https://youtu.be/0fXeoNDB8GI?feature=shared
#ಆನಂದಪುರಂನ_ಹೊಂಬುಜ_ರೆಸಿಡೆನ್ಸಿ_ಹೋಟೆಲ್_ಉದ್ಯಮದ_ಕಾರ್ಮಿಕರು_ವಾಕಿ_ಟಾಕಿ_ಬಳಸುತ್ತಿದ್ದಾರೆ.
#ಹಳ್ಳಿಯಲ್ಲಿ_ನಡೆಸುವ_ನಮ್ಮ_ಉದ್ಯಮದಲ್ಲಿ_ನಾವು_ಸದಾ
#ಅಪ್_ಡೇಟಿಂಗ್_ಮತ್ತು_ಅಪ್_ಗ್ರೇಡಿಂಗ್_ಆಗುತ್ತಿರುತ್ತೇವೆ
#ಈಗ_ನಮ್ಮ_ಸಂಸ್ಥೆಯಲ್ಲಿ_ವಾಕಿ_ಟಾಕಿ_ಸಂಪರ್ಕಕ್ಕಾಗಿ_ಬಳಸುತ್ತಿದ್ದೇವೆ.
#ವಾಕಿಟಾಕಿ_ವೈರ್_ಲೆಸ್_ಸಾಧನ_ಎರಡನೆ_ಮಹಾಯುದ್ಧಕಾಲದಲ್ಲಿ_ಆವಿಷ್ಕಾರ_ಆದದ್ದು
#ಈಗ_ಸೆಲ್ಯುಲಾರ್_ಟೆಲಿಫೋನ್_ನೆಟ್_ವರ್ಕಗಳು_ಪುಶ್_ಟು_ಟಾಕ್_ಹ್ಯಾಂಡ್_ಸೆಟ್_ನೀಡುತ್ತಿದೆ.
#ಕೈಗೆಟುಕುವ_ಬೆಲೆಯಲ್ಲಿ_ಲಭ್ಯವಿರುವ_ವಾಕಿಟಾಕಿಗಳು_ಸಿಗುತ್ತಿದೆ.
ಪೋಲಿಸ್ ಇಲಾಖೆ, ಅರಣ್ಯ ಇಲಾಖೆ ಮತ್ತು ಮಿಲಿಟರಿಗಳಲ್ಲಿ ಶಕ್ತಿಶಾಲಿ ವಾಕಿ ಟಾಕಿ / ವೈರ್ ಲೆಸ್ ಬಳಕೆ ಮಾಡುತ್ತಿದ್ದರು ಯಾರು ಮಾತಾಡುತ್ತಾರೆ ಎನ್ನಲು ಗುಪ್ತವಾದ ಅವರ ಹೆಸರು ಹೇಳಿ ಮತ್ತು ಯಾರಿಗೆ ಸಂದೇಶ ರವಾನಿಸುತ್ತಾರೆ ಅವರ ಗುಪ್ತ ನಾಮ ಹೇಳಿ ಏನು ಸಂದೇಶ ನೀಡ ಬೇಕೊ ಅದನ್ನು ತಿಳಿಸಿ ತಮ್ಮ ಮಾತು ಮುಕ್ತಾಯ ಆಯಿತೆನ್ನಲು ಓವರ್ ಎನ್ನುತ್ತಾರೆ.
ಸಂದೇಶ ಅರ್ಥವಾಯಿತು ಎನ್ನಲು ಸಂದೇಶ ಸ್ವೀಕರಿಸಿದವರು Copy ಅನ್ನುತ್ತಾರೆ ಈ ರೀತಿ ಟೂ ವೇ ರೇಡಿಯೋ ಎಂಬ ವಾಕಿ ಟಾಕಿ ಖಾಸಾಗಿ ಅವರ ಬಳಕೆಗೆ ನಿಶೇದವಿತ್ತು ಈಗ ಖಾಸಾಗಿಯವರು ಬೇರೆ ಪ್ರೀಕ್ವೆನ್ಸಿಯಲ್ಲಿ ಬಳಸುವ ಅವಕಾಶ ಕಲ್ಪಿಸಲಾಗಿದೆ.
PTT ಅಂದರೆ ಪುಶ್ ಟು ಟಾಕ್ ಬಟನ್ ಅಂಟೇನಾ ರೇಡಿಯೋ ಸಿಗ್ನಲ್ ಏಕಮುಖ ಮಾತ್ರ ಸಂಭಾಷಣೆ ಸಾಧ್ಯವಿರುವ ಸಾಧನ, PTT ಒತ್ತಿದಾಗ ರಿಸಿವರ್ ಆಫ್ ಆಗಿ ಟ್ರಾನ್ಸಿಸ್ಟರ್ ಆನ್ ಆಗುತ್ತದೆ.
ಹ್ಯಾಂಡ್ ಹೆಲ್ಡ್ ಟ್ರಾನ್ಸ್ ಸಿವರ್ (HT) ವೈರ್ ಲೆಸ್ ಕಂಡು ಹಿಡಿದಿದ್ದು ಎರಡನೆ ಮಹಾಯುದ್ದ ಕಾಲದಲ್ಲಿ ಡೊನಾಲ್ಡ್ ಹಿಂಗ್ಸ್, ರೇಡಿಯೋ ಇಂಜಿನಿಯರ್ ಆಲ್ಫ್ರೆಡ್ ಜಿ. ಗ್ರಾಸ್, ಹೆನ್ರಿಕ್ ಮ್ಯಾಗ್ನಸಿ ಮತ್ತು ಮೊಟೊರಾಲದಲ್ಲಿನ ಇಂಜಿನಿಯರಿಂಗ್ ತಂಡ.
ನಿರ್ಮಾಣ ಸಂಸ್ಥೆಗಳು, ವಿದ್ಯಾಸಂಸ್ಥೆಗಳು, ಹೋಟೆಲ್ ಉದ್ಯಮಗಳಲ್ಲಿ ಈ ವಾಕಿ ಟಾಕಿ ಗಳು ಅತ್ಯುತ್ತಮ ಸಂಪರ್ಕ ಜಾಲ ಕಲ್ಪಿಸುತ್ತದೆ.
ನಮ್ಮದೇ ಆದ ಹೋಟೆಲ್ ಉದ್ಯಮದಲ್ಲಿ ನಿರ್ದಿಷ್ಟ ಸಮಯದಲ್ಲಿ ಕೆಲಸಗಾರರ ಸಂಪರ್ಕ ಸಾಧ್ಯವಾಗುವುದಿಲ್ಲ ಕಾರಣ ಅವರ ಸೆಲ್ ಫೋನ್ ಬೇರೆ ಕರೆಯಲ್ಲಿ ನಿರತವಾಗಿರುವುದು, ಸ್ವಿಚ್ ಆಫ್ ಆಗಿರುವುದು, ಸಿಗ್ನಲ್ ಇಲ್ಲದಿರುವುದು ಇತ್ಯಾದಿ ಆದರೆ ಈ ವೈರ್ ಲೆಸ್ ವಾಕಿ ಟಾಕಿಗಳು ಪುಶ್ ಟು ಟಾಕ್ ಬಟನ್ ಒತ್ತಿ ಮಾತಾಡಿದ್ದು ಅವರ ರಿಸಿವರ್ ನಲ್ಲಿ ಅವರಿಗೆ ತಲುಪುತ್ತದೆ ಇದು ರೇಡಿಯೋ ಸಿಗ್ನಲ್ ಆದ್ದರಿಂದ ಯಾವುದೇ ತಡೆ ಇಲ್ಲದೆ ರವಾನೆ ಆಗುತ್ತದೆ.
ಇದರಿಂದ ನಮ್ಮ ಕೆಲಸದ ಸಂದೇಶ ರವಾನಿಸಲು ಇದು ಸೆಲ್ ಫೋನ್ ಗಿಂತ ಸುಲಭ ಮತ್ತು ಪರಿಣಾಮಕಾರಿ ಈಗ 16 ಚಾನಲ್ ನ ಎಂಟು ವಾಕಿ ಟಾಕಿ ನಮ್ಮ ಸಂಸ್ಥೆಯಲ್ಲಿ ವ್ಯವಸ್ತೆ ಮಾಡಲಾಗಿದೆ ಇದಕ್ಕೆ ನಾವು ಮಾಡಿದ ವೆಚ್ಚ ಹತ್ತು ಸಾವಿರ ಮಾತ್ರ ಇದು ನಾಲ್ಕು ನೂರು ಮೀಟರ್ ರೇಡಿಯಸ್ ವ್ಯಾಪ್ತಿಯಲ್ಲಿ ಸ್ಪಷ್ಟವಾಗಿ ಕಾರ್ಯನಿರ್ವಹಿಸುತ್ತಿದೆ.
Comments
Post a Comment