Skip to main content

Posts

Showing posts with the label SHIMOGA DIST

DANGEROUS FERRY TRANSPORT IN KARNATAK STATE.

#ಸ್ಥಳೀಯರ ಒಡಲಾಳದ ಮಾತು# " ಮುಂಬೈನ ರೈಲು ನಿಲ್ದಾಣದ ಕಾಲು ತುಳಿತದ ಅನಾಹುತ ಜಿಲ್ಲಾ ಆಡಳಿತಕ್ಕೆ ಪಾಠವಾಗಿದ್ದರೆ ಇಲ್ಲಿ ಹಬ್ಬ ಹರಿದಿನದಲ್ಲಿ ಜನರನ್ನ ನಿಯಂತ್ರಿಸಿ ಪ್ರಯಾಣಿಕರ ಸಂಖ್ಯೆ ನಿಗದಿಪಡಿಸದಿದ್ದರೆ ಮುಂದೊಂದು ದಿನ ಅನೇಕ ರ ಸಾವು ನೋವಿಗೆ ಕಾರಣವಾಗ ಬೇಕಾದೀತು ಎಚ್ಚರ" ಶರಾವತಿ ನದಿ ದಾಟಿಸುವ ಈ ತುಮರಿಯ ಲಾಂಚ್ ನಲ್ಲಿ ಒಮ್ಮೆಗೆ ನೂರಾರು ಜನ ಪ್ರಯಾಣಿಸುತ್ತಾರೆ ಆದರೆ ಇದರಲ್ಲಿ ಜನರ ಸುರಕ್ಷೆಗಾಗಿ ಒಂದೇ ಒಂದು ಜೀವರಕ್ಷಕ ಉಪಕರಣವಿಲ್ಲ!?........ In this boat daily thousands of people crossing sharavathi river near world famous JOGFALLS but sad thing is no single life jacket in it. https://m.facebook.com/story.php?story_fbid=1687366887964143&id=100000725455473 http://kannada.eenaduindia.com/State/MalnadandKaravali/Shimoga/ShimogaCity/2017/10/01155724/full-of-tourists-in-launch-at-diganduru.vpf   

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...