#ಯಾರು_ಬೇಕಾದರು_ರಾಜ್ಯದಲ್ಲಿ_ಕೃಷಿಭೂಮಿ_ಖರೀದಿಸುವ_ಈ_ಹೊಸ_ಕಾನೂನು_ಬಗ್ಗೆ_ಚಚೆ೯
ಲ್ಯಾಂಡ್ ಆಕ್ಟ 79 A & B ಇಲ್ಲಿವರೆಗೆ ಯಾವ ರಿಯಲ್ ಎಸ್ಟೇಟ್ ವ್ಯಾಪಾರಕ್ಕೆ ತೊಂದರೆ ಮಾಡಿಲ್ಲ ಏಕೆಂದರೆ ರೈತನ ಹೆಸರಲ್ಲಿ ಭೂ ಪರಿವತ೯ನೆ ಮಾಡಿ ನಂತರ ಅವರ ಹೆಸರಿಗೆ ಖರೀದಿಸುತ್ತಾರೆ, ನಮ್ಮಲ್ಲಿ ಬೇರೆ ರಾಜ್ಯದಿಂದ ಬಂದವರಿಗೆ ಕೃಷಿ ಕುಟುಂಬದ ದೃಡೀಕರಣ ಪಡೆದು ಭೂಮಿ ಪರಭಾರೆ ಮಾಡಿದ್ದಾರೆ ಇಂತಹ ನಕಲಿ ದಾಖಲೆಯಿಂದನೇ ಭೂಮಿ ಖರೀದಿ ನಿರಾತಂಕ ಆಗಿ ನಡೆದಿದೆ.
ಆದರೆ ಕೃಷಿ ಮಾಡ ಬೇಕೆ೦ಬ ಆಸಕ್ತರಿಗೆ ಜಮೀನು ಖರೀದಿಸಲು ಈ ಲ್ಯಾಂಡ್ ಆಕ್ಟ್ ಅವಕಾಶ ನೀಡಿರಲಿಲ್ಲ.
ದೇಶದ ಅನೇಕ ರಾಜ್ಯದಲ್ಲಿ ಇರದ ಈ ಕಾಯ್ದೆ ನಮ್ಮ ರಾಜ್ಯದಲ್ಲಿತ್ತು, ಇಲ್ಲಿಯವರೆಗೆ ನಮ್ಮ ರಾಜ್ಯದ ರೈತರ ಅಭಿವೃದ್ದಿ ಈ ಕಾಯ್ದೆ ಇಲ್ಲದ ಬೇರೆ ರಾಜ್ಯದ ರೈತರ ಅಭಿವೃದ್ದಿ ಜೊತೆ ತುಲನೆ ಮಾಡಿ ನೋಡಬಹುದು.
ಇದು ರೈತರಿಗೆ ಮಾರಕ ಕಾನೂನು ತಿದ್ದುಪಡಿ ಎನ್ನುವವರು ಬೇರೆ ರಾಜ್ಯದಲ್ಲಿ ರೈತರಿಗೆ ಏನು ಮಾರಕ ಆಗಿದೆ ? ನೋಡಬಹುದು.
ಯಾವುದೇ ಬಂದನದ ಕಾನೂನು ಕಾಲಕ್ರಮೇಣ ಬದಲಾಗಬೇಕು.
ನಾನು ರಾಜ್ಯ ಸಕಾ೯ರ ಲ್ಯಾಂಡ್ ಆಕ್ಟ್ 79 A & B ರದ್ದು ಮಾಡಿದ್ದು ವೈಯಕ್ತಿಕವಾಗಿ ಸ್ವಾಗತಿಸುತ್ತೇನೆ ಇದರಿ೦ದ ರಾಜ್ಯದಲ್ಲಿ ಕೃಷಿ ಕ್ಷೇತ್ರದಲ್ಲಿ ಹೊಸ ಬದಲಾವಣೆ ನೋಡುವ ಸಾಧ್ಯತೆ ಇದೆ.
ಕೃಷಿ ಆಸಕ್ತ ಕೃಷಿಕರ ಹೊಸ ತಲೆಮಾರು ಬರಲಿದೆ ಮತ್ತು ಅದರಿಂದ ಹೆಚ್ಚು ಆಹಾರ ಸ್ವಾವಲಂಬನೆ ಮತ್ತು ಕೃಷಿ ಸಂಶೋದನೆ ಸಾಧ್ಯವಿದೆ.
ಉಳುಮೆ ಮಾಡದ ಭೂಮಿಗಳು ಉಳುಮೆ ಆಗಲಿದೆ.
Comments
Post a Comment