Blog number 1578.. ಭಾಗ - 2 . ಹೆಗ್ಗೋಡಿನ ನೀನಾಸಂ -ಚರಕ - ಖಾದಿ ಮನೆ ಭಾಗಿರಥಿ ಮತ್ತು ಮಡಸೂರು ಲಿಂಗದಳ್ಳಿ ಸುಶೀಲಮ್ಮರಿಂದ ಹೊಂಬುಜ ಲಾಡ್ಜ್ ಗೆ ಹಸೆ ಚಿತ್ತಾರದ ಹೊಳಪು .
#ಭಾಗ_2.
https://youtu.be/PV08KFcn9ts
#ನಮ್ಮ_ಹೊಂಬುಜ_ಲಾಡ್ಜ್_ಅತಿಥಿಗಳನ್ನು_ಹಸೆ_ಚಿತ್ತಾರದ_ಮೂಲಕ_ಸ್ವಾಗತಿಸುತ್ತದೆ.
#ಹೆಗ್ಗೋಡಿನ_ಭಾಗಿರಥಿ_ಖಾದಿಮನೆ_ಮತ್ತು_ಮಡಸೂರುಲಿಂಗದಳ್ಳಿಯ_ನಿವೃತ್ತ_ಅಂಗನವಾಡಿ_ಶಿಕ್ಷಕಿ_ಸುಶೀಲಮ್ಮರಿಂದ.
#ಇವರಿಬ್ಬರು_ನಮ್ಮ_ಸಂಸ್ಥೆಗೆ_ಸೆಲೆಬ್ರಿಟಿ_ಕಲಾವಿದರು.
#ಮುಂದಿನ_ದಿನದಲ್ಲಿ_ರಾಜ್ಯದಾದ್ಯಂತ
#ನಮ್ಮ_ಸರಣಿ_ರೆಸ್ಟೋರಾಂಟ್_Explore_the_westernghats_ಪ್ರಾಜೆಕ್ಟನಲ್ಲಿ_ಕೈ_ಜೋಡಿಸಲಿದ್ದಾರೆ.
#ಹೆಗ್ಗೋಡಿನ_ನೀನಾಸಂ_ಕೆವಿ_ಸುಬ್ಬಣ್ಣರ_ಸಂಪರ್ಕ_ಭಾಗಿರಥಿ_ಬಾಯಲ್ಲೇ_ಕೇಳಿ.
ನನಗೆ ಇವತ್ತು ತುಂಭಾ ಸಂತೋಷ ತಂದ ದಿನ, ನಮ್ಮ ನೂತನ ಹೊಂಬುಜ ಗಾರ್ಡನೀಯ ಲಾಡ್ಜ್ ಎದುರಿನ ಗೋಡೆಯಲ್ಲಿ ಪಶ್ಚಿಮಘಟ್ಟದ ಸಂಪ್ರದಾಯಿಕ ದೇಶಿ ಕಲೆ ಹಸೆ ಚಿತ್ತಾರ ಮೂಡಿದೆ.
ನೀನಾಸಂ -ಚರಕ -ಈಗ ಖಾದಿ ಮನೆಯ ಹೆಸರಲ್ಲಿ ಪ್ರಖ್ಯಾತರಾದ ಭಾಗಿರಥಿ ಮತ್ತು ಅವರ ಗೆಳತಿ ಮಡಸೂರು ಲಿಂಗದಳ್ಳಿಯ ನಿವೃತ್ತ ಅಂಗನವಾಡಿ ಶಿಕ್ಷಕಿ ಶ್ರೀಮತಿ ಸುಶೀಲಮ್ಮ ಎಂಬ ಮಲೆನಾಡಿನ ಜನಪದ ಸೆಲೆಬ್ರಿಟಿಗಳು ಮೂರು ದಿನಗಳಲ್ಲಿ ಈ ಹೊಸ ರೂಪ ನೀಡಿದ್ದಾರೆ.
ಇಡೀ ದೇಶ ಸುತ್ತಿರುವ, ದುರಾಸೆಯೇ ಇಲ್ಲದ, ಸರಳ ಜೀವಿ ಖಾದಿ ಮನೆ ಭಾಗೀರಥಿ ಪ್ರಶಸ್ತಿ -ಸನ್ಮಾನ - ಹಣದಿಂದ ಯಾವತ್ತೂ ದೂರ ಅವರಿಗೆ ಜೊತೆಯಾದ ಸುಶೀಲಮ್ಮ ಕೂಡ ಭಾಗೀರಥಿ ಅವರ ಈ ಗುಣಗಳಿಗೆ ಮನಸೋತ ಕಲಾವಿದರು.
ಇವತ್ತು ಇವರನ್ನು ಬಿಳ್ಕೋಡುವ ಸಂದರ್ಭದಲ್ಲಿ ನಮ್ಮ ಮುಂದಿನ ಸರಣಿ ರೆಸ್ಟೋರಾಂಟ್ ಯೋಜನೆಯ ರಾಜ್ಯದ್ಯಾದಂತ ಸುಮಾರು 500 ಔಟ್ ಲೆಟ್ ಗಳಿಗೆ ಇವರಿಬ್ಬರು ಹಸೆ ಚಿತ್ತಾರದ ಸ್ಪರ್ಶ ನೀಡಲಿದ್ದಾರೆ ಈ ಮೂಲಕ ಮಲೆನಾಡಿನ ಸಾಗರ ಪ್ರಾಂತ್ಯದ ಹಸೆ ಚಿತ್ತಾರ ನಮ್ಮ Explore the western ghats ಪ್ರಾಜೆಕ್ಟ್ ಬ್ರಾಂಡ್ ವ್ಯಾಲ್ಯೂಗೆ ಹೆಚ್ಚಿನ ಗೌರವ ನೀಡಲಿದೆ.
Comments
Post a Comment