ಬೇರೆ. ಇದು ನಾನೂ ಮತ್ತು ನನ್ನ ಹಿರಿಯ ಮಿತ್ರರಾದ ಗನ್ನಿ ಸಾಹೇಬರು 2007 ರಲ್ಲಿ ಅನುಭವಿಸಿದ ಪ್ರಕರಣವಿದು, ಇದಕ್ಕೆ ಒಂದು ಸಕಾರಣ ಇತ್ತು ಮತ್ತು ನಮ್ಮುರ ದೇವಸ್ಥಾನದಲ್ಲಿ ನಾನು ಗನ್ನಿಸಾಬರಿಗೆ ಒಂದು ಮಾತು ಕೊಟ್ಟಿದ್ದೆ. 2006ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿ ಎಂಬ ನಮ್ಮ ಊರಲ್ಲಿ ಗಣಪತಿ ದೇವಸ್ಥಾನ ಕಟ್ಟಿಸಿ ಪ್ರತಿಷ್ಟಾಪನೆ ನಡೆಯಿತು, ಅಲ್ಲಿವರೆಗೆ ಇಡಿ ಹೋಬಳಿಯಲ್ಲಿ ಗಣಪತಿ ದೇವಸ್ಥಾನವೇ ಇರಲಿಲ್ಲ, ಯಡೇಹಳ್ಳಿಯಲ್ಲಿ ಎರಡು ಚಚ್೯ ಮತ್ತು ಒಂದು ಮಸೀದಿ ಇತ್ತು, ಗಣಪತಿ ದೇವಸ್ಥಾನದ ದೇವರ ವಿಗ್ರಹ ಕೋಲಾರ ಜಿಲ್ಲೆಯ ಶಿವಾರಪಟ್ಟಣದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತರಿಂದ ಕೃ...