Skip to main content

Blog number 1572.ಚರಕಾ ಭಾಗಿರಥಿ ಈಗ ಖಾದಿಮನೆ ಭಾಗಿರಥಿ ಇವರಿಂದ ಹಸೆ ಚಿತ್ತಾರದ ಸ್ಪರ್ಶವಾಗುತ್ತದೆ ನಮ್ಮ ಲಾಡ್ಜ್ ಮುಂಬಾಗದಲ್ಲಿ.

https://youtu.be/VFQiwU6DaaQ

#ಬಹುಮುಖ_ಪ್ರತಿಭೆ_ಸೌಜನ್ಯದ_ಕಲಾವಿದೆ_ಭಾಗ_1.

#ಚರಕಾ_ಭಾಗಿರಥಿ_ಖಾದಿಮನೆ_ಭಾಗಿರಥಿ

#ಇವತ್ತು_ನನ್ನ_ಅತಿಥಿ

#ನಮ್ಮ_ಲಾಡ್ಜಗೆ_ಹಸೆ_ಚಿತ್ತಾರದ_ಸ್ಪರ್ಶ_ನೀಡುತ್ತಿದ್ದಾರೆ.

#ಇವರಿಗಾಗಿ_ಒಂದು_ವರ್ಷದಿಂದ_ಕಾಯುತ್ತಿದ್ದೆ.


