#ಆನಂದಪುರಂ ಇತಿಹಾಸ ಭಾಗ_11. #ಎರಡನೆ_ವಿಧಾನಸಭಾ_ಚುನಾವಣೆಯಲ್ಲಿ_ಬದರಿನಾರಾಯಣಅಯ್ಯಂಗಾರ್_ಗೆಲವು #ಮೊದಲ_ಮಹಾಚುನಾವಣೆಯಲ್ಲಿ_ಗೆದ್ದಿದ್ದ_ಶಾಂತವೇರಿ ಗೋಪಾಲಗೌಡರ_ಸೋಲು #ಕಾಂಗ್ರೇಸ್_ಸಮಾಜವಾದಿ_ಹೋರಾಟ 1952 ರ ಮೊದಲ ಮಹಾ ಚುನಾವಣೆಯಲ್ಲಿ ಸಾಗರ - ಹೊಸನಗರ- ತೀಥ೯ಹಳ್ಳಿ ಸೇರಿ ಒಂದು ವಿದಾನ ಸಭಾ ಕ್ಷೇತ್ರವಾಗಿತ್ತು ಈ ಕ್ಷೇತ್ರದಿಂದ ಜಮೀನ್ದಾರ್ ರಾಮಕೃಷ್ಣ ಅಯ್ಯಂಗಾರರ ಪುತ್ರ ಸ್ವಾತಂತ್ರ್ಯ ಹೋರಾಟಗಾರ, ಶಿವಮೊಗ್ಗ ನ್ಯಾಯಾಲಯದ ಖ್ಯಾತ ವಕೀಲ ಯುವಕ ಬದರಿನಾರಾಯಣ ಅಯ್ಯಂಗಾರ್ ಕಾಂಗ್ರೇಸ್ ನಿಂದ ಸ್ಪರ್ದಿಸಿದಾಗ ಅವರ ವಿರುದ್ದ ಆಗಷ್ಟೇ ಇಡೀ ರಾಷ್ಟ್ರದ ಗಮನ ಸೆಳೆದ "ಉಳುವವನೇ ಹೊಲದೊಡೆಯ " ಎಂಬ ಘೋಷಣೆಯೊಂದಿಗೆ ಕಾಗೋಡು ರೈತ ಹೋರಾಟದ ರೂವಾರಿ ಹೆಚ್.ಗಣಪತಿಯಪ್ಪನವರು ಪ್ರಾರಂಬಿಸಿದ ಕಾಗೋಡು ರೈತ ಹೋರಾಟವನ್ನು ಮುನ್ನಡಿಸಿ ಅದರಲ್ಲಿ ರಾಷ್ಟ್ರೀಯ ನಾಯಕರಾದ ರಾಮ ಮನೋಹರ ಲೋಹಿಯಾ ಭಾಗವಹಿಸುವಂತೆ ಮಾಡಿದ ನಂತರ ಲೋಕಮಾನ್ಯ ಜಯಪ್ರಕಾಶ್ ನಾರಾಯಣರು ಬಂದು ಬೆಂಬಲಿಸುವಂತೆ ರಾಷ್ಟ್ರೀಯ ಸಮಾಜವಾದಿ ಆಯಮ ನೀಡಿದ ಶಾಂತವೇರಿ ಗೋಪಾಲಗೌಡರು ಸಮಾಜವಾದಿ ಪಕ್ಷದಿಂದ ಸ್ಪರ್ದಿಸಿ ಬದರಿನಾರಾಯಣರನ್ನು ಸೋಲಿಸಿದ್ದು ಇದರಿಂದ ಅಘಾತಕ್ಕೆ ಒಳಗಾದ ರಾಮಕೃಷ್ಣ ಅಯ್ಯಂಗಾರರು ಹೃದಯಾಘಾತದಿಂದ ಮರಣ ಹೊಂದಿದ್ದು ಅಯ್ಯಂಗಾರರ ಕುಟುಂಬಕ್ಕೆ ಮತ್ತು ಕಾಂಗ್ರೇಸ್ ಪಕ್ಷಕ್ಕೆ ದೊಡ್ಡ ಆಘಾತ ಆಗಿತ್ತು. ಮೊದಲ ಚುನಾವಣಾ ಸೋಲು ಮತ್ತು ತಂದೆಯ ಸಾವಿಂದ ...