ಅವಲಕ್ಕಿ
Flattened_Rice_Poha.
ನಮ್ಮ ಮಲ್ಲಿಕಾ ವೆಜ್ ರೆಸ್ಟೋರೆಂಟ್ ನಲ್ಲಿ ನಿತ್ಯ ಗ್ರಾಹಕರಿಗೆ ಅವಲಕ್ಕಿ ಲಭ್ಯವಿರುತ್ತದೆ.
ಶ್ರಾವಣ ಮಾಸದಲ್ಲಿ ದೂರದ ಬೆಳಗಾವಿ, ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ ಮತ್ತು ಸತಾರದಿಂದ ಜೈನ ಯಾತ್ರಿಗಳು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೊಂಬುಜ ಪದ್ಮಾವತಿ ದೇವಾಲಯಕ್ಕೆ ಬರುತ್ತಾರೆ ಅವರಿಗೆ ಅವಲಕ್ಕಿ ಬೇಕೇ ಬೇಕು.
ಅದೇ ರೀತಿ ಸಿಗಂದೂರು ಮತ್ತು ಬೇರೆ ದೇವಾಲಯಕ್ಕೆ ಹೋಗುವವರು ಬೇರೆ ಉಪಹಾರ ಸೇವಿಸುವುದಿಲ್ಲ.
ನಮ್ಮ ಮಲ್ಲಿಕಾ ವೆಜ್ ನಲ್ಲಿ ಅವಲಕ್ಕಿ, ಅವಲಕ್ಕಿ ಮೊಸರು ಮತ್ತು ಉಪ್ಪಿಟ್ಟು ಅವಲಕ್ಕಿ ಪ್ರತಿ ನಿತ್ಯ ಗ್ರಾಹಕರಿಗೆ ಲಭ್ಯವಿದೆ.
ಅವಲಕ್ಕಿ ಇತಿಹಾಸ ಎಷ್ಟು ಪುರಾತನ ಎಂಬುದನ್ನ ಈ ಕೆಳಗಿನ 👇🏽ಲೇಖನ ಓದಿ...
ಅವಲಕ್ಕಿ ಇತಿಹಾಸ ಅತ್ಯಂತ ಪ್ರಾಚೀನವಾದದ್ದು ಇದು ಯಾವುದೇ ಒಬ್ಬ ವ್ಯಕ್ತಿಯಿಂದ ಏಕಾಏಕಿ ಸಂಶೋಧನೆಯಾಗದೆ, ಪ್ರಾಚೀನ ಕೃಷಿ ಪದ್ಧತಿ ಮತ್ತು ಆಹಾರ ಸಂರಕ್ಷಣಾ ವಿಧಾನಗಳಿಂದ ವಿಕಸನಗೊಂಡಿತು.
ಪ್ರಾಚೀನ ಭಾರತದಲ್ಲಿ ಕಟಾವಾದ ಹೊಸ ಭತ್ತವನ್ನು ಬೇಗ ಹಾಳಾಗದಂತೆ ದೀರ್ಘಕಾಲ ಇಡಲು ಮತ್ತು ಬೆಂಕಿಯ ಸಹಾಯವಿಲ್ಲದೆ ಸುಲಭವಾಗಿ ಸೇವಿಸಲು ರೈತರು ಕಂಡುಕೊಂಡ ಸರಳ ವಿಧಾನವಿದು.
ತಯಾರಿಕೆಯ ಮೂಲ ವಿಧಾನ, ಹೊಸದಾಗಿ ಕಟಾವು ಮಾಡಿದ ಭತ್ತವನ್ನು ನೀರಿನಲ್ಲಿ ನೆನೆಸಿ, ನಂತರ ಬಿಸಿ ಮರಳಿನಲ್ಲಿ ಹುರಿದು, ಒನಕೆ ಅಥವಾ ಕಲ್ಲಿನಿಂದ ಜಜ್ಜಿ ಸಿಪ್ಪೆ ಬೇರ್ಪಡಿಸುತ್ತಿದ್ದರು.
ಹೀಗೆ ಚಪ್ಪಟೆಯಾದ ಅಕ್ಕಿಯೇ "ಅವಲಕ್ಕಿ" (ಅವಲ್ ಎಂದರೆ ತಮಿಳು/ಕನ್ನಡದ ಪ್ರಾಚೀನ ದ್ರಾವಿಡ ಬೇರಿನಲ್ಲಿ 'ಜಜ್ಜುವುದು' ಅಥವಾ 'ಚಪ್ಪಟೆ ಮಾಡುವುದು').
ಐತಿಹಾಸಿಕ ಉಲ್ಲೇಖಗಳಲ್ಲಿ ಮತ್ತು ವೈದಿಕ ಸಾಹಿತ್ಯದಲ್ಲಿ ಇದಕ್ಕೆ ‘ಪೃಥುಕ’ ಎಂದು ಕರೆಯಲಾಗಿದೆ.
ಮಹಾಭಾರತ ಮತ್ತು ಭಾಗವತದಲ್ಲಿ ಶ್ರೀಕೃಷ್ಣನಿಗೆ ಸುಧಾಮ/ಕುಚೇಲ ಪ್ರೀತಿಯಿಂದ ಅವಲಕ್ಕಿಯನ್ನು ನೀಡಿದ ಪ್ರಸಿದ್ಧ ಪ್ರಸಂಗವು ಇದರ ಪ್ರಾಚೀನತೆಯನ್ನು ಸಾಬೀತುಪಡಿಸುತ್ತದೆ.
ಪ್ರಯಾಣಿಕರ ತ್ವರಿತ ಆಹಾರವಾಗಿ ಪ್ರಾಚೀನ ಕಾಲದಲ್ಲಿ ವ್ಯಾಪಾರಿಗಳು, ಸೈನಿಕರು ಮತ್ತು ತೀರ್ಥಯಾತ್ರಿಗಳು ಪ್ರಯಾಣಿಸುವಾಗ ಒಲೆ ಹಚ್ಚುವ ಅಗತ್ಯವಿಲ್ಲದೆ ಕೇವಲ ನೀರು ಅಥವಾ ಹಾಲಿನಲ್ಲಿ ನೆನೆಸಿ ತಿನ್ನಲು ಅವಲಕ್ಕಿ ಅತ್ಯಂತ ಉಪಯುಕ್ತವಾಗಿತ್ತು.
ಕೃಷ್ಣ ಕುಚೇಲರ ಪ್ರಭಾವದಿಂದ ಹಿಂದೂ ಧರ್ಮಿಯರಲ್ಲಿ ಈಗಲೂ ಒಂದು ಪದ್ದತಿ ಇದೆ ಯಾರಾದರೂ ಅವಲಕ್ಕಿ ತಿನ್ನಿ ಎಂದರೆ ಬೇಡ ಎನ್ನಲೇ ಬಾರದು ಶಾಸ್ತ್ರಕ್ಕಾಗಿ ಒಂದೆರೆಡು ಅವಲಕ್ಕಿ ಆದರೂ ಬಾಯಿಗೆ ಹಾಕಿಕೊಳ್ಳಬೇಕು ಎಂಬುದು.
ನೀವು ಅವಲಕ್ಕಿ ಪ್ರಿಯರಾ? ಅವಲಕ್ಕಿ ಬಗ್ಗೆ ನಿಮ್ಮ ಅಭಿಪ್ರಾಯ ಬರೆಯಿರಿ.
#ಮಲ್ಲಿಕಾ_ವೆಜ್_ರೆಸ್ಟೋರೆಂಟ್
NH 69, ಯಡೇಹಳ್ಳಿ ವೃತ್ತ,
#ಆನಂದಪುರಂ. ಸಾಗರ ತಾಲೂಕ್ - ಶಿವಮೊಗ್ಗ ಜಿಲ್ಲೆ.
#flatterdrice #avalakki #lordkrishna #kuchela #bhagavatha #mallikaveg
#anandapuram #sagar #shivamogga
Comments
Post a Comment