#ಹತ್ತನೆ_ಶತಮಾನದಲ್ಲಿ_ಆಚಾಪುರದ_ಹೆಸರು_ಮಾಚರಾಜಪುರ #ಆಚಾಪುರ_ತೀರ್ಥದಲ್ಲಿನ_ಹತ್ತನೇ_ಶತಮಾನದ_ಶಿಲಾಶಾಸನ, #ಕಲ್ಯಾಣಿ_ಚಾಲುಕ್ಯರಾಜ_ಇಮ್ಮುಡಿ_ಜಯಸಿಂಹನ_ಸಾಮಂತ_ಮಾಚಿರಾಜನ_ಶಾಸನ #ಈಗಿನ_ಅಂದಾಸುರ_ಆ_ಕಾಲದಲ್ಲಿ_ಮಾಚಿರಾಜನ_ರಾಜದಾನಿ_ಆಗಿತ್ತು. #ಆಚಾಪುರದ_ಜಮೀನ್ದಾರರಾಗಿದ್ದ_ದಿವಂಗತ_ಬಸಪ್ಪಗೌಡರು_ಶಿಲಾಶಾಸನ_ಸಂರಕ್ಷಿಸಿಟ್ಟಿದ್ದಾರೆ #ಮಾಚಿರಾಜ_ಸ್ಥಾಪಿಸಿದ_ಮಾಚೇಶ್ವರ_ಆದಿತ್ಯ_ವಿಷ್ಣು #ಆದಿತ್ಯ_ವಿಷ್ಣು_ದೇವಾಲಯದ_ಸ್ಥಳ_ಅಕ್ಕಪಕ್ಕದಲ್ಲಿದ್ದು_ಅವಸಾನ_ಹೊಂದಿರಬೇಕು. #ಈಗ_ಇರುವುದು_ಮಾಚೇಶ್ವರ_ಮಾತ್ರ_ಅದು_ಜನರ_ಬಾಯಲ್ಲಿ_ತೀರ್ಥದ_ಈಶ್ವರ. #ಅಲ್ಲಿರುವ_ಬೋರ್ಡ್_ಮಹಾಬಲೇಶ್ವರ_ದೇವಾಲಯ_ಬಸವ_ತೀರ್ಥ_ಆಚಾಪುರ_ಎಂದಿದೆ. #ಕಾಲಾಂತರದಲ್ಲಿ_ಇಲ್ಲಿದ್ದ_ಆದಿತ್ಯ_ಮತ್ತು_ವಿಷ್ಣು_ದೇವರು_ಇಲ್ಲವಾಗಿದೆ. ಎಪಿಗ್ರಾಪಿಯಾ ಕನಾ೯ಟಕ ಸಂಪುಟದಲ್ಲಿ 1902 ರಲ್ಲಿ ಆಗಿನ ಮೈಸೂರು ರಾಜ್ಯದ ಆರ್ಕಾಲಾಜಿಕಲ್ ಡಿಪಾರ್ಟ್ಮೆ೦ಟ್ ನಿರ್ದೇಶಕರಾಗಿದ್ದ ಬೆಂಜಮಿನ್ ಲೇವಿಸ್ ರೈಸ್ ರವರು ಸ್ವತಃ ಬಂದು ಆನಂದಪುರಂನ ಈ ಶಿಲಾ ಶಾಸನಗಳ ದಾಖಲು ಮಾಡಿರುವುದು ವಿಶೇಷ. ಈ ಶಿಲಾ ಶಾಸನದ ಕಾಲ ಮಾನ ಕ್ರಿ.ಶ.1079 ಅಂದರೆ 945 ವರ್ಷಗಳ ಹಿಂದಿನ ಈ ಶಿಲಾ ಶಾಸನ ಆನಂದಪುರಂ ಇತಿಹಾಸಕ್ಕೆ ಅತ್ಯಂತ ಮಹತ್ವದಾಗಿದೆ. ಈ ಶಿಲಾ ಶಾಸನ ಆಚಾಪುರದ ತೀರ್ಥದ ಹಾಲಿ ಈಶ್ವರ ದೇವಸ್ಥಾನದಲ್ಲಿ ನವೀಕೃತ ದೇವಾಲಯದಲ್ಲಿ ಒಳ ಭಾಗದಲ್ಲಿ ಸುರಕ್ಷಿತವಾಗಿ ...