Blog number 1792. ಮಲೆನಾಡು ಪ್ರದೇಶವಾದ ಶಿವಮೊಗ್ಗ ಜಿಲ್ಲೆಯ ಸಾಗರ - ತೀರ್ಥಹಳ್ಳಿ - ಹೊಸನಗರ ತಾಲೂಕುಗಳಲ್ಲಿ ಕಾಡಾನೆಗಳ ಸಂಚಾರ.
https://youtu.be/OQeD71WPZBw?feature=shared
#ಕಳೆದ_ವಾರ_ಸಾಗರ_ಹೊಸನಗರ_ಬಾರ್ಡರ್_ಕೆಂಚನಾಲದಲ್ಲಿ_ಕಾಣಿಸಿಕೊಂಡ_ಕಾಡಾನೆ_ಮತ್ತು_ಮರಿಯಾನೆ .
#ಕೆಲವು_ದಶಕದ_ನಂತರ_ಸಾಗರ_ಹೊಸನಗರ_ತೀರ್ಥಹಳ್ಳಿ_ತಾಲ್ಲೂಕುಗಳಲ್ಲಿ_ಕಾಡಾನೆ.
#ಎಪ್ಪತ್ತರ_ದಶಕದಲ್ಲಿ_ಅರಸಾಳಿನಲ್ಲಿ_ಖೆಡ್ಡಾದಲ್ಲಿ_ಸೆರೆಹಿಡಿದ_ಆನೆ_ಮೃತವಾಗಿತ್ತು.
#ಕೆಲವಷ೯ದ_ಹಿಂದೆ_ಸಾಗರ_ತಾಲ್ಲುಕಿನ_ಗಿಣಿವಾರದಲ್ಲಿ_ಮಹಿಳೆ_ಕೊಂದ_ಕಾಡಾನೆ.
#ಆಗುಂಬೆ_ಭಾಗದಲ್ಲಿ_ಸಂಚರಿಸುತ್ತದೆ.
1930 ರ ನಂತರ ಮಲೆನಾಡಿನ ಸಾಗರ - ಹೊಸನಗರ - ತೀರ್ಥಹಳ್ಳಿ ಭಾಗದಲ್ಲಿ ಕಾಡಾನೆ ಸಂಚಾರ ಕ್ರಮೇಣವಾಗಿ ಕಡಿಮೆ ಆಗಿ ನಂತರ ಕಾಡಾನೆ ಈ ಭಾಗದಲ್ಲಿ ಘೋಚರಿಸಲೇ ಇಲ್ಲ.
ಜೋಗದ ಎ.ಬಿ. ಸೈಟಿನಲ್ಲಿ ದಾಂಡೇಲಿ ಅರಣ್ಯದಿಂದ ನೂರಾರು ಕಾಡಾನೆಗಳು ಬಂದು ಹೋಗುತ್ತಿದ್ದ ಆನೆ ಕಾರಿಡಾರ್ ವಿದ್ಯುತ್ ಯೋಜನೆಯಿಂದ ಈಗಿಲ್ಲ.
1970 ರ ದಶಕದಲ್ಲಿ ರಿಪ್ಪನ್ ಪೇಟೆ ಸಮೀಪದ ಅರಸಾಳು ಕೇಂದ್ರವಾಗಿಸಿಕೊಂಡು ಒಂದು ಕಾಡಾನೆ ಸಂಚರಿಸುತ್ತಿತ್ತು ನಂತರ ಅದು ಜನ ಸಾಮಾನ್ಯರಿಗೆ ತೊಂದರೆ ಕೊಡಲು ಪ್ರಾರಂಬಿಸಿದ್ದರಿಂದ ಮತ್ತು ಆಯನೂರು ರಿಪ್ಪನ್ ಪೇಟೆ ರಸ್ತೆ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಈ ಆನೆಯ ಕಾಟದಿಂದ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೂ ಭಯ ಪಡುವಂತಾದಾಗ ಸರ್ಕಾರ ಈ ಆನೆ ಹಿಡಿಯಲು ತೀರ್ಮಾನಿಸಿತ್ತು.
