Blog number 1802. ಖ್ಯಾತ ಚಿತ್ರ ಕಲಾವಿದೆ ಶ್ರೀಮತಿ ಮಧು ಪ್ರೋದಾನ್ ನೀಡಿದ ಈ ಗಣಪತಿ ಚಿತ್ರ ನನ್ನ ಮನೆಯ ಬಾಗಿಲ ಮೇಲೆ ಅಲಂಕರಿಸಿದೆ.
#ಕಲೆಗೆ_ಬೆಲೆ_ಕಟ್ಟಲಾಗದು
#ಉಡುಗೊರೆಗೆ?
#ಉಡುಗೊರೆ_ಮತ್ತು_ಉಡುಗೊರೆ_ನೀಡಿದವರನ್ನು_ಸದಾ_ಸ್ಮರಿಸುತ್ತೇನೆ
#ಈ_ಉಡುಗೊರೆ_ಮತ್ತು_ಉಡುಗೊರೆ_ನೀಡಿದವರನ್ನು_ಮರೆತು_ಬಿಟ್ಟಿದ್ದೆ.
#ಖ್ಯಾತ_ಬೆಂಗಾಲಿ_ಕಲಾವಿದೆ_ಶ್ರೀಮತಿ_ಮದು_ಪ್ರೊದಾನ್_ಬರೆದು_ನೀಡಿದ_ಗಣಪತಿ.
#ನನ್ನ_ಮನೆಯ_ಒಳ_ಬಾಗಿಲ_ಮೇಲೆ_ಇರಿಸಿದ್ದೇನೆ.
ನನಗೆ ಉಡುಗೊರೆ ಕೊಡುವವವರು ತುಂಬಾ ಕಡಿಮೆ, ನಾನು ಉಡುಗೊರೆ ಸ್ವೀಕರಿಸುವುದೂ ಇಲ್ಲ ಆದರೂ ಕೆಲವರು ನೀಡುವ ಪುಸ್ತಕ ಹಾಗೂ ಕಲಾಕೃತಿ ನಿರಾಕರಿಸಲು ಸಾಧ್ಯವಾಗದ ಕೆಲ ಪ್ರಸಂಗಳು ಇದೆ.
ಆ ಉಡುಗೊರೆಗಳನ್ನು ನನ್ನ ಕಛೇರಿಯಲ್ಲಿ, ಮನೆಯಲ್ಲಿ, ಮನೆಯ ಹೊಂ ಆಫೀಸಿನಲ್ಲಿ ಕಾಣುವಂತೆ