#ಮುಂಗಾರು_ಮಳೆ_ಪ್ರಾರಂಭದ_ಈ_ಕಪ್ಪೆ
https://youtu.be/I4_DORW7J9k
https://youtube.com/shorts/Db-F97P9D7Y?feature=share
#ಕೆರೆ_ಕಟ್ಟೆಯಲ್ಲಿ_ಗುಂಪು_ಗುಂಪಾದ_ಗೊಜಮೊಟ್ಟೆಯಿಂದ_ಕಪ್ಪೆ
#ಈ_ಕಪ್ಪೆ_ಜಾಸ್ತಿ_ಆದರೆ_ಮಳೆ_ಜಾಸ್ತಿ_ಅನ್ನುವ_ನಂಬಿಕೆ
#ಕಳೆದ_ವರ್ಷಗಳಲ್ಲಿ_ಮಳೆ_ಜಾಸ್ತಿ_ಆದಾಗ_ಈ_ಕಪ್ಪೆ_ಇಲ್ಲವೇ_ಇಲ್ಲ
#ಈ_ವಷ೯_ಮುಂಗಾರು_ವಿಳಂಬದಲ್ಲಿ_ಈ_ಕಪ್ಪೆ_ಜಾಸ್ತಿ_ಇದೆ_ಏಕೆ?
ಫೆಬ್ರುವರಿ ಕೊನೆಯಿಂದ ಮುಂಗಾರು ಪ್ರಾರಂಭದ ಕಾಲದವರೆಗೆ ನಮ್ಮ ಊರ ಸುತ್ತಮುತ್ತದ ಕೆರೆ ಕಟ್ಟೆಗಳಲ್ಲಿ ಈ ಕಪ್ಪೆ ಲಾವಾ೯ಗಳು ಕಪ್ಪಾದ ಬಣ್ಣದ ಗುಂಪು ಗುಂಪಾಗಿ ಕಾಣಿಸುತ್ತದೆ ಇದನ್ನು ಸ್ಥಳಿಯರು ಗೊಜ ಮೊಟ್ಟೆ ಅಂತ ಕರೆಯುತ್ತಾರೆ.
ಮುಂಗಾರು ಭೂಮಿಯ ಸ್ಪರ್ಶ ಮಾಡಿದಾಗ ಈ ಗೊಜ ಮೊಟ್ಟೆ ಎಂಬ ಲಾರ್ವಾಗಳು ಕಪ್ಪೆ ಮರಿಗಳಾಗಿ ನೀರಿನಿಂದ ಗುಂಪು ಗುಂಪಾಗಿ ಹೊರ ಬಂದು ಕೆರೆ ಕಟ್ಟೆಯಿಂದ ನೂರು ಅಥವ ಇನ್ನೂರು ಮೀಟರ್ ಕುಪ್ಪಳಿಸಿ ಮರ ಗಿಡದ ನೆರಳಲ್ಲಿ ಸೇರುತ್ತದೆ.
ಕಾಲು ಹೊಟ್ಟೆ ಕಪ್ಪಾಗಿರುವ ಈ ಕಪ್ಪೆಗಳ ಬೆನ್ನು ಮಾತ್ರ ಹಳದಿ ಇದು ಗಿಡ ಮರಗಳ ಬುಡದಲ್ಲಿ ಹೆಚ್ಚು ಇರುವುದರಿಂದ ಮರ ಕಪ್ಪೆ ಅಂತಲೂ ಕರೆಯುತ್ತಾರೆ ಆದರೆ ಇದಕ್ಕೆ ವೈಜ್ಞಾನಿಕವಾದ ಹೆಸರು ಗೊತ್ತಿರುವವರು ತಿಳಿಸಬಹುದು.
ಈ ಕಪ್ಪೆ ಕಳೆದ ಹತ್ತಾರು ವರ್ಷಗಳಿಂದ ಅತ್ಯಂತ ಕಡಿಮೆ ಆಗಿತ್ತು, ಗೊಜಮೊಟ್ಟೆಗಳೂ ಇರಲೇ ಇಲ್ಲ ಆದರೆ ಮಳೆ ಪ್ರಮಾಣ ಹೆಚ್ಚಾಗಿತ್ತು.
ಸ್ಥಳಿಯರಲ್ಲಿ ಒಂದು ನಂಬಿಕೆ ಇದೆ ಅದೇನೆಂದರೆ ಈ ಗೊಜಮೊಟ್ಟೆ ಕಪ್ಪೆ ಹೆಚ್ಚಾದರೆ ಮಳೆ ಜಾಸ್ತಿ ಅಂತ ಆದರೆ ಅನೇಕ ವರ್ಷದ ನಂತರ ಮೊದಲ ಬಾರಿಗೆ ಗೊಜಮೊಟ್ಟೆ ಕಪ್ಪೆ ನಮ್ಮ ಕಾಟೇಜಿನ ಗಾರ್ಡನ್ ನಲ್ಲಿ ಇರುವ ವಿಡಿಯೋ ಪೋಟೋ ನನ್ನ ಸಂಸ್ಥೆ ಸಹಯೋಗಿ ಕಣ್ಣೂರಿನ ನಾಗರಾಜ್ ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ.
ಜೂನ್ 22 ಆದರೂ ಮುಂಗಾರು ಮಳೆ ನಮ್ಮ ಊರಿಗೆ ಬಂದಿಲ್ಲ ಅಂದರೆ ಪ್ರಕೃತಿಯ ಸಂಪ್ರದಾಯಿಕ ನಂಬಿಕೆಗಳು ಬದಲಾಗಿರುವಂತ ಕಾಲಮಾನದಲ್ಲಿ ನಾವಿದ್ದೇವೆ.
ಸ್ಥಳಿಯರಾದ ನಮಗೆ ಈ ಕಪ್ಪೆ ಪ್ರಬೇದದ ಮಾಹಿತಿ ಇಲ್ಲ ಇದು ದೊಡ್ಡದಾಗುತ್ತದ ಅಥವ ಇದರ ಆಯಸ್ಸು ಕಡಿಮೆಯಾ ತಿಳಿದುಕೊಳ್ಳುವ ಆಸಕ್ತಿ ಇದೆ ಇದಕ್ಕಿಂತ ದೊಡ್ಡ ಗಾತ್ರ ಆಗಿದ್ದು ಯಾರೂ ನೋಡಿಲ್ಲ ಮತ್ತು ಮುಂಗಾರು ನಂತರ ಇದು ಕಾಣುವುದಿಲ್ಲ.
Comments
Post a Comment