Skip to main content

Blog number 1632. ಕ್ರೀಡಾ ಮನೋಭಾವದ ಮಾನವೀಯ ಅಂತಃಕರಣದ ಶಿವಮೊಗ್ಗದ ಡಯಾಬಿಟಿಸ್ ತಜ್ಞ ಡಾ.ಪ್ರೀತಂ ಮತ್ತು ಅವರ ಡಯಾಬಿಟೀಸ್ ತಜ್ಞ ಚಿಕಿತ್ಸೆ

ಡಾಕ್ಟರ್ ಪ್ರೀತಂ ಎಂಬ ಮಾನವೀಯತೆ ಇರುವ ವೈದ್ಯರು 

 ಹಲೋ.. ಡಾಕ್ಟರ್ ಒಂದು ಪೇಶoಟ್ ಕಳಿಸ್ತಾ ಇದೀನಿ ಲಿವರ್ ಸಮಸ್ಯೆ ಅಂದೆ, ಕಳಿಸಿ ಚೆಕ್ ಮಾಡುತ್ತೇನೆ ಅಂದರು, ಎಷ್ಟು ಹಣ ಬೇಕಾಗಬಹುದು ಅಂದೆ 400 ಪರೀಕ್ಷೆಗೆ ಒಂದು 600 ಔಷದಿಗೆ  ಒಟ್ಟು 1000 ಕಳಿಸಿ ಅಂದರು.
  ಹೀಗೆ ನಾನು ಆಗಾಗ ನನ್ನ ಹತ್ತಿರ ಬರುವ ಅತ್ಯಂತ ಬಡವರನ್ನ ಇವರ ಹತ್ತಿರ ಇವರು ಸಿಗದಿದ್ದರೆ ಮೆಗಾನ್ ಆಸ್ಪತ್ರೆಯಲ್ಲಿ ನ ವೈದ್ಯ ದಂಪತಿ ನಾಗರಾಜ್ ಮತ್ತು ಶ್ರೀಮತಿ ರಾಜ ಲಕ್ಷ್ಮಿ ಹತ್ತಿರ ಕಳಿಸುತ್ತೇನೆ.
  ಸಂಜೆ ರೋಗಿ ಮಗನೊಂದಿಗೆ ಬಂದ ತಾಯಿ ಮೊಗದಲ್ಲಿ ಬೆಳಿಗ್ಗೆ ಇದ್ದ ಆತಂಕ ಕಳೆದು ನೆಮ್ಮದೀಯ ಜೀವನೋತ್ಸವ ಇತ್ತು, ವೈದ್ಯರು ಅವರ ಚಿಕಿತ್ಸೆಯ ಹಣವೂ ಪಡೆಯದೆ ಪರೀಕ್ಷೆ ಮಾಡಿ ಒಂದು ತಿಂಗಳ ಔಷಧಿ ಕಳಿಸಿದ್ದಾರೆ.
  ಶಿವಮೊಗ್ಗದ ಅನೇಕ ವೈದ್ಯರ ಪರಿಚಯ ಇದೆ ಆದರೆ ಅವರಾರು ಈ ಕೂಲಿ ಕಾಮಿ೯ಕರ, ಸಣ್ಣ ಜಾತಿಗಳ ಜನರ ಚಿಕಿತ್ಸೆಗೆ ಕಳಿಸಿದರೆ ಆಸಕ್ತಿ ತೋರಿಸುವುದಿಲ್ಲ, ಶ್ರೀಮಂತ ರೋಗಿಗಳೆ ಅವರ ಟಾಗೆ೯ಟ್ ಅದು ತಪ್ಪು ಅಲ್ಲ ಯಾಕೆಂದರೆ ಕಾಪೊ೯ರೇಟ್ ಆಸ್ಪತ್ರೆಗಳ ಅಘೋಷಿತ ನಿಯಮ ಕೂಡ.
  ಡಾ.ಪ್ರೀತಂ ಜಿಲ್ಲೆಯ ಪ್ರಖ್ಯಾತ ಮದುಮೇಹ ಕಾಯಿಲೆಯ ಪರಿಣಿತ ವೈದ್ಯರು, ಹಾಲಿ ದುಗಿ೯ಗುಡಿಯ ರಾಜ್ ಕುಮಾರ್ ಡಯೋಗ್ನೀಸ್ ಸೆಂಟರ್ ಇವರೆ ವಹಿಸಿಕೊಂಡಿದ್ದಾರೆ
ಇವರ ತಂದೆ ಡಾ. ಈಶ್ವರಪ್ಪನವರು ಸೊರಬ ಮೂಲದವರು, ಇವರು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆಯವರ ಆಪ್ತರು, ಇವರು ಬಳ್ಳಾರಿಯಲ್ಲಿ ಸಕಾ೯ರಿ ವೈದ್ಯರಾಗಿ ಪ್ರಸಿದ್ದರಾಗಿದ್ದರಿಂದ ರಾಮಕೃಷ್ಣ ಹೆಗ್ಗಡೆ ಇವರಿಗೆ ವಿಧಾನಸಭಾ ಚುನಾವಣೆಗೆ ಟಿಕೇಟ್ ಕೊಡಲು ಮುಂದಾಗಿದ್ದರು ಆದರೆ ಇವರು ಆಸಕ್ತಿ ತೋರಿಸಲಿಲ್ಲ, ಸ್ಪದಿ೯ಸಿದ್ದರೆ ಶಾಸಕರಾಗಿ ಮಂತ್ರಿ ಆಗಿ ಅತ್ಯುತ್ತಮ ರಾಜಕಾರಣಿ ಆಗುತ್ತಿದ್ದರು.
