ಸುವರ್ಣ ಕನ್ನಡ ರಾಜ್ಯೋತ್ಸವ ಆಚರಿಸುವ ಕನ್ನಡ ಸಂಘ ಸಂಸ್ಥೆಗಳು ಸಾದಕರನ್ನು ಸ್ಮರಿಸಲು ಮರೆಯದಿರಲಿ.
#ಆನಂದಪುರಂ_ಇತಿಹಾಸ
#ಭಾಗ_64.
#ಕರ್ನಾಟಕ_ನಾಮಕರಣಕ್ಕೂ_ಆನಂದಪುರಂಗೂ_ನಂಟಿದೆ.
#ಕನ್ನಡ_ರಾಜ್ಯೋತ್ಸವದ_ಸುವರ್ಣ_ಮಹೋತ್ಸವದ_ಶುಭಾಷಯಗಳು.
#ಶಿವಮೊಗ್ಗ_ಶಿವಮೊಗ್ಗ_ಎಂದು_ಬದಲಾಗಿ_ಹತ್ತನೇ_ವರ್ಷ.
#ದೇವರಾಜಅರಸರು_1973_ನವೆಂಬರ್_1ರಂದು_ಕರ್ನಾಟಕ_ನಾಮಕರಣ_ಮಾಡುವಾಗ_ಜೊತೆಗಿದ್ದವರು_ಬದರಿನಾರಾಯಣಯ್ಯಂಗಾರರು.
#ಕರ್ನಾಟಕ_ನಾಮಕರಣಕ್ಕೆ_ಆಗಿನ_ಶಿಕ್ಷಣ_ಮತ್ತು_ಕನ್ನಡಸಂಸ್ಕೃತಿ_ಇಲಾಖೆ_ಮಂತ್ರಿ_ಬದರಿನಾರಾಯಣಯ್ಯಂಗಾರ್_ಪ್ರಮುಖರು.
#ಜ್ಞಾನಪೀಠಪ್ರಶಸ್ತಿ_ಪಡೆದ_ಮೊದಲ_ಕನ್ನಡಿಗ_ಕುವೆಂಪು.
#ಶಿಮೊಗ್ಗ_ಎಂಬ_ಹೆಸರನ್ನು_ಶಿವಮೊಗ್ಗ_ಎಂದು_ಬದಲಿಸಿದವರು_ಸಿದ್ದರಾಮಯ್ಯ_2014ರಲ್ಲಿ.
ಮೈಸೂರು ರಾಜ್ಯ 1956 ನವೆಂಬರ್ 1 ರಂದು ಉದಯವಾಯಿತು. ಕನ್ನಡ ಮಾತಾಡುವ ಮದ್ರಾಸ್, ಮುಂಬೈ ಮತ್ತು ಹೈದ್ರಾಬಾದ್ ಪ್ರಾಂತ್ಯದ ಪ್ರದೇಶಗಳನ್ನು ವಿಲೀನಗೊಳಿಸಿ ಮೈಸೂರು ರಾಜ್ಯ ಮಾಡಲಾಗಿತ್ತು. 1973 ನವೆಂಬರ್ 1 ರಂದು ದೇವರಾಜ ಅರಸರು ಮೈಸೂರು ರಾಜ್ಯಕ್ಕೆ #ಕರ್ನಾಟಕ ಎಂದು ಮರು ನಾಮಕರಣ ಮಾಡುತ್ತಾರೆ ಅವತ್ತು ಶಿಕ್ಷಣ ಮತ್ತು ಕನ್ನಡ ಸಂಸ್ಕೃತಿ ಇಲಾಖಾ ಮಂತ್ರಿ ಆಗಿದ್ದವರು ಶಿವಮೊಗ್ಗ ಜಿಲ್ಲೆಯ ಎ.ಆರ್. ಬದರಿನಾರಾಯಣಯ್ಯಂಗಾರ್ (ಆನಂದಪುರಂ ರಾಮಕೃಷ್ಣಯ್ಯಂಗಾರ್ ಬದರಿನಾರಾಯಣ್ ಅಯ್ಯಂಗಾರ್ ಎಂಬುದು ಅವರ ಪೂರ್ಣ ಹೆಸರು) ಈ ಐತಿಹಾಸಿಕ ಕರ್ನಾಟಕ ನಾಮಕರಣದಲ್ಲಿ ಬದರಿನಾರಾಯಣರ ಪಾತ್ರ ಕೂಡ ಮುಖ್ಯಮಂತ್ರಿ ದೇವರಾಜ ಅರಸರಷ್ಟೆ ಮಹತ್ವದಾಗಿತ್ತು.
ಈ ಐತಿಹಾಸಿಕ ಕ್ಷಣದ ಪೋಟೋ ಇಲ್ಲಿ ಹಾಕಿದೆ ಅದರಲ್ಲಿ ಕರ್ನಾಟಕ ನಾಮ ಫಲಕ ದೇವರಾಜ ಅರಸರು ಅನಾವರಣಗೊಳಿಸುವ ಕಾರ್ಯಕ್ರಮದಲ್ಲಿ ಕರ್ನಾಟಕ ನಾಮಕರಣದ ರೂವಾರಿ ಆಗಿನ ಶಿಕ್ಷಣ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಮಂತ್ರಿಗಳಾದ ನಮ್ಮ ಶಿವಮೊಗ್ಗ ಜಿಲ್ಲೆಯ ಆನಂದಪುರಂನ ಹೆಮ್ಮೆಯ ಎ.ಆರ್. ಬದರಿನಾರಾಯಣಯ್ಯಂಗಾರ್ ಇದ್ದಾರೆ.
2014 ನವೆಂಬರ್ 1 ರ ತನಕ ನಮ್ಮ ಜಿಲ್ಲೆ ಶಿಮೊಗ್ಗ ಅಂತ ಆಗಿತ್ತು, ಕೆಲವರು ಶಿಮೊಗ್ಗ - ಶಿವಮೊಗ್ಗ ಅಂತಲೂ ಕರೆಯುತ್ತಿದ್ದರು ಬರೆಯುತ್ತಿದ್ದರು.
2014 ನವೆಂಬರ್ 1 ರಂದು ಆಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರಾಜ್ಯದ 12 ನಗರ/ಪಟ್ಟಣಗಳ ಹೆಸರು ಬದಲಿಸಿದರು ಇದರಿಂದ ಶಿಮೊಗ್ಗ ಶಿವಮೊಗ್ಗ ಎ೦ದು ಅಧಿಕೃತವಾಯಿತು.
Comments
Post a Comment