Blog number 1587. ಕುಪ್ಪಳ್ಳಿ ಕುವೆಂಪು ಮನೆಯಿಂದ ಇಂಗ್ಲೇಂಡಿನ ಶೇಕ್ಸ್ಪಿಯರ್ ಮನೆವರೆಗೆ ಕೊಳಚಗಾರು ಮನೆಯ ಪತ್ರಕರ್ತ ಡಿ.ಪಿ. ಸತೀಶ್ ಪಯಣದ ಹಿಂದಿದೆ ಅವರ ಶ್ರಮ .
#ಕುಪ್ಪಳ್ಳಿ_ಕುವೆಂಪು_ಮನೆಯಿಂದ
#ಲಂಡನ್_ಶೇಕ್ಸಪಿಯರ್_ಮನೆಗೆ
#ಸಾಗರ_ತಾಲ್ಲೂಕಿನ_ತಲವಾಟ_ಗ್ರಾಮಪಂಚಾಯತನ_ಕೊಳಚಗಾರು_ಮನೆಯ_ಡಿಪಿ_ಸತೀಶ್.
ನಿನ್ನೆ ಡಿ.ಪಿ. ಸತೀಶ್ ಲಂಡನ್ ನಿಂದ 84 ಮೈಲು ದೂರದ ಸ್ವಾರ್ಟ್ ಪೋರ್ಡ್ - ಅಪಾನ್-ಅವೋನ್ ಇಂಗ್ಲೆಂಡ್ ನಲ್ಲಿರುವ ಹ್ಯಾಮ್ಲೆಟ್ ನಾಟಕ ಪ್ರಸಿದ್ದಿಯ ಶೇಕ್ಸ್ ಪಿಯರ್ ಹುಟ್ಟಿದ ಮನೆಗೆ ಹೋಗಿದ್ದರು, ಈ ಮನೆಯನ್ನು ಸಂರಕ್ಷಿಸಿರುವ ಟ್ರಸ್ಟಿಗಳು ಇವರ ಗೆಳೆಯರು ಅಲ್ಲಿ ಇವರ ಭಾಷಣ ಕೂಡ ಅವರು ವ್ಯವಸ್ಥೆ ಮಾಡಿದ್ದರು, ಇವರ ಟಾಕ್ ಅಲ್ಲಿನ ಸ್ಥಳಿಯ ಶೇಕ್ಸ್ ಪಿಯರ್ ಅಭಿಮಾನಿಗಳಿಗೆ ಟ್ರಸ್ಟಿಗಳಿಗೆ ತುಂಬಾ ಇಷ್ಟವಾಯಿತು ಅಂತ ಅವರು ತಿಳಿಸಿದಾಗ ನನಗೂ ಸಂತೋಷವಾಯಿತು.
ಡಿ.ಪಿ. ಸತೀಶರ ಅಗಾದ ಓದು ಮತ್ತು ನೆನಪಿನ ಶಕ್ತಿ ಅವರನ್ನು ಜಾಗತಿಕ ಮಟ್ಟದಲ್ಲಿ ಒಯ್ಯುತ್ತಿದೆ.
ಕಳೆದ ವರ್ಷ ಮೈಸೂರು - ಬೆಂಗಳೂರು - ತಾಳಗುಪ್ಪ ಎಕ್ಸಪ್ರೆಸ್ ರೈಲಿಗೆ ಕುವೆಂಪು ಎಕ್ಸಪ್ರೆಸ್ ನಾಮಕರಣಕ್ಕೆ ನಮ್ಮ ತಾಲೂಕಿನವರೇ ಆದ ಪತ್ರಕರ್ತ TV - 18 ದಕ್ಷಿಣ ಭಾರತ, ಶ್ರೀಲಂಕಾ ಮತ್ತು ಮಾರಿಷಸ್ ಉಸ್ತುವಾರಿ ಡಿ.ಪಿ.ಸತೀಶ್ ಕಾರಣಕರ್ತರು ಈ ಕಾರಣದಿಂದ ಅವರಿಗೆ ಇಷ್ಟ ಇಲ್ಲದಿದ್ದರೂ ಶಿವಮೊಗ್ಗ ಜಿಲ್ಲೆಯ ಕುವೆಂಪು ಅಭಿಮಾನಿಗಳ ಪರವಾಗಿ ನಾನು ಸನ್ಮಾನಿಸಿದ್ದೆ.
ಸಾಗರ ತಾಲ್ಲೂಕಿನ ತಲವಾಟ ಗ್ರಾಮ ಪಂಚಾಯಿತಿಯ ಇಡುವಾಣಿ ಸಮೀಪದ (ಜೋಗ ಜಲಪಾತ ಸಮೀಪದ) ಶರಾವತಿ ನದಿಯ ದಂಡೆಯ ಕೊಳಚಗಾರಿನ ಮನೆಯ ಡಿ.ಪಿ ಸತೀಶ್ ಸ್ಥಳಿಯ ಸರ್ಕಾರಿ ಕನ್ನಡ ಮಾದ್ಯಮ ಪ್ರಾಥಮಿಕ ಶಾಲೆ ನಂತರ ತಾಳಗುಪ್ಪದ ನಲಂದಾ ಪ್ರೌಡ ಶಾಲೆ, ಸಾಗರದ ಎಲ್ ಬಿ ಕಾಲೇಜಿನಲ್ಲಿ ಪದವಿ ಪಡೆದು ನಂತರ ಚೆನೈನಲ್ಲಿ ಪತ್ರಿಕೋದ್ಯಮದಲ್ಲಿ ಬಂಗಾರದ ಪದಕ ಪಡೆದ ಪ್ರತಿಭಾವಂತರು.
Comments
Post a Comment