ಶಿವಮೊಗ್ಗದ ಡಯಟ್ ಸಂಸ್ಥೆ ( ಜಿಲ್ಲಾ ತರಬೇತಿ ಸಂಸ್ಥೆ ) ಹಿರಿಯ ಉಪನ್ಯಾಸಕರಾಗಿರುವ ಹಿಂದೆ ಚೆನ್ನಗಿರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿದ್ದ ಡಾ.#ಹರಿಪ್ರಸಾದ್ ಅವರು ನಿನ್ನೆ ಆನಂದಪುರಂ ನಲ್ಲಿರುವ ಕೆಳದಿ ಅರಸರಾದ ರಾಜ ವೆಂಕಟಪ್ಪ ನಾಯಕರು ತನ್ನ ರಾಣಿ #ಚಂಪಕಾಳ ಸ್ಮರಣಾರ್ಥ ಚಂಪಕಾ_ಸರಸ್ಸು ನಿರ್ಮಿಸಿದ ಇತಿಹಾಸದ ಮೇಲೆ ಬರೆದಿರುವ ಈ ಸುಂದರ ಕವಿತೆಗಾಗಿ ಅಭಿನಂದಿಸುತ್ತೇನೆ
ಈ ಕವಿತೆ ಚಂಪಕಾಳ ರಂಗೋಲಿಯನ್ನು ಬೆಳಗಿಸಿದೆ ಬಹುಶಃ ಚಂಪಕಳ ಬಗ್ಗೆ ಇದು ಮೊದಲ ಕವಿತೆ ಆಗಿರಬೇಕು.
#ಚಂಪಕ
ಅಪರೂಪದ ರೋಹಿಣಿ
ವೈಶಾಖ ಮಾಸದಲಿ
ಕೆಳದಿಯಿಂದ ಹೊರಟ
ರಾಜ ಬೆಳ್ಳಿ ಬೆಳಕಲಿ
ವೆಂಕಟಪ್ಪ ಕಿರುನಗೆಯಲಿ
ಯಡೇಹಳ್ಳಿ ಕೋಟೆ ಕಂಡಾಗ
ಮಲಗಿತ್ತೂರು ಆನಂದದಲಿ
ಕಾದಿತ್ತು ಸ್ವಾಗತದ ರಂಗೋಲಿ
ವೆಂಕಟಪ್ಪ ಸಾಗಲಿಲ್ಲ ಮುಂದೆ
ಬೆಸ್ತರ ಕೇರಿಯಲಿ
ಗುತ್ತ್ಯಮ್ಮ ಗುಡಿಯ ಮುಂದೆ
ಮೂಡಿತ್ತು ರಂಗೋಲಿ
ಸೇತುವಾಗಿತ್ತು ಬಾನಿಗೆ
ಉದ್ದಗಲದ ರಂಗಿನಾ ಕಳೆ
ಕೆಳದಿ ಸೀಮೆಯೆಲ್ಲಾ ಮಳೆ
ಅದೃಷ್ಟದ ರಂಗೋಲಿಗೆ
ಮನ ಇಳೆಯು ತಂಪಾಗಿತ್ತು
ರಾಜ ಸೋತ ಹುಡುಕಿಸಿ
ಕುತೂಹಲದ ಗಿಳಿಯು ಹಾರಿ
ಬಿದನೂರು ಪಯಣ ನಿಲ್ಲಿಸಿ
ರಾಜನುಳಿದ ಆಕೆ ಕಾಣಲು
ವಾರ ಕಳೆದು ಕಂಡ ಆನಂದ
ಕಲೆಯಷ್ಟೇ ಕೈಯೂ ಚೆಂದ
ಕೈಯಂತೆಯೇ ಮನಚೆಂದ
ಮನದಂತೆ ಚಂದ ಚಂಪಕ
ಕಲೆಗೆ ಸೋತ ಮನಕೆ ಸೋತ
ಸೋತ ವೆಂಕಟಪ್ಪ ಚೆಲುವಿಗೆ
ಇತ್ತ ಚಂಪಕಳಿಗೂ ಮನಪಾತ
ಕಂಪ ಬೀರುತಿತ್ತು ಸಂಪಿಗೆ
- ಹರಿ, 5/6/21, 8.50 am
(ವೆಂಕಟಪ್ಪ - ಕೆಳದಿಯ ರಾಜಾ ವೆಂಕಟಪ್ಪ ನಾಯಕ,
ಯಡೇಹಳ್ಳಿ ಕೋಟೆ - ಇಂದಿನ ಆನಂದಪುರಂ.
*ಕಾಲ್ಪನಿಕ*)
Comments
Post a Comment