Blog number 1777. ಗೋಲಿ ನೀರುಳ್ಳಿ - ಸಾಂಬಾರ್ ನೀರುಳ್ಳಿ ಎನ್ನುವ ಕಡಿಮೆ ಘಾಟಿನ ಸಿಹಿ ರುಚಿಯ ಸಾಂಬಾರ್ ನೀಡುವ ರುಚಿ ಮತ್ತು ಘಮ ಎಲ್ಲರಿಗೂ ಗೊತ್ತಿಲ್ಲ.
#ಸಾಂಬಾರ್_ನೀರುಳ್ಳಿಯಲ್ಲಿದೆ_ವಿಶೇಷ_ರುಚಿ.
#ಕಡಿಮೆ_ಘಾಟು_ಸಿಹಿ_ರುಚಿ.
#ನಮ್ಮ_ಮಲ್ಲಿಕಾ_ವೆಜ್_ಇಡ್ಲಿ_ಸಾಂಬಾರ್_ಊಟದ_ಹುಳಿಯಲ್ಲಿ_ಸಾಂಬಾರ್_ನೀರುಳ್ಳಿ
#ತಮಿಳುನಾಡಿನಲ್ಲಿ_ಹೆಚ್ಚು_ಬೆಳೆಯುತ್ತಾರೆ_ಮತ್ತು_ಬಳಸುತ್ತಾರೆ.
https://youtube.com/shorts/loqmoUykRxs?feature=shared
ಕನ್ನಡಿಗರು ಸಾಂಬಾರ್ ನೀರುಳ್ಳಿ - ತಮಿಳು ಭಾಷಿಗರು ಚಿನ್ನವೆಂಗಾಯ್ ಎನ್ನುವ ಗೋಲಿ ಗಾತ್ರದ ಕಡಿಮೆ ಘಾಟು ಮತ್ತು ಸಿಹಿ ರುಚಿಯ ನೀರುಳ್ಳಿ ದಕ್ಷಿಣ ಭಾರತೀಯ ಅಡುಗೆಯ ಇಡ್ಲಿ ಸಾಂಬಾರ್ ಮತ್ತು ಊಟದ ಹುಳಿಯ ರುಚಿಯಲ್ಲಿ ವಿಶೇಷ ಘಮ ರುಚಿಯನ್ನು ದ್ವಿಗುಣಗೊಳಿಸುತ್ತದೆ ಆದ್ದರಿಂದ ಈ ಸಾಂಬಾರ್ ನೀರುಳ್ಳಿಗೆ ಬಹು ಬೇಡಿಕೆ ಇದೆ.
ಮೈಸೂರು ಭಾಗದ ಗುಂಡ್ಲುಪೇಟೆಯಲ್ಲಿನ ರೈತರು ಈ ಸಾಂಬಾರ್ ನೀರುಳ್ಳಿ ಬೆಳೆದರೂ ಅದನ್ನು ಖರೀದಿಸುವವರು ತಮಿಳುನಾಡಿನ ವ್ಯಾಪಾರಿಗಳೇ ಆದ್ದರಿಂದ ಈ ಗೋಲಿ ನೀರುಳ್ಳಿ ಬೆಳೆ ಮತ್ತು ಮಾರಾಟದ ಕೇಂದ್ರ ತಮಿಳುನಾಡು ಆಗಿದೆ.
ನಾವು ನಮ್ಮ ಮಲ್ಲಿಕಾ ವೆಜ್ ಗೆ ಆನ್ ಲೈನ್ ಮೂಲಕ ಈ ನೀರುಳ್ಳಿ ಖರೀದಿಸುತ್ತೇವೆ ಮೊನ್ನೆ ಚೆನೈನಿಂದ ಒಣ ಶುಂಠಿ ಖರೀದಿಗೆ ಬಂದ ಲಾರಿಯಲ್ಲಿ 50 ಕಿಲೋ ಸಾಂಬಾರ್ ನೀರುಳ್ಳಿ ನಮ್ಮ ಊರಿನ ಯಶಸ್ವಿ ಶುಂಠಿ ವ್ಯಾಪಾರಿ ಪ್ರಮೋದ್ ಶೇಟ್ ತರಿಸಿ ಕೊಟ್ಟಿದ್ದಾರೆ ಇದರ ಬೆಲೆ ಕಿಲೋಗೆ 80 ರೂಪಾಯಿ.
ಈ ಸಾಂಬಾರ್ ನೀರುಳ್ಳಿ ರಾತ್ರಿ ನೀರಲ್ಲಿ ನೆನೆಸಿ ಇಡಬೇಕು, ಮರು ಬೆಳಿಗ್ಗೆ ಕೈಯಲ್ಲಿ ಹಿಚುಕಿ ಅದರ ಸಿಪ್ಪೆ ನಿವಾರಿಸಿ, ಎರೆಡೂ ಭಾಗದ ಬೇರು ಕತ್ತರಿಸಿ ಸಣ್ಣದಾಗಿ ಜಜ್ಜಿ ಸಾಂಬಾರ್ ಗೆ ಹಾಕಿ ಕುದಿಸಿದರೆ ಆ ಸಾಂಬಾರ್ ರುಚಿಯೇ ವಿಬಿನ್ನ
ನೀರುಳ್ಳಿಯಲ್ಲಿ ಅನೇಕ ತಳಿಗಳಿದೆ ನಮ್ಮ ರಾಜ್ಯದ ಕರಾವಳಿಯ ಕುಮುಟಾದ ಜಡೆ ನೀರುಳ್ಳಿ ಸೇರಿ 21 ರೀತಿ ನೀರುಳ್ಳಿ ತಳಿಗಳು ಇದೆ.
ಬಿಜ್ಜಳನ ಕಾಲದಲ್ಲಿ ಒಂದು ನೀರುಳ್ಳಿ ಪ್ರಸಂಗ ಬರುತ್ತದೆ ಅದೇನೆಂದರೆ ರಾಜ ಬಿಜ್ಜಳ ತನ್ನ ರಾಜ್ಯದಲ್ಲಿ ನೀರುಳ್ಳಿ ನಿಷೇದಿಸುತ್ತಾನೆ ಮರುದಿನ ತನ್ನ ದರ್ಬಾರಿಗೆ ಮಂತ್ರಿ ಬಸವಣ್ಣ ನೀರುಳ್ಳಿ ಹಾರ ಧರಿಸಿ ಬರುತ್ತಾರೆ ಈ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದರಿಂದ ರಾಜ ಬಿಜ್ಜಳ ತನ್ನ ಆಜ್ಞೆ ಆಗಿದ್ದ ನೀರುಳ್ಳಿ ನಿಶೇಧ ರದ್ದು ಮಾಡುತ್ತಾನೆ.
ನೀರುಳ್ಳಿ ಮನುಷ್ಯ ಉಪಯೋಗಿಸುತ್ತಾ 7000 ವರ್ಷ ಆಗಿದೆ ಎಂಬ ಮಾಹಿತಿ ಇದೆ.
Comments
Post a Comment