#ಇದು_ಕಾಲ್ಪನಿಕ_ಕಥೆ_ಅಲ್ಲ
#ಸತ್ಯ_ಕಥೆ
#ಕಪ್ಪೆ_ಮಳೆ
#ಎಲ್ಲಾದರೂ_ಕೇಳಿದವರು_ನೋಡಿದವರು_ಇದ್ದಾರ?
#ಮಳೆಯ_ಹನಿಗಳ_ಜೊತೆ_ದರೆಗೆ_ಉರುಳಿದ_ಕಪ್ಪೆಗಳು
https://youtu.be/a1NHfpV1sSA
ತುಂಬಾ ತಡವಾಗಿ ಮೊನ್ನೆ ಮಧ್ಯಾಹ್ನ ಮುಂಗಾರು ಮಳೆ ಪ್ರಾರಂಭವಾಯಿತು ಅಂತ ಸಂತಸದಲ್ಲಿದ್ದಾಗಲೆ ನಮ್ಮ ಕೆಲಸದ ಹೆಣ್ಣು ಮಗಳು ಜೋರಾಗಿ ಕೂಗುತ್ತಾ ಮಳೆಯ ಜೊತೆ ಕಪ್ಪೆಗಳು ಬೀಳುತ್ತಿದೆ ಅಂತ ಜೋರಾಗಿ ಭಯದಿಂದ ಕೂಗುತ್ತಾ ಓಡಿ ಆಫೀಸಿನ ಒಳ ಬಂದಾಗ ನನಗೂ ಆಶ್ವರ್ಯ.
ಅವಳು ದೈಯ೯ವಂತೆ ಹೆಣ್ಣು ಮಗಳು ಹಾಗೆಲ್ಲ ಸುಳ್ಳು ಹೇಳುವವಳೂ ಅಲ್ಲ, ಅವಳು ಮರುದಿನ ಭಾನುವಾರ ನಮ್ಮ ಕಲ್ಯಾಣ ಮಂಟಪದಲ್ಲಿ ನಿಗದಿ ಆಗಿದ್ದ ಮದುವೆಗಾಗಿ ಸ್ವಚ್ಚತಾ ಕೆಲಸ ನಿರ್ವಹಣೆ ಮಾಡುತ್ತಿರುವಾಗ ಬೆಳಗಿನಿಂದ ನಿಲ್ಲದ ಮಳೆ ನೋಡಿ ಮಳೆಯಲ್ಲೇ ಕಲ್ಯಾಣ ಮಂಟಪದಿಂದ ಲಾಡ್ಜ್ ಆಫೀಸಿಗೆ ಬರುವಾಗ ಅವಳ ಮೇಲೆ ಮಳೆಯ ಹನಿಯ ಜೊತೆ ಕಪ್ಪೆಗಳು ಬಿಳುವುದು ನೋಡಿ ಭಯ ಪಟ್ಟಿದ್ದಾಳೆ.
ಇವಳ ಮಾತು ಕೇಳಿದ ಬೇರೆ ಸಿಬ್ಬಂದಿಗಳು ಲಾಡ್ಜ್ ನ ಒಳಗಿನಿಂದಲೇ ಸ್ಲೈಡಿಂಗ್ ಕಿಟಕಿ ಸರಿಸಿ ಹೊರನೋಡಿ ಅವರೂ ಅಲ್ಲಿಂದಲೇ " ಹೌದು ಹೌದು ಮ೦ಜುಳಮ್ಮ ಹೇಳಿದ್ದು ಸತ್ಯ ..... ಮಳೆ ಜೊತೆ ಆಕಾಶದಿಂದ ಕಪ್ಪೆ ಬೀಳುತ್ತಿದೆ.... ನೋಡಿ ಬನ್ನಿ .... ಅಂದಾಗ ಎಲ್ಲಾ ಕೆಲಸದವರು ಪ್ರತ್ಯಕ್ಷ ಸಾಕ್ಷಿಗಳಾಗಿ ಸಾಕ್ಷಿಕರಿಸಿದರು.
ನನಗೆ ಇದು ಆಶ್ಚಯ೯ ಮತ್ತು ದಿಗಿಲಿಗೆ ಕಾರಣವಾಯಿತು ತಕ್ಷಣ ನನಗೆ ನೆನಪಾಗಿದ್ದು ಆಶ್ಲೇಷ ಮಳೆಯಲ್ಲಿ ಸೊಸಲೆ ಮೀನು ತೆಂಗಿನ ಮರ ಹತ್ತಿತ್ತು ಎನ್ನುವ ಗಾದೆ ಅದಕ್ಕೆ ವೈಜ್ಞಾನಿಕವಾಗಿ ಸಬೂತುಗಳಾದ ಕೆಲ ಘಟನೆಗಳು ಆದರೆ ಈ ವರ್ಷದಲ್ಲಿ ಮಳೆಯೇ ಪ್ರಾರಂಭ ಆಗಿಲ್ಲ ಮುಂಗಾರು ವಿಳಂಭವಾಗಿದೆ ಇವತ್ತು ಬೆಳಗಿನಿಂದ ಶುರುವಾದ ಮಳೆಗೆ ನಮ್ಮ ತೆಂಗಿನ ಮರ ಹತ್ತುವ ಮೀನಾಗಲಿ ಕಪ್ಪೆ ಆಗಲಿ ಅಸ೦ಭವ ಅನ್ನಿಸಿತು.
ಹಾಗಾದರೆ ನನ್ನ ಎಲ್ಲಾ ಕೆಲಸದವರ ಕಣ್ಣು ಸುಳ್ಳು ಹೇಳುತ್ತಾ?... ಮಳೆ ನೀರ ಜೊತೆ ಮೈ ಮೇಲೆ ಕಪ್ಪೆಯ ಮಳೆ ಬಿತ್ತು ಎನ್ನುವ ಕೆಲಸದವಳು ಎದುರಿಗೇ ಇದ್ದಾಳೆ...
ತಕ್ಷಣ ಕೇಳಿದೆ ಅದೇ ಗೊಜಮೊಟ್ಟೆಯ ಮಲಬಾರ್ ಕಪ್ಪೆನಾ ? ಎಂದೆ ಎಲ್ಲರೂ ಹೌದೆಂದರು ಆಗಲೇ ನನ್ನ ಯೋಚನೆ ವೇಗದಲ್ಲಿ ಓಡಿತು ಮತ್ತು ಅದೇ ಇಲ್ಲಿ ನಡೆದಿದೆ ಎಂದು ಗ್ಯಾರಂಟಿ ಆಯಿತು.
ಬುದ್ಧಿವಂತ ಯುವಕನನ್ನ ಫಸ್ಟ್ ಪ್ಲೋರ್ ಗೆ ಹೋಗಿ ವಿಡಿಯೋ ಮಾಡು ಅಲ್ಲಿ ಈ ಮಲಬಾರ್ ಪ್ರಾಗ್ ಕಲ್ಯಾಣ ಮಂಟಪದ ಮುಖ್ಯ ದ್ವಾರದ ಬಾಗಿಲಿಗೆ ಸ್ಲೋಪಾಗಿರುವ ರಾಂಪ್ ನ ಮೇಲಿಂದ ಮೊದಲ ಅಂತಸ್ತು ತಲುಪಿ ಅಲ್ಲಿ ಮುಖ್ಯ ದ್ವಾರ ಮುಚ್ಚಿರುವುದರಿಂದ ಎಡಕ್ಕೆ ತಿರುಗಿ ಅಲ್ಲಿಂದ ಮುಂದೆ ಹೋಗಲು ತಡೆ ಗೋಡೆ ಅಡ್ಡವಾದ್ದರಿಂದ ಅಲ್ಲಿಂದ ನಮ್ಮ ಸಂಸ್ಥೆಯ ಎಲೆಕ್ಟ್ರಿಕ್ ರೂಂನ ಹೆಂಚಿನ ಛಾವಣಿ ಮೇಲೆ ಹಾರಿ ಮಳೆ ನೀರಿನಿಂದ ಜಾರಿ ಅಲ್ಲಿ ಕೆಳಗೆ ಹೋಗುತ್ತಿದ್ದ ಕೆಲಸದವಳ ಮೇಲೆ ಬಿದ್ದಿದೆ ಈಗಲೂ ಅಲ್ಲಿಂದ ಕೆಳಕ್ಕೆ ಹಾರುತ್ತಿರುವುದನ್ನೆ ಇವರೆಲ್ಲ ಮಳೆ ಜೊತೆ ಆಕಾಶದಿಂದ ಕಪ್ಪೆ ಮಳೆ ಅಂತಾರೆ ಅಂದೆ.
ಇದು ಕಪ್ಪೆ ಮಳೆಯ ಸತ್ಯ ಕಥೆ ಹೌದು ಆದರೆ ಅಪರೂಪ ಆಗಿದ್ದ ಮಲಬಾರ್ ಪ್ರಾಗ್ ಮಾಡಿನ ಮೇಲೆ ತಲುಪಿ ದಾರಿ ಕಾಣದೆ ಪುನಃ ಹೆಂಚಿನ ಮೇಲಿಂದ ಜಾರಿ ಮಳೆಯ ಜೊತೆ ನೆಲ ತಲುಪಿದ ಕಥೆ.
ಇದನ್ನು ಕತ್ತಲ ರಾತ್ರಿಯಲ್ಲಿ... ಬಿರು ಮಳೆಯಲ್ಲಿ ಅಪರಿಚಿತ ಸ್ಥಳದಲ್ಲಿ ನನಗೆ ಅನುಭವ ಆಗಿದ್ದರೆ ಬೇರೆಯವರು ನಂಬದಿದ್ದರೂ ನನಗೆ ಮಾತ್ರ ಕಪ್ಪೆಯ ಮಳೆಯ ಅನುಭವ ಜೀವನ ಪರ್ಯಂತ ನೆನಪಲ್ಲಿ ಉಳಿಯುತ್ತಿತ್ತು ಆದರೆ ಇದು ಹಾಡು ಹಗಲೇ ನಮ್ಮದೇ ಅವರಣದಲ್ಲಿ ರಹಸ್ಯ ಬಯಲಾದ ಕಥೆ.
ವಾಸ್ತವ ಅರಿವಾದಾಗ ಎಲ್ಲರೂ ಹಗುರಾದರು ಎಲ್ಲರ ಮುಖದಲ್ಲೂ ನಗು ಮೂಡಿತು.
Comments
Post a Comment