  ಇವರ ಸಹೋದರ ಡಾಕ್ಟರ್ ಚೇತನ್  ಕೂಡ ಶಿವಮೊಗ್ಗದ ಪ್ರಖ್ಯಾತ ದಂತ ವೈದ್ಯರು ಅವರದ್ದೇ ಸಾನಿಧ್ಯ ಡೆಂಟಲ್ ಕ್ಲಿನಿಕ್ ಪ್ರಸಿದ್ದಿ ಪಡೆದಿದೆ, ಡೆಂಟಲ್ ಕಾಲೇಜು ಪ್ರಿನ್ಸಿಪಾಲರೂ ಆಗಿದ್ದರು.
  ಡಾ.ಪ್ರೀತಂ ಕ್ರಿಕೆಟ್ ಆಟಗಾರರು, ರಣಜಿ ಕ್ರಿಕೆಟ್ ಅಂಪೈರಿಂಗ್ ಪರೀಕ್ಷೆಯಲ್ಲಿ ಉತ್ತೀಣ೯ರು, ಕಾರ್ ರೇಸ್ ಪ್ರವೀಣರು, ಎನ್ ಪೀಲ್ಡ್ ಬುಲೆಟ್ ಬೈಕ್ ನ ಕ್ಲಬ್ ಸದಸ್ಯರಾಗಿ ಬೈಕಿಂಗ್, ವಿದೇಶ ಪ್ರಯಾಣ, ಮೊನ್ನೆ  KTM ಬೈಕ್ ಖರೀದಿಸಿ ಪ್ರತಿದಿನ ಬೆಳಿಗ್ಗೆ 300 KM ಡ್ರೈವಿಂಗ್ ಮಾಡಿ ಹೊಸ ಬೈಕ್ ಪಳಗಿಸಲು ಶಿವಮೊಗ್ಗದಿಂದ ಸಿಸಿ೯ ತನಕ ಹೋಗಿ ಬರುವಾಗ ನಮ್ಮ ಮಲ್ಲಿಕಾ ಹೋಟೆಲ್ ನಲ್ಲಿ ಕಾಫಿ ಬ್ರೇಕ್ ಮಾಡುತ್ತಿದ್ದರು.
  ಇವರ ಹತ್ತಿರ ಬೈಕ್, ಕಾರ್ ಗಳ ಕಲೆ ಕ್ಷನ್ ಇದೆ, ಇವರ ಜೀವನ ಶೈಲಿಯಂತೆ ಮನೆಯೂ ಇದೆ, ಮೇಲ್ ಮಾಳಿಗೆಯಲ್ಲಿ ಸುಂದರವಾದ ಹೊಂಬಾರ್ ಮತ್ತು ಅದಕ್ಕೆ ಹೊಂದಿ ಕೊಂಡ ಮಿನಿ ಕಿಚನ್ ಇದೆ.
 ಒಮ್ಮೊಮ್ಮೆ ಡಾ.ಪ್ರೀತಂ ವೈದ್ಯರೋ.. ಕ್ರೀಡಾಪಟುಗಳ ಅ೦ತ ನನಗೆ ಗೊಂದಲ ಆಗುವಷ್ಟು ಅವರು ಬಹುಮುಖ ಕ್ರಿಯಾಶಾಲಿ ವ್ಯಕ್ತಿತ್ವದವರು ಆಗಿದ್ದಾರೆ. ಶಿವಮೊಗ್ಗದಲ್ಲಿ ರಿವರ್ಸ್ ಡಯಾಬಿಟೀಸ್ ಎಂಬ ಚಿಕಿತ್ಸೆ ಇವರು ಪ್ರಾರಂಭ ಮಾಡಿದ್ದಾರೆ ಇದು ಅನೇಕ ಕ್ರೋನಿಕ್ ಡಯಾಬಿಟೀಸ್ ಕಾಯಿಲೆ ಪೀಡಿತರಿಗೆ ಪುನರ್ಜನ್ಮ ನೀಡಿದೆ ನಾನು ಕಳಿಸಿದ ಅಂತಹವರು ಇವರ ಚಿಕಿತ್ಸೆ ಬಗ್ಗೆ ಸಂತೋಷದಿಂದ ಹೊಗಳುತ್ತಾರೆ
   ಶಿವಮೊಗ್ಗದಲ್ಲಿ ಇಂತಹ ಮಾನವೀಯ ಗುಣಗಳಿರುವ, ಬಡವರನ್ನ ಶೋಷಿಸದ, wrong diagnose ಮಾಡದ, ಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡದ ಕ್ರೀಡಾ ಮನೋಭಾವದ ಡಾ.ಪ್ರೀತಂ ಹೆಸರಿನ೦ತೆ ನನಗೆ ಪ್ರೀತಿ ಪಾತ್ರರಾಗಿ ಕಾಣುತ್ತಾರೆ ಅವರ ಸೆಲ್ ನಂಬರ್
+91 94491 38546
ಐಲೆಟ್ ಹಾಸ್ಪಿಟಲ್
ದ್ವಾರಕಾ ಕಲ್ಯಾಣ ಮಂಟಪ ಪಕ್ಕ
ರಾ.ಹೆ.69. ಶಿವಮೊಗ್ಗ - ಸಾಗರ ರಸ್ತೆ
ಶಿವಮೊಗ್ಗ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...