Blog number 1578.. ಭಾಗ - 2 . ಹೆಗ್ಗೋಡಿನ ನೀನಾಸಂ -ಚರಕ - ಖಾದಿ ಮನೆ ಭಾಗಿರಥಿ ಮತ್ತು ಮಡಸೂರು ಲಿಂಗದಳ್ಳಿ ಸುಶೀಲಮ್ಮರಿಂದ ಹೊಂಬುಜ ಲಾಡ್ಜ್ ಗೆ ಹಸೆ ಚಿತ್ತಾರದ ಹೊಳಪು .
#ಭಾಗ_2. https://youtu.be/PV08KFcn9ts #ನಮ್ಮ_ಹೊಂಬುಜ_ಲಾಡ್ಜ್_ಅತಿಥಿಗಳನ್ನು_ಹಸೆ_ಚಿತ್ತಾರದ_ಮೂಲಕ_ಸ್ವಾಗತಿಸುತ್ತದೆ. #ಹೆಗ್ಗೋಡಿನ_ಭಾಗಿರಥಿ_ಖಾದಿಮನೆ_ಮತ್ತು_ಮಡಸೂರುಲಿಂಗದಳ್ಳಿಯ_ನಿವೃತ್ತ_ಅಂಗನವಾಡಿ_ಶಿಕ್ಷಕಿ_ಸುಶೀಲಮ್ಮರಿಂದ. #ಇವರಿಬ್ಬರು_ನಮ್ಮ_ಸಂಸ್ಥೆಗೆ_ಸೆಲೆಬ್ರಿಟಿ_ಕಲಾವಿದರು. #ಮುಂದಿನ_ದಿನದಲ್ಲಿ_ರಾಜ್ಯದಾದ್ಯಂತ #ನಮ್ಮ_ಸರಣಿ_ರೆಸ್ಟೋರಾಂಟ್_Explore_the_westernghats_ಪ್ರಾಜೆಕ್ಟನಲ್ಲಿ_ಕೈ_ಜೋಡಿಸಲಿದ್ದಾರೆ. #ಹೆಗ್ಗೋಡಿನ_ನೀನಾಸಂ_ಕೆವಿ_ಸುಬ್ಬಣ್ಣರ_ಸಂಪರ್ಕ_ಭಾಗಿರಥಿ_ಬಾಯಲ್ಲೇ_ಕೇಳಿ. ನನಗೆ ಇವತ್ತು ತುಂಭಾ ಸಂತೋಷ ತಂದ ದಿನ, ನಮ್ಮ ನೂತನ ಹೊಂಬುಜ ಗಾರ್ಡನೀಯ ಲಾಡ್ಜ್ ಎದುರಿನ ಗೋಡೆಯಲ್ಲಿ ಪಶ್ಚಿಮಘಟ್ಟದ ಸಂಪ್ರದಾಯಿಕ ದೇಶಿ ಕಲೆ ಹಸೆ ಚಿತ್ತಾರ ಮೂಡಿದೆ. ನೀನಾಸಂ -ಚರಕ -ಈಗ ಖಾದಿ ಮನೆಯ ಹೆಸರಲ್ಲಿ ಪ್ರಖ್ಯಾತರಾದ ಭಾಗಿರಥಿ ಮತ್ತು ಅವರ ಗೆಳತಿ ಮಡಸೂರು ಲಿಂಗದಳ್ಳಿಯ ನಿವೃತ್ತ ಅಂಗನವಾಡಿ ಶಿಕ್ಷಕಿ ಶ್ರೀಮತಿ ಸುಶೀಲಮ್ಮ ಎಂಬ ಮಲೆನಾಡಿನ ಜನಪದ ಸೆಲೆಬ್ರಿಟಿಗಳು ಮೂರು ದಿನಗಳಲ್ಲಿ ಈ ಹೊಸ ರೂಪ ನೀಡಿದ್ದಾರೆ. ಸಂಪ್ರದಾಯಿಕ ಹಸೆ ಚಿತ್ತಾರ ಶುಭ ಶಕುನದ ಕಲೆ ಎಂಬ ದಾರ್ಮಿಕ ನಂಬಿಕೆಯ ಪರಂಪರೆಯ ಹೊಂದಿದೆ. ಇಡೀ ದೇಶ ಸುತ್ತಿರುವ, ದುರಾಸೆಯೇ ಇಲ್ಲದ, ಸರಳ ಜೀವಿ ಖಾದಿ ಮನೆ ಭಾಗೀರಥಿ ಪ್ರಶಸ್ತಿ -ಸನ್ಮಾನ - ಹಣದಿಂದ ಯಾವತ್ತೂ ದೂರ...