#ಕೆಳದಿ_ಇತಿಹಾಸ_ಆಸಕ್ತರು_ಸಶೇಷ_ಐತಿಹಾಸಿಕ_ಕಾದಂಬರಿ_ಓದಲೇ_ಬೇಕು #ಶಿವಮೊಗ್ಗ_ಜಿಲ್ಲೆಯ_ಉದಯೋನ್ಮುಖ_ಇತಿಹಾಸ_ಸಂಶೋಧಕರಾದ #ಬಿದನೂರು_ನಗರದ_ಸುದೀಂದ್ರ_ಭಂಡಾರ್ಕರ್_ಬರೆದ_ಕಾದಂಬರಿ #ಕೆಳದಿ_ಅರಸರ_ಕೋಶಾಧಿಕಾರಿ_ಪುರೋಶೋತ್ತಮಯ್ಯರ_ವಂಶಸ್ಥರು_ಸುದೀಂದ್ರಭಂಡಾರ್ಕರ್ ಕೆಳದಿ ಅರಸರ ಇತಿಹಾಸ ಸಂಪೂರ್ಣವಾಗಿ ಸಂಕ್ಷಿಪ್ತವಾಗಿ ಶೇಷ ಮತ್ತು ಸೂರಿ ಎಂಬಿಬ್ಬರ ಸಂಬಾಷಣೆಯಲ್ಲಿ ಕೆಳದಿ ಅರಸರ ಕೋಶಾಧಿಕಾರಿ ಪುರುಶೋತ್ತಮಯ್ಯರ ವಂಶಸ್ಥರಾದ ನಗರದ ಸುದೀಂದ್ರ ಭಂಡಾರ್ಕರ್ ಸಶೇಷ ಎಂಬ ಐತಿಹಾಸಿಕ ಕಾದಂಬರಿ ಓದಲೇ ಬೇಕಾದ ಪುಸ್ತಕ. ಕೆಳದಿ ಸಾಮ್ರಾಜ್ಯದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಐತಿಹಾಸಿಕ ಕಾದಂಬರಿ ಸಶೇಷ. ಕೆಳದಿ ಸಾಮ್ರಾಜ್ಯದ ಅನೇಕ ಸತ್ಯಗಳು ಉದ್ದೇಶ ಪೂರ್ವ ಕವಾಗಿ ಮರೆ ಮಾಚಿದೆ. ಕೆಲವು ಇತಿಹಾಸಕಾರರ ದಿನಚರಿ, ರಾಜರ ಆಸ್ಥಾನದ ಕವಿಗಳು ರಚಿಸಿದ ಕೃತಿಗಳು ಮಾತ್ರ ಸಂಶೋದಕರು ಬಳಸುವ ಸತ್ಯ ಆಗಿದೆ. ಈ ಸಾಮ್ರಾಜ್ಯದಲ್ಲಿ ಸೇವೆ ಸಲ್ಲಿಸಿದ ಅನೇಕ ಕುಟುಂಬದ ಪಳಯುಳಿಕೆಗಳು ಈಗಲೂ ಈ ಭಾಗದಲ್ಲಿ ಉಳಿದಿದ್ದಾರೆ ಆದರೆ ಅವರ ಕುಟುಂಬದ ಕಥೆ ಹೇಳಲು ನಾಲ್ಕು ನೂರು ವರ್ಷ ಬೇಕಾಯಿತು. ಕೆಳದಿ ಅರಸರ ರಾಜಧಾನಿ ಆಗಿದ್ದ ಬಿದನೂರು ನಗರದಲ್ಲಿನ ಸುದೀಂಂದ್ರ ಭಂಡಾರ್ಕರ್ ಕೆಳದಿ ರಾಜರ ಭಂಡಾರ ನಿರ್ವಹಿಸುತ್ತಿದ್ದ ವಂಶದವರು, ರಾಣಿ ಚೆನ್ನಮ್ಮಾಜಿ ಆಳ್ವಿಕೆ ಕಾಲದಲ್ಲಿ ಕೋಶಾಧಿಕಾರಿ...