Blog number 1599. ಹೊನಗೋಡು ರತ್ನಾಕರ್ ಕಾಂಗ್ರೇಸ್ ನಿಂದ ಮತ್ತು ನಾನು ಪಕ್ಷೇತರನಾಗಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ದಿಸಿದ್ದೆವು ಅದರ ನಂತರ 11 ವರ್ಷದ ನಂತರ ನಿನ್ನೆ ನನ್ನ ಅವರ ಬೇಟಿ ಆಯಿತು.
#ಹನ್ನೊಂದು_ವರ್ಷದ_ಮೇಲೆ_ವ್ಯವಹಾರಿಕವಾದ_ಸೌಹಾರ್ದ_ಬೇಟಿ
#ಹೊನಗೋಡು_ರತ್ನಾಕರ
#ಒಂದು_ಜಿಲ್ಲಾಪಂಚಾಯತ್_ಚುನಾವಣೆಯಲ್ಲಿ_ನಾವಿಬ್ಬರು_ಪರಸ್ಪರ_ಸ್ಪರ್ಧಿಗಳು
#ಪಕ್ಷೇತರವಾಗಿ_ಸ್ಪರ್ಧಿಸಿದ್ದ_ನನ್ನನ್ನು_ಕಾಂಗ್ರೇಸ್_ಪಕ್ಷದ_ರತ್ನಾಕರ್_139_ಮತಗಳಿಂದ_ಸೋಲಿಸಿದ್ದರು.
#ಆಗ_ಕುಗ್ವೆರವಿ_ಬಿಜೆಪಿ_ಅಭ್ಯಥಿ೯_ಮುಖ್ಯಮಂತ್ರಿ_ಯಡೂರಪ್ಪ_ಪ್ರಚಾರ_ಸಭೆ_ನಡೆಸಿದ್ದರು.
ನಾನು 2014 ರಿಂದ ರಾಜಕಾರಣದಿಂದ ನಿವೃತ್ತಿ ಘೋಷಿಸಿದ ನಂತರ ಎಲ್ಲಾ ಪಕ್ಷಗಳ ಮುಖಂಡರ ಜೊತೆ ಸಂವಹನ ಸಾದ್ಯವಾಗಿದೆ ರಾಜಕಾರಣ ಹೊರತು ಪಡಿಸಿದ ಸುಂದರವಾದ ನೆಮ್ಮದಿಯ ಜೀವನ ಇದೆ ಅನ್ನುವುದು ಗೊತ್ತಾಗಿದೆ.
ನಿನ್ನೆ ವ್ಯವಹಾರಿಕವಾದ ಒಂದು ಸೌಹಾರ್ದ ಬೇಟಿಗಾಗಿ ಮಾಜಿ ಜಿಲ್ಲಾಪಂಚಾಯತ್ ಸದಸ್ಯರಾದ ಹೊನಗೋಡು ರತ್ನಾಕರ್ ನನ್ನ ಆಪೀಸಿಗೆ ಇದೇ ಮೊದಲ ಬಾರಿ ಬಂದಿದ್ದರು, ನಮ್ಮ ಮಲ್ಲಿಕಾ ವೆಜ್ ರೆಸ್ಟೋರಾಂಟ್ ಗೆ ಆಗಾಗ ಬರುತ್ತಾರಂತೆ ಹೀಗೆ ಸುಮಾರು 11 ವರ್ಷದ ನಂತರದ ಬೇಟಿ ಮತ್ತು ಮಾತು.
ಅನಂದಪುರಂ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ರಾಜಕಾರಣದ ಹಿಡಿತ 2012 ರಿಂದ ಇವರ ನಿಯಂತ್ರಣದಲ್ಲಿದೆ, ಇವರ ಮಾತು ಕಾಗೋಡು ತಿಮ್ಮಪ್ಪರಿಗೆ ವೇದವಾಕ್ಯ ಆಗಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಟಿಕೇಟ್ ಗೆ ಇವರೂ ಅಜಿ೯ ಹಾಕಿದ್ದರು ನಂತರ ಗೋಪಾಲ ಕೃಷ್ಣ ಬೇಳೂರು ಕಾಂಗ್ರೇಸ್ ಅಭ್ಯರ್ಥಿ ಆದರು ಆಗ ಇವರು ಮತ್ತು ಕಾಗೋಡು ತಿಮ್ಮಪ್ಪ ಪುತ್ರಿ ಡಾ.ರಾಜನಂದಿನಿ ಯಡೂರಪ್ಪರ ಮುಖಂತರ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲರ ಸಮಕ್ಷಮ ಬಿಜೆಪಿ ಸೇರ್ಪಡೆ ಮಾಡಿಸಿದ ಹರತಾಳು ಹಾಲಪ್ಪರ ಪರ ಇವರು ಚುನಾವಣೆ ಪ್ರಚಾರ ಮಾಡಿದ್ದರು.
ಆನಂದಪುರಂನ ಭೂಮಾಲಿಕರು,ಕೊಡುಗೈ ದಾನಿ ಮತ್ತು ಆನಂದಪುರಂನ ಕನಕಮ್ಮಾಳ್ ಆಸ್ಟತ್ರೆ ನಿಮಿ೯ಸಿದ್ದ ರಾಮಕೃಷ್ಣ ಅಯ್ಯಂಗಾರರ ಯಡೇಹಳ್ಳಿಯ ಗೌರಿ ಕೆರೆ ಕೆಳಗಿನ ಗುಂಡಿಬೈಲು ಕೃಷಿ ಜಮೀನು ಪ್ರಖ್ಯಾತ ರೈಸ್ ಮಿಲ್ ಉದ್ಯಮಿ ಸುಬ್ಬಣ್ಣ ನಾಯಕರು ಖರೀದಿಸಿ ಮಂಗಳಾ ಅಡಿಕೆ ತೋಟ ಮಾಡಿದ್ದರು ಈಗ ಸುಬ್ಬಣ್ಣ ನಾಯಕರ ಮಕ್ಕಳಿಂದ ಹೊನಗೋಡು ರತ್ನಾಕರ ಈ ತೋಟ ಖರೀದಿಸಿ ಅದನ್ನು ಭೂ ಅಭಿವೃದ್ಧಿ ಮಾಡುತ್ತಿದ್ದಾರೆ.
ಇವರಿಗೆ ಇಬ್ಬರು ಪುತ್ರಿಯರು ಅವರಿಬ್ಬರೂ ವೈದ್ಯ ಶಾಸ್ತ್ರ ಓದುತ್ತಿರುವ ಬಗ್ಗೆ ಅವರ ಶುಂಠಿ ವ್ಯವಹಾರದ ಬಗ್ಗೆ ನನ್ನ ಕಛೇರಿಯಲ್ಲಿ ನನ್ನ ಚಹಾದ ಆತಿಥ್ಯ ಸ್ವೀಕರಿಸಿ ಮಾತನಾಡಿದರು.
ಚುನಾವಣೆ ಸ್ಪರ್ದೆ ಅಂದಾಗ ಜಿದ್ದಾ ಜಿದ್ದಿ, ಪರಸ್ಪರ ಕೆಸರೆರಚಾಟ ಸಹಜ ಆಗ ಇವರ ಜೊತೆಯವರು ಏನೆಲ್ಲಾ ಸಾಧ್ಯವೋ ಅಷ್ಟು ಕೆಟ್ಟದಾಗಿ ನನ್ನ ವಿರುದ್ದ ವೇದಿಕೆಗಳಲ್ಲಿ ಮಾತಾಡಿದರೂ ಹೊನಗೋಡು ರತ್ನಾಕರ ಅವರು ಮಾತಾಡಿದ್ದು "ಅರುಣ್ ಪ್ರಸಾದ್ ದೊಣ ಮೆಣಸಿನ ಕಾಯಿ .. ನಾನು ಚೂರ್ ಮೆಣಸಿನ ಕಾಯಿ" ಅಂತ ಮಾತ್ರ.
ಅವಕಾಶ ಸಿಕ್ಕರೆ ಬಿಜೆಪಿಯಿಂದ ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ತಿಳಿಸಿದರು ಜೊತೆಗೆ ಅವರು ರಾಜಕೀಯ ತೊರೆದ ನನ್ನ ಉದಾಹರಿಸಿ ತಮಗೂ ಕೆಲವೊಮ್ಮೆ ರಾಜಕೀಯ ಜಂಜಾಟವೇ ಬೇಡ ಅನ್ನಿಸುತ್ತೆ ಅಂದರು.
Comments
Post a Comment