Skip to main content

Posts

Showing posts with the label Eng Tirumalachar was Anandapuram Village panchayat presidentand famous PWD contractor p

ಆನಂದಪುರಂ ಇತಿಹಾಸ ಭಾಗ_6.ತಿರುಮಲಾಚಾರ್ ಗಣ್ಯ ಗುತ್ತಿಗೆದಾರರು,ಆನಂದಪುರಂನ ವಿಲೇಜ್ ಪಂಚಾಯತ್ ಅಧ್ಯಕ್ಷರು ಆಗಿದ್ದರು.ರಾಮಕೃಷ್ಣ ಆಯ್ಯಂಗಾರರ ಪ್ರೇರಣೆಯಿಂದ ಗೊರೂರಿನಿಂದ ಆನಂದಪುರಕ್ಕೆ ಬಂದ ಕುಟುಂಬದವರು. ಆ ಕಾಲದಲ್ಲಿ ಲಾರಿ_ ರಾಜದೂತ್ ಬೈಕ್ ಹೊಂದಿದ್ದ ಏಕೈಕ PWD ಗುತ್ತಿಗೆದಾರರು.

ಆನಂದಪುರಂ ಇತಿಹಾಸ ಭಾಗ_6 #ತಿರುಮಲಾಚಾರ್_ಗಣ್ಯ_ಗುತ್ತಿಗೆದಾರರು_ಆನಂದಪುರಂನ_ವಿಲೇಜ್_ಪಂಚಾಯತ್_ಅಧ್ಯಕ್ಷರು_ಆಗಿದ್ದರು. #ರಾಮಕೃಷ್ಣ_ಆಯ್ಯಂಗಾರರ_ಪ್ರೇರಣೆಯಿಂದ_ಗೊರೂರಿನಿಂದ_ಆನಂದಪುರಕ್ಕೆ_ಬಂದ_ಕುಟುಂಬದವರು.   #ಆ_ಕಾಲದಲ್ಲಿ_ಲಾರಿ_ರಾಜದೂತ್_ಬೈಕ್_ಹೊಂದಿದ್ದ_ಏಕೈಕ_PWD_ಗುತ್ತಿಗೆದಾರರು   ಇನಾಂದಾರರು, ಆನಂದಪುರಂ ನ ಏಕೈಕ ರೈಸ್ ಮಿಲ್ ಮಾಲಿಕರು ಹಾಗೂ ಕೊಡುಗೈ ದಾನಿ ಆಗಿದ್ದ ರಾಮಕೃಷ್ಣ ಅಯ್ಯಂಗಾರರ ಮೂಲ ಕುಟುಂಬಗಳು ಹಾಸನ ಜಿಲ್ಲೆಯ ಗೊರೂರಿನವರು, ಇವರೆಲ್ಲ ಮದ್ರಾಸ್ ನ ಅಯ್ಯಂಗಾರರು.   ಇವರೆಲ್ಲ ಮದ್ರಾಸ್ ನಿಂದ  ಹಾಸನದ ಗೊರೂರಿಗೆ ಬಂದ ಕಾರಣ ಗೊತ್ತಾಗಲಿಲ್ಲ, ಅಲ್ಲಿನ ಅಯ್ಯಂಗಾರರಿಂದಲೇ ಇವತ್ತು ಅಯ್ಯಂಗಾರ್ ಬೇಕರಿಗಳು ಪ್ರಸಿದ್ಧಿ ಆಗಿದೆ.     ರಾಮಕೃಷ್ಣ ಆಯ್ಯಂಗಾರ್ ರು ತಮ್ಮ ರೈಸ್ ಮಿಲ್ ಇತ್ಯಾದಿ ವ್ಯವಹಾರ ನೋಡಿಕೊಳ್ಳಲು ಗೊರೂರಿನಿಂದ ಶ್ರೀನಿವಾಸ ಅಯ್ಯಂಗಾರ್ ಮತ್ತು ಅವರ ಪತ್ನಿ ಶ್ರೀರಂಗಮ್ಮ ದಂಪತಿಗಳನ್ನು ಕರೆತರುತ್ತಾರೆ, ಇವರ ಜೊತೆ ರೈಲ್ವೆ ಗುತ್ತಿಗೆ ಕೆಲಸ ಮಾಡುತ್ತಿದ್ದ ಇವರ ಸಹೋದರ ಚೆಲುವಯ್ಯಂಗಾರ್ ಕುಟುಂಬ ಮತ್ತು ಇವರ ಅಣ್ಣನ ಮಗ ತಿರುಮಲಾಚಾರ್ ಕುಟುಂಬ ಕೂಡ ಆನಂದಪುರಂ ಗೆ ಬಂದು ನೆಲೆಸುತ್ತದೆ.    ಶ್ರೀನಿವಾಸಯ್ಯಂಗಾರ್ ಮತ್ತು ಶ್ರೀರಂಗಂ ದಂಪತಿಗಳಿಗೆ ವರದರಾಜ್, ತಿರುಮಲಾಚಾರ್, ರಂಗರಾಜನ್, ದಶರಾಶಿ ಎಂಬ ನಾಲ್ಕು ಗಂಡು ಮಕ್ಕಳು ಮತ್ತು ಆನಂದ...