Blog number 1771.ಕಾಫಿನಾಡಿನ ಕಾಡು ಹಕ್ಕಿ ಎಂಬ ಅನ್ವರ್ಥ ನಾಮದ ಮೂಡಿಗೆರೆಯ ಉತ್ಸಾಹಿ ಯುವ ಸಾಹಿತಿ ಕಾರ್ತಿಕಾದಿತ್ಯ ಬೆಳ್ಗೋಡು ನನ್ನ ಅತಿಥಿ.
#ಮೂಡಿಗೆರೆಯ_ಕಾಫಿನಾಡಿನ_ಕಾಡುಹಕ್ಕಿ_ಕಾರ್ತಿಕಾದಿತ್ಯ_ಬೆಳ್ಗೋಡು.
#ಪ್ಯಾರಾಸೈಟ್_ಕಾಡು_ಹಾದಿಯ_ಜಾಡುಹತ್ತಿ_ಕಾಟಿಹರದ_ತಿರುವು_ಇವರ_ಪ್ರಕಟಿತ_ಪುಸ್ತಕಗಳು
#ಇವರ_ಇನ್ನೊಂದು_ಪುಸ್ತಕ_ನಾವೂ_ನೀವೂ_ಜೊತೆಗೊಂದಿಷ್ಟು_ನನಗೆ_ನೀಡಿದ್ದಾರೆ
#ಮುಡಿಗೆರೆಯ_ಉದಯೋನ್ಮುಖ_ಸಾಹಿತಿ_ನನ್ನ_ಅತಿಥಿ
#ಸಿದ್ದಾಪುರದ_ಸಾಹಿತ್ಯ_ಸಂವಾದ_ಕಾಯ೯ಕ್ರಮಕ್ಕೆ_ಹೋಗುವ_ಮಾಗ೯ದಲ್ಲಿ_ತಂಗಿದ್ದರು.
ಇದು ನನ್ನ ಅವರ ಎರಡನೆ ಬೇಟಿ, ಕಳೆದ ಫೆಬ್ರುವರಿ ತಿಂಗಳಲ್ಲಿ ಬಂದಿದ್ದರು, ಮೊನ್ನೆ ಸಿದ್ದಾಪುರಕ್ಕೆ ಸಾಹಿತ್ಯ ಸಂವಾದಕ್ಕೆ ಹೋಗುವ ಮಾರ್ಗದಲ್ಲಿ ತಂಗಿದ್ದರು ನನ್ನ ಇವರ ಮೊದಲ ಬೇಟಿಯಲ್ಲಿನ ಅತ್ಮೀಯತೆ ಈ ಎರಡನೆ ಬೇಟಿಯಲ್ಲಿ ವಿಸ್ತಾರವಾದ ಚರ್ಚೆಗೆ ನಾಂದಿಯಾಯಿತು.
ಕಾರ್ತಿಕಾದಿತ್ಯ ಬೆಳ್ಗೋಡು ಕಾಫಿ ನಾಡಿನ ಅಪರೂಪದ ಸಾಹಿತಿ, ಇವರು ತಮ್ಮ ವ್ಯವಹಾರದ ಜೊತೆ ಸದಾ ಪ್ರವಾಸದಲ್ಲಿರುತ್ತಾರೆ, ಒಂದು ರೀತಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡುತ್ತಿರುತ್ತಾರೆ.
ಪ್ರತ್ಯಕ್ಷ ಆದರೂ ಪರಾಮರಿಸಿ ನೋಡುವ ಇವರಿಗೆ ಕಾಫಿನಾಡಿನ ಕಾಡು ಹಕ್ಕಿ ಎಂದು ಕರೆಯಬೇಕು ಅನ್ನಿಸುತ್ತೆ.
ಸಣ್ಣವಯಸ್ಸಲ್ಲೇ ಸಿದ್ದಾರ್ಥ್ ಅವರ ದೆಹಲಿಯ ಕಾಫಿ ಡೇ ರೆಸ್ಟೋರಾಂಟ್ ಗಳಲ್ಲಿ ಕಾರ್ಯನಿರ್ವಹಿಸಿದ್ದರು ಒಂದು ದಿನ ಇವರು ನಿತ್ಯದ ಪರಿಶೀಲನೆ ಮಾಡುತ್ತಿದ್ದ ರೆಸ್ಟೋರಾಂಟ್ ಗೆ ಮಾಲಿಕ ಸಿದ್ದಾರ್ಥರು ಬಂದಾಗ ಕಾಫಿ ಡೇ ಅಧಿಕಾರಿಗಳು ಇವರನ್ನು ಅವರಿಗೆ ಪರಿಚಯಿಸುತ್ತಾರೆ ಅದೇ ಇವರ ಮತ್ತು ಸಿದ್ದಾರ್ಥರ ಮೊದಲ ಬೇಟಿ "ಬೆಂಗಳೂರಲ್ಲಿ ಎಲ್ಲಿ?" ಅಂದಾಗ ಇವರು ಮುಡಿಗೆರೆ ಅಂದಾಗ ಸಿದ್ದಾರ್ಥರಿಗೆ ಖುಷಿ ಆಗುತ್ತದೆ ತಮ್ಮ ಊರಿನವ ಎಂದು.
ದೆಹಲಿ ಕಾರ್ತಿಕಾದಿತ್ಯರಿಗೆ ಒಗ್ಗದ ಬಗ್ಗೆ ಬೆಂಗಳೂರಿಗೆ ವಗಾ೯ವಣೆಗೆ ವಿನಂತಿಸಿದ ಮರುದಿನವೇ ಬೆಂಗಳೂರಿಗೆ ವರ್ಗಾವಣೆ ಮಾಡುತ್ತಾರೆ ಸಿದ್ದಾರ್ಥ್.
ಸಿದ್ದಾರ್ಥರ ಚಿಕ್ಕಮಗಳೂರಿನಲ್ಲಿ ಅಭಿವೃದ್ಧಿ ಮಾಡಿದ್ದ 12 ಸಾವಿರ ಎಕರೆ ಕಾಫಿ ಎಸ್ಟೇಟ್, ಬೃಹತ್ ಕಾಫಿ ಕೈಗಾರಿಕೆಗಳು ಈಗ ಇಲ್ಲವಾಗಿದೆ, ಕಾಫಿ ಡೇ ಉತ್ತುಂಗದಲ್ಲಿದ್ದಾಗ ಕಾಫಿ ಬೆಳೆಗಾರನ ಮನೆಗೆ ಬಂದು ಕಾಫಿ ಬೀಜ ಖರೀದಿ ಆಗುತ್ತಿತ್ತು ಅಂತೆಲ್ಲ ನೆನಪು ಮಾಡುತ್ತಾ ಇಂತಹ ಯಾಶಸ್ವಿ ಉದ್ದಿಮೆದಾರ ನೇತ್ರಾವತಿ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ದುರಂತದ ತನಕ ಮಾತಾಡಿದರು.
ಬ್ರಿಟಿಷರ ಕಾಲದಲ್ಲಿ ಮೊದಲ ಪ್ರಾಯೋಗಿಕ ಕಾಫಿ ತೋಟ ಮಾಡಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರವಾಗಿತ್ತು ಈ ಬಗ್ಗೆ ಹೆಚ್.ಎಲ್.ನಾಗೇಗೌಡರು ಬರೆದ ಪುಸ್ತಕದ ಬಗ್ಗೆ ಹೀಗೆ ಅವರ ರಾತ್ರಿ ಊಟದ ತನಕ ಮಾತಾಡಿದೆವು.
ಉತ್ಸಾಹಿ ಉದಯೋನ್ಮುಖ ಯುವ ಸಾಹಿತಿ ಕಾರ್ತಿಕಾದಿತ್ಯ ಬೆಳ್ಗೋಡಿನವರ ಜೊತೆ ಕಳೆದ ಸಂಜೆ ಹೊತ್ತು ಚೇತೋಹಾರಿಯಾಗಿತ್ತು.
Comments
Post a Comment