#ಮಲೆನಾಡು_ಪ್ರದೇಶ_ಅಭಿವೃದ್ದಿ_ಮಂಡಳಿ_ಅಧ್ಯಕ್ಷರಾಗಿ_ಸಾಗರದ_ಗುರುಮೂತಿ೯_ಆಯ್ಕೆ_ಅಭಿನಂದನೀಯ.
ಸಾಗರದ ಗುರು ಮೂತಿ೯ ಅಂತ ಸಾಗರದವರು ಕರೆದರೆ ಶಿಕಾರಿಪುರದವರು ಶಿಕಾರಿಪುರ ಗುರುಮೂತಿ೯ ಅಂತನೇ ಕರೆಯುತ್ತಾರೆ.
1979 - 80 ರಲ್ಲಿ ಸಾಗರ ತಾಲ್ಲೂಕಿನಲ್ಲಿ ಆರ್.ಎಸ್.ಎಸ್ ನ ಮು೦ಚೂಣಿಯಲ್ಲಿದ್ದವರು U H ರಾಮಪ್ಪ ಮತ್ತು ಅವರ ಶಿಷ್ಯರ೦ತೆ ಈ ಗುರುಮೂತಿ೯ .
ಬಿ.ಹೆಚ್ ರಸ್ತೆಯ ಲಕ್ಷ್ಮಿ ಸ್ವೀಟ್ಸ್ ಎದುರಿನ ಪುತ್ತೂರಾಯರ ಕಟ್ಟಡದ ಮೊದಲ ಅಂತಸ್ತಿನಲ್ಲಿ ಸುಮಾರು 16 ರೂಂ ಗಳನ್ನ ಸೇವಾ ಸಾಗರ ಸಂಸ್ಥೆಯಿ೦ದ ವಿದ್ಯಾಥಿ೯ಗಳಿಗೆ ಖಾಸಾಗಿ ವಿದ್ಯಾಥಿ೯ನಿಲಯವಾಗಿ ಪರಿವರ್ತಿಸಿದ್ದರು, ಪ್ರತಿ ರೂಮಿನಲ್ಲಿ ಇಬ್ಬರು ಇರಬಹುದಾಗಿತ್ತು ಇದಕ್ಕೆ ನಿಗದಿತ ಬಾಡಿಗೆ ನಿಗದಿ ಮಾಡಿದ್ದರು.
ಅದು ರಾಮಪ್ಪ ಮತ್ತು ಗುರುಮೂತಿ೯ಯವರ ಆಡಳಿತ ಕಛೇರಿಯೂ ಆಗಿತ್ತು, ನಾನು SSLC ಪರೀಕ್ಷೆ ತಯಾರಿಗೆ ಅಲ್ಲಿ ಸೇರಿದ್ದೆ ಅದು ಆರ್ ಎಸ್ ಎಸ್ ಪ್ರಮುಖರಾಗಿದ್ದ ಪ್ರಾಣೇಶರ ಶಿಪಾರಸ್ಸಿನಿಂದ.
ಅಲ್ಲಿ ಬೆಳಿಗ್ಗೆ 5ಕ್ಕೆ ನಮ್ಮನ್ನೆಲ್ಲ ಎಬ್ಬಿಸಿ ಸುಪ್ರಬಾತ ಒ೦ದು ಕಡೆ ಸೇರಿಸಿ ಕರಾಗ್ರೆ ವಸತೆ ಲಕ್ಷ್ಮಿ..... ಸಾಮೂಹಿಕವಾಗಿ ಹೇಳಿಸುತ್ತಿದ್ದರು ಈ ಗುರುಮೂತಿ೯.
ಬಿಜೆಪಿ ಪಕ್ಷ ಪ್ರಬುದ್ಧಮಾನಕ್ಕೆ ಬ೦ದಾಗ ಸಾಗರದಿಂದ ಒ0ದಲ್ಲ ಒ೦ದು ದಿನ UH ರಾಮಪ್ಪ ಅಥವ ಗುರುಮೂತಿ೯ ಶಾಸಕರಾಗುತ್ತಾರೆಂಬ ಸುದ್ದಿ ಇತ್ತು.
ನಂತರ ಗುರುಮೂತಿ೯ಯನ್ನ ಯಡೂರಪ್ಪನವರು RSS ಜೊತೆ ಶಿಕಾರಿಪುರ ಬಿಜೆಪಿ ಸಂಘಟನೆ ಜೊತೆ ತಮ್ಮ ಆಪ್ತ ಕಾಯ೯ದಶಿ೯ ಮಾಡಿಕೊಂಡರು.
ಗುರುಮೂತಿ೯ ಅವರ ನಂಬಿಕೆಗೆ ಚ್ಯುತಿ ಬರದಂತೆ ಇಷ್ಟು ವಷ೯ ಯಡೂರಪ್ಪರ ಏಳು ಬೀಳುಗಳ ಜೊತೆಯಲ್ಲೇ ಏಗಿದ್ದಾರೆ, ಯಡೂರಪ್ಪನವರು ತಡವಾಗಿ ಆದರೂ ಮರೆಯದೆ ಗುರುಮೂತಿ೯ಯವರಿಗೆ ರಾಜಕೀಯ ಸ್ಥಾನ ಮಾನ ನೀಡಿರುವುದು ಇವರ ಸಂಘಟನೆ, ಸೇವೆ ಮತ್ತು ಶ್ರಮಕ್ಕೆ ನೀಡಿದ ಪ್ರತಿಫಲವಾಗಿದೆ.
ಈ ಹಿಂದೆ ಶಿರಾಳಕೊಪ್ಪ ಮೂಲದ ಪದ್ಮನಾಭ ಭಟ್ಟರು ಈ ಸ್ಥಾನದಲ್ಲಿ ಆಡಳಿತ ನಡೆಸಿ ಹೆಸರುಗಳಿಸಿದ್ದರು.
8 ವಷ೯ದ ಹಿಂದೆ ಸಾಗರದ PNT ಕಛೇರಿಗೆ ಏನೋ ಕೆಲಸದ ನಿಮಿತ್ತ ಹೋಗುವಾಗ ಅಲ್ಲಿ ಬಂದಿದ್ದ ಗುರುಮೂತಿ೯ಯವರಿಗೆ ಗೆಳೆಯರು ಪರಿಚಯಿಸಿದಾಗ ಗುರುಮೂತಿ೯ಯವರು "ನನಗೆ ಅರುಣ್ ಪ್ರಸಾದ್ ಗೊತ್ತು ಅವರಿಗೆ ನನ್ನ ಗುರುತು ಉಂಟಾ ಕೇಳಿ " ಅಂದಾಗ ನಾನು ಸೇವಾಸಾಗರದ ಬೆಳಗಿನ ಸುಪ್ರಬಾತ ಅಂದಾಗ ಇಬ್ಬರೂ ನೆನಪಿಸಿ ಕೊಂಡು ನಗಾಡಿದ್ದೆವು.
ಸಕಾ೯ರದಲ್ಲಿ 80 ಶಾಸಕರು ಪ್ರತಿನಿದಿಸುವ ಅನೇಕ ಜಿಲ್ಲೆಯ ವ್ಯಾಪ್ತಿ ಹೊಂದಿರುವ ಮಲೆನಾಡು ಪ್ರದೇಶ ಅಭಿವೃದ್ದಿಗಾಗಿ ಆಗಿನ ಮುಖ್ಯಮಂತ್ರಿ ಬಂಗಾರಪ್ಪ ಸ್ಥಾಪಿಸಿದ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿರುವ ಸಾಗರದ ಗುರುಮೂತಿ೯ಯವರಿಗೆ ಅಭಿನಂದನೆ ಹೇಳೋಣ.
Comments
Post a Comment