Blog number 1615.ಕೋಕೋ ಕೋಲಾ ಪೆಪ್ಸಿ ಹಠಾವೋ ಭಾರತ್ ದೇಶ್ ಬಚಾವೋ ಘೋಷಣೆ ಸತತ 10ವರ್ಷ ಒಂದು ದಿನವೂ ತಪ್ಪದೆ ನಿತ್ಯ ದರಣಿ ಮೆರವಣಿಗೆ ಮಾಡಿ ದೆಹಲಿಯ ಸಂಸತ್ ಮಾರ್ಗದ ಪೋಲಿಸ್ ಠಾಣೆಯಲ್ಲಿ ಬಂದನಕ್ಕೆ ಒಳಗಾಗುತ್ತಿದ್ದ ಕುಂದಾಪುರದ ಅನಿಲ್ ಪ್ರಸಾದ್ ಹೆಗ್ಡೆ.
#ಇವರು_ಯಾರು_ಗೊತ್ತಾ?
#ಬಿಹಾರದಿಂದ_ಸಂಸದರು.
#ಇವರು_ಕುಂದಾಪುರದವರು
#ಜಾರ್ಜ್_ಫರ್ನಾಂಡೀಸರ_ನಂತರ_ಇನ್ನೊಬ್ಬ_ಕರಾವಳಿ_ಕನ್ನಡಿಗ_ಬಿಹಾರದಿಂದ_ಸಂಸತಗೆ
#ಕೊಕಾ_ಕೋಲಾ_ಪೆಪ್ಸಿ_ಹಠಾವೋ
#ಭಾರತ್_ದೇಶ್_ಬಚಾವೋ
#ಸತತ_ಹತ್ತು_ವರ್ಪ_ದೆಹಲಿಯಲ್ಲಿ_ನಿತ್ಯ_ಧರಣಿ_ಬಂದನ
#ನಾನು_ಇವರೊಡನೆ_ಎರೆಡು_ಸಾರಿ_ಭಾಗವಹಿಸಿದ್ದೆ.
ಜಾಜ್೯ ಪನಾ೯೦ಡಿಸರ ನಿಕಟವತಿ೯, ಹಾಲಿ ಬಿಹಾರದ ನಿತೀಶರ ಜೊತೆಗಾರರು ಮತ್ತು ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ ಆದ ಸಂಸದರು.
10 ವಷ೯ ನಿರ೦ತರವಾಗಿ ಒಂದು ದಿನವೂ ತಪ್ಪದೆ ಕೋಕೊಕೋಲಾ, ಪೆಪ್ಸಿ ವಿರುದ್ಧ ಪ್ರತಿ ದಿನ ಸಂಸದ ಭವನದ ಎದರು ದರಣಿ ಮಾಡಿ ಪ್ರತಿದಿನ ಸಂಸದ ಮಾಗ್೯ದ ಪೋಲಿಸ್ ಠಾಣೆಯಲ್ಲಿ ಬಂದನ ಬಿಡುಗಡೆ ಆಗುತ್ತಿದ್ದರು.
ಶ್ರೀ ಅನಿಲ್ ಪ್ರಸಾದ್ ಹೆಗ್ಡೆ ನಮ್ಮ ಕು೦ದಾಪುರದವರು, ಕನ್ನಡಿಗರು.
ಇವರು ನನ್ನ ಗೆಳೆಯರು ದೆಹಲಿಯಲ್ಲಿ ಎರಡು ಬಾರಿ ನಾನು ಇವರ ಚಳವಳಿಯಲ್ಲಿ ಭಾಗವಹಿಸಿ ಸಂಸದ ಭವನ ಮಾಗ್೯ದ ಫೋಲಿಸ್ ಠಾಾಣೆಯಲ್ಲಿ ಬಂದನಕ್ಕೆ ಒಳಗಾಗಿದ್ದು ಒಂದು ಸವಿ ನೆನಪು.
ಜಾರ್ಜ್ ಪರ್ನಾಂಡಿಸರ ಸಮತಾ ಪಾರ್ಟಿಯಲ್ಲಿ ನಂತರ ಅದು ಜನತಾ ದಳ U ಆದಾಗ ನಾನು ಕರ್ನಾಟಕ ರಾಜ್ಯದ ಪ್ರದಾನ ಕಾಯ೯ದರ್ಶಿ ಆದ್ದರಿಂದ ಈ ಹೋರಾಟದಲ್ಲಿ ಭಾಗವಹಿಸಲು ಅವಕಾಶವಾಗಿತ್ತು.
ಕರಾವಳಿಯ ಮಂಗಳೂರಿಂದ - ಮುಂಬೈ ಮತ್ತು ಬಿಹಾರದಿಂದ ಸಂಸದರಾಗಿ ಮಂತ್ರಿಗಳಾಗಿದ್ದ ಜಾರ್ಜ್ ನಂತರ ಕರಾವಳಿ ಕುಂದಾಪುರದ ಅನಿಲ್ ಪ್ರಸಾದ್ ಹೆಗ್ಡೆ ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವುದು ಕನ್ನಡಿಗರಿಗೆಲ್ಲ ಹೆಮ್ಮೆ ವಿಚಾರವೇ.
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಇವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬಹುದು
https://arunprasadhombuja.blogspot.com/2022/05/blog-number-864.html
Comments
Post a Comment