  ಸುಮಾರು 28 ವರ್ಷದ ಹಿಂದೆ ಸಾಗರ ತಾಲ್ಲೂಕಿನಲ್ಲಿ ಯುವಜನರ ಪ್ರೇರೇಪಿಸುವ ಯಾವುದೇ ಜನಜಾಗೃತಿ ಕೆಲಸಗಳಲ್ಲಿ ಹೆಗ್ಗೋಡಿನ ಈ ಭಾಗಿರಥಿ, ಗೌರಮ್ಮ, ಪಣಿಯಮ್ಮ, ಭಾನುಮತಿ ಮತ್ತು ಸೈಯದ್ ಮಾಸ್ಟರ್ (ಹಾಡುಗಾರ್ತಿ ಸುಹಾನ ತಂದೆ) ನಮಗೆಲ್ಲ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವ ಸ್ವಯಂ ಸೇವಕರಾಗಿದ್ದರು.
  ಇವರೆಲ್ಲ ಹೆಗ್ಗೋಡಿನ ನೀನಾಸಂನ ಕೆ.ವಿ.ಸುಬ್ಬಣ್ಣರ ಗರಡಿಯಲ್ಲಿ ತಯಾರಾದ ಸಂಪನ್ನರು, ಇವರಿಗೆ ನಾವು ಒಂದು ರೂಪಾಯಿ ಕೂಡ ನಾವು ಕೊಡುತ್ತಿರಲಿಲ್ಲ (ಕೊಡಲು ನಮ್ಮ ಹತ್ತಿರ ಇರಲಿಲ್ಲ) ಆದರೂ ಬಂದು ಕಾರ್ಯಕ್ರಮ ಯಶಸ್ವಿಗೊಳಿಸುತ್ತಿದ್ದರು.
  ಇವರೆಲ್ಲರ ಸಹಕಾರದಿಂದಲೇ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ 1995-2000ದ ಅವದಿಯಲ್ಲಿ  ಆನಂದಪುರಂನಲ್ಲಿ ಕನ್ನಡ ಸಂಘದ ಆಗಿನ ಅಧ್ಯಕ್ಷ ಹಾ.ಮೋ.ಬಾಷಾ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ, ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪರ್ದೆ, ಜಿಲ್ಲಾ ಮಟ್ಟದ ಪತ್ರಕರ್ತರ ತರಬೇತಿ ಶಿಭಿರ,ಸಾಹಿತ್ಯ ತರಬೇತಿ ಶಿಭಿರ, ಡಾಕ್ಟರ್ ಎಂ.ಸಿ. ಮೋದಿ ನೇತ್ರ ಚಿಕಿತ್ಸಾ ಶಿಬಿರ ಮುಂತಾದ ಹಲವಾರು ಕಾರ್ಯಕ್ರಮ ನಡೆಸಿದ್ದೆವು.
  ನಮ್ಮ ಹೊಸ ಲಾಡ್ಜ್ 2019 ರಿಂದ ಪ್ರಾರಂಭ ಮಾಡುವಾಗಲೇ ಲಾಡ್ಜ್ ಎದುರು ಹಸೆ ಚಿತ್ತಾರದ ಕಲೆ ಮೂಡಿಸುವ ಕನಸಿತ್ತು ಆದರೆ ಅದು 2023ರ ಇವತ್ತಿನವರೆಗೆ ನನಸಾಗಿರಲಿಲ್ಲ.
  ಕಾಗೋಡು ಹೋರಾಟದ ನೇತಾರ ಹೆಚ್.ಗಣಪತಿಯಪ್ಪರ ಪುತ್ರ ಕೃಷ್ಣ ಮಾತ್ರ ಚರಕಾದ ಭಾಗಿರಥಿ ಅವರಿಂದಲೇ ಹಸೆ ಚಿತ್ತಾರ ಬಿಡಿಸಲು ಒತ್ತಾಯಿಸುತ್ತಿದ್ದರು.
  ನಂತರ ಚರಕಾ ಸಂಸ್ಥೆಯ ತೊರೆದ ಚರಕಾ ಭಾಗಿರಥಿ ಅವರು ಸಾಗರದ ಜೋಗ ರಸ್ತೆಯ ವರದಳ್ಳಿ ವೃತ್ತದಲ್ಲಿ ಸೌಪರ್ಣಿಕಾ ಲಾಡ್ಜ್ ಎದರು ಖಾದಿ ಮನೆ ಎಂಬ ಖಾದಿ ವಸ್ತ್ರ, ದೇಸಿ ಆಹಾರಗಳ ಮಾರಾಟ ಮಳಿಗೆ ತೆರೆದು ಖಾದಿ ಮನೆ ಭಾಗಿರಥಿ ಅಂತಲೇ ಪ್ರಸಿದ್ಧರಾಗಿದ್ದಾರೆ.
  ಬಹು ಮುಖ ಪ್ರತಿಭೆಯ ಸಣ್ಣ ದೇಹಾಕೃತಿಯ ಭಾಗಿರಥಿ ಸಾಧನೆ ಮಾತ್ರ ಸಣ್ಣದಲ್ಲ ಇವರ ಬದುಕಿನ ಪಯಣ ನೀನಾಸಂ ಹೆಗ್ಗೋಡು, ಚರಕ, ರಂಗಕಲಾವಿದೆ, ವಯಸ್ಕರ ಶಿಕ್ಷಣ, ಹಸೆ ಚಿತ್ತಾರ, ಜಾನಪದ ಕಲೆ, ಕೈಮಗ್ಗ,ಖಾದಿ, ನೈಸರ್ಗಿಕ ಬಟ್ಟೆ ಬಣ್ಣ, ಇದೆಲ್ಲದರ ತರಬೇತಿ, ಶಿವಮೊಗ್ಗ ಜಿಲ್ಲೆ ಮಾತ್ರ ಅಲ್ಲ ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ನೂರಾರು ಮಹಿಳಾ ನೇಕಾರರ ಕೈ ಮಗ್ಗಗಳ ಸಂಘಟನೆ ಮಾಡಿ ಅವರು ಈ ಉದ್ಯಮದಲ್ಲಿ ಯಶಸ್ಸು ಸಾದಿಸಲು ಕಾರಣಕರ್ತರಾಗಿದ್ದಾರೆ. 
   ಆದ್ದರಿಂದಲೇ ಒಂದು ವಷ೯ದಿಂದ ಇವರಿಗೆ ಕಾದಿದ್ದೆ ಇವತ್ತು ಭಾಗಿರಥಿ ಮತ್ತು ಮಡಸೂರು ಲಿಂಗದಳ್ಳಿಯ ನಿವೃತ್ತ ಅಂಗನವಾಡಿ ಶಿಕ್ಷಕಿ ಸುಶೀಲಮ್ಮ ಬಂದು ನಮ್ಮ ಲಾಡ್ಜ್ ಎದುರಿನ ಗೋಡೆಗೆ ಸುಂದರ ಕುಸೂತಿ ಹೆಣೆದ ಹಾಗೆ ಹಸೆ ಚಿತ್ತಾರ ಮೂಡಿಸುವ ಕೆಲಸ ಪ್ರಾರಂಬಿಸಿದ್ದಾರೆ.
  ಇದರ ಜೊತೆಗೆ ಇವತ್ತಿನಿಂದ ಖಾದಿ ಮನೆ ಭಾಗಿರಥಿ ಅವರ ಜೊತೆ ಅನೇಕ ವಿಚಾರಗಳನ್ನು ವಿಡಿಯೋದಲ್ಲಿ ದಾಖಲಿಸಿದ್ದು ಅದನ್ನು ಮುಂದಿನ ದಿನಗಳಲ್ಲಿ FB ಯಲ್ಲಿ ಪ್ರಕಟಿಸಲಿದ್ದೇನೆ.
  ಇವರ ಸಂಪರ್ಕ ಸಂಖ್ಯೆ 94822 77566

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...