Skip to main content

Posts

Showing posts with the label Wild Elephants appears in Sagar-Hosanagara-Thirthalli taluk

Blog number 1792. ಮಲೆನಾಡು ಪ್ರದೇಶವಾದ ಶಿವಮೊಗ್ಗ ಜಿಲ್ಲೆಯ ಸಾಗರ - ತೀರ್ಥಹಳ್ಳಿ - ಹೊಸನಗರ ತಾಲೂಕುಗಳಲ್ಲಿ ಕಾಡಾನೆಗಳ ಸಂಚಾರ.

https://youtu.be/OQeD71WPZBw?feature=shared #ಕಳೆದ_ವಾರ_ಸಾಗರ_ಹೊಸನಗರ_ಬಾರ್ಡರ್_ಕೆಂಚನಾಲದಲ್ಲಿ_ಕಾಣಿಸಿಕೊಂಡ_ಕಾಡಾನೆ_ಮತ್ತು_ಮರಿಯಾನೆ . #ಕೆಲವು_ದಶಕದ_ನಂತರ_ಸಾಗರ_ಹೊಸನಗರ_ತೀರ್ಥಹಳ್ಳಿ_ತಾಲ್ಲೂಕುಗಳಲ್ಲಿ_ಕಾಡಾನೆ. #ಎಪ್ಪತ್ತರ_ದಶಕದಲ್ಲಿ_ಅರಸಾಳಿನಲ್ಲಿ_ಖೆಡ್ಡಾದಲ್ಲಿ_ಸೆರೆಹಿಡಿದ_ಆನೆ_ಮೃತವಾಗಿತ್ತು. #ಕೆಲವಷ೯ದ_ಹಿಂದೆ_ಸಾಗರ_ತಾಲ್ಲುಕಿನ_ಗಿಣಿವಾರದಲ್ಲಿ_ಮಹಿಳೆ_ಕೊಂದ_ಕಾಡಾನೆ. #ಆಗುಂಬೆ_ಭಾಗದಲ್ಲಿ_ಸಂಚರಿಸುತ್ತದೆ.    1930 ರ ನಂತರ ಮಲೆನಾಡಿನ ಸಾಗರ - ಹೊಸನಗರ - ತೀರ್ಥಹಳ್ಳಿ ಭಾಗದಲ್ಲಿ ಕಾಡಾನೆ ಸಂಚಾರ ಕ್ರಮೇಣವಾಗಿ ಕಡಿಮೆ ಆಗಿ ನಂತರ ಕಾಡಾನೆ ಈ ಭಾಗದಲ್ಲಿ ಘೋಚರಿಸಲೇ ಇಲ್ಲ.    ಜೋಗದ ಎ.ಬಿ. ಸೈಟಿನಲ್ಲಿ ದಾಂಡೇಲಿ ಅರಣ್ಯದಿಂದ ನೂರಾರು ಕಾಡಾನೆಗಳು ಬಂದು ಹೋಗುತ್ತಿದ್ದ ಆನೆ ಕಾರಿಡಾರ್ ವಿದ್ಯುತ್ ಯೋಜನೆಯಿಂದ ಈಗಿಲ್ಲ.   1970 ರ ದಶಕದಲ್ಲಿ ರಿಪ್ಪನ್ ಪೇಟೆ ಸಮೀಪದ ಅರಸಾಳು ಕೇಂದ್ರವಾಗಿಸಿಕೊಂಡು ಒಂದು ಕಾಡಾನೆ ಸಂಚರಿಸುತ್ತಿತ್ತು ನಂತರ ಅದು ಜನ ಸಾಮಾನ್ಯರಿಗೆ ತೊಂದರೆ ಕೊಡಲು ಪ್ರಾರಂಬಿಸಿದ್ದರಿಂದ ಮತ್ತು ಆಯನೂರು ರಿಪ್ಪನ್ ಪೇಟೆ ರಸ್ತೆ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಈ ಆನೆಯ ಕಾಟದಿಂದ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೂ ಭಯ ಪಡುವಂತಾದಾಗ ಸರ್ಕಾರ ಈ ಆನೆ ಹಿಡಿಯಲು ತೀರ್ಮಾನಿಸಿತ್ತು.   ಆಗ ಕಾಡಾನೆ ಹಿಡಿಯುವ ಮತ್ತು ಪಳಗಿಸುವ ವಿಧಾನ ಶತಮಾನಗಳಷ್ಟು ಹಿಂದಿನ ಮಾದರಿ ...