ಆಗ ಕಾಡಾನೆ ಹಿಡಿಯುವ ಮತ್ತು ಪಳಗಿಸುವ ವಿಧಾನ ಶತಮಾನಗಳಷ್ಟು ಹಿಂದಿನ ಮಾದರಿ ಆಗಿದ್ದ ಖೆಡ್ಡಾ ಮಾದರಿ ಅದರಂತೆ ಅರಸಾಳಿನಲ್ಲಿ ದೊಡ್ಡದಾದ ಬಾವಿ ಆಕಾರದಲ್ಲಿ ಮಣ್ಣು ತೆಗೆದು, ತೆಗೆದ ಮಣ್ಣು ಆನೆಗೆ ಸಂಶಯ ಬರದಂತೆ ಅಲ್ಲಿಂದ ಬಹುದೂರಕ್ಕೆ ರವಾನಿಸಿ ಆ ಬಾವಿ ಆಕಾರದ ಖೆಡ್ಡಾ ದ ಮೇಲೆ ಅಡ್ಡವಾಗಿ ಮರದ ರೆಂಬೆ ಹಾಕಿ ಅದರ ಮೇಲೆ ಸೊಪ್ಪು ಹಾಸಿ, ಸೊಪ್ಪಿನ ಮೇಲೆ ಮಣ್ಣು ಹರಡಿ ಅದಕ್ಕೆ ನೀರು ಗೊಬ್ಬರ ಹರಡಿ ರಾಗಿ ಬಿತ್ತುತ್ತಾರೆ ಕೆಲವೇ ದಿನಗಳಲ್ಲಿ ರಾಗಿ ಬೆಳೆದು ಹಸಿರಾದಾಗ ಕಾಡಾನೆ ಇದನ್ನು ನೋಡಿ ಆಸೆಯಿಂದ ರಾಗಿ ಹುಲ್ಲನ್ನು ತಿನ್ನಲು ಬಂದಾಗ ಖೆಡ್ಡಾದ ಶಿಥಿಲ ಮೇಲ್ಚಾವಣೆ ಕುಸಿದು ಬಾವಿ (ಖೆಡ್ಡಾ) ಒಳಗೆ ಬೀಳುತ್ತದೆ ಇದೇ ಕಾಡಾನೆ ಹಿಡಿಯುವ ಖೆಡ್ಡಾ ಯೋಜನೆ.
ಆದರೆ ದುರದೃಷ್ಟಕ್ಕೆ ಆ ಕಾಡಾನೆ ಬದುಕಲಿಲ್ಲ, ಅಲ್ಲಿವರೆಗೆ ಅರಸಾಳಿನ ಕಾಡಾನೆಯಿಂದ ಬೇಸತ್ತಿದ್ದ ಸ್ಥಳಿಯರು ಈ ಕಾಡಾನೆ ಮೇಲೆ ವ್ಯಕ್ತಪಡಿಸುತ್ತಿದ್ದ ಕೋಪ ತಾಪಗಳು ಈ ಖೆಡ್ಡಾ ದುರಂತದಲ್ಲಿ ಆನೆ ಜೀವ ತ್ಯಾಗದಿಂದ ಬದಲಾಗಿ ದುಃಖದ ಕಣ್ಣೀರಾಗಿ ಅನೇಕ ವರ್ಷ ನಮ್ಮ ಭಾಗದಲ್ಲಿ ಇದೊಂದು ಕಥೆ ಆಗಿತ್ತು.
ಈಗ ಕಾಡಾನೆಗೆ ಪ್ರಜ್ಞೆ ತಪ್ಪಿಸುವ ಇಂಜೆಕ್ಷನ್ ರೈಪಲ್ ಮೂಲಕ ವನ್ಯಜೀವಿ ಸಂರಕ್ಷಣಾ ಪಡೆಯ ವೈದ್ಯರು ಕಾಡಾನೆಯ ದೇಹಕ್ಕೆ ಇಂಜೆಕ್ಟ್ ಮಾಡಿ ಪ್ರಜ್ಞೆ ತಪ್ಪಿಸಿ ಅದನ್ನು ಅರಣ್ಯ ಇಲಾಖಾ ಸಿಬ್ಬಂದಿಗಳು ಮತ್ತು ಪಳಗಿಸಿದ ಆನೆಗಳು ಸೇರಿ ಹಗ್ಗ ಚೈನ್ ಗಳಿಂದ ಬಂದಿಸಿ ಆನೆ ತರಬೇತಿ ಕೇಂದ್ರಕ್ಕೆ ರವಾನಿಸುತ್ತಾರೆ.
ಇತ್ತೀಚೆಗೆ ಕಾಡಾನೆಗಳು ಸಾಗರ - ಹೊಸನಗರ- ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ದಿಡೀರ್ ಆಗಿ ಗೋಚರಿಸುತ್ತಿರುವುದು ಆಶ್ಚರ್ಯಕರ ವಿಚಾರವಾಗಿದೆ.
ಕಳೆದ ವಷ೯ ಶಿವಮೊಗ್ಗ ಸಮೀಪದ ಭದ್ರಾ ಅಭಿಯಾರಣ್ಯದ ಅಂಚಿನಲ್ಲಿ ರೈತರು ಬೆಳೆದ ಜೋಳದ ಹೊಲದಲ್ಲಿ ಅಕ್ರಮ ವಿದ್ಯುತ್ ಸಂಪರ್ಕದಿಂದ ಎರೆಡು ಆನೆಗಳು ಮೃತವಾಗಿದ್ದ ಘಟನೆ ನಡೆದಿತ್ತು.
ಸಾಗರ ತಾಲ್ಲೂಕಿನ ಅವಿನಹಳ್ಳಿಯ ಗಿಣಿವಾರದಲ್ಲಿ ರೈತ ಮಹಿಳೆಯೋರ್ವರು ಕಾಡಾನೆ ದಾಳಿಗೆ ಬಲಿಯಾದ ಘಟನೆ ನಡೆದಿತ್ತು ಆ ಆನೆ ವರ್ಷದಲ್ಲಿ ಕೆಲ ತಿಂಗಳು ಈಗಲೂ ಆಗು೦ಬೆ ಭಾಗದಲ್ಲಿ ಸಂಚರಿಸುತ್ತಿದೆ.
ಇದರ ಮಧ್ಯ ಕಳೆದ ಸೋಮವಾರ ಸಂಜೆ (16- ಅಕ್ಟೋಬರ್ -2023) ಆನಂದಪುರಂ ಮತ್ತು ರಿಪ್ಪನ್ ಪೇಟೆ ಗಡಿ ಪ್ರದೇಶವಾದ ಕೆಂಚನಾಲದ ಸುತ್ತ ಮುತ್ತ ಕಾಡಾನೆ ತನ್ನ ಮರಿಯಾನೆ ಜೊತೆ ರೈತರ ಹೊಲಗಳಿಗೆ ದಾಳಿ ನಡೆಸಿದ ಚಿತ್ರ ಸ್ಥಳಿಯರು ಸೆಲ್ ಫೋನ್ ನಲ್ಲಿ ಸೆರೆ ಹಿಡಿದಿದ್ದಾರೆ ನಂತರ ಈ ಆನೆ ಚೊರಡಿ ಭಾಗದಲ್ಲಿ ಘೋಚರಿಸಿತ್ತು ನಂತರ ಅದು ಆನಂದಪುರಂನ ಗಿಳಾಲಗುಂಡಿ ಮಾರ್ಗದಲ್ಲಿದೆ ಎಂಬ ಸುದ್ದಿ ಬುಧವಾರ ಬೆಳಿಗ್ಗೆ ಹರಡಿತ್ತು ಆದರೆ ಇವತ್ತು ಕುಂಸಿ ಬಾಗದ ಕೃಷಿ ಜಮೀನಿನಲ್ಲಿ ಸಾಗಿ ಹೋಗಿದೆ ಎಂಬ ಸುದ್ದಿ ಇದೆ.
ಮರಿಯಾನೆ ಜೊತೆ ಸಾಗುತ್ತಿರುವ ಈ ಒಂಟಿ ಕಾಡಾನೆ ಅಪಾಯಕಾರಿ ಕೂಡ ಹೌದು.
Comments
Post a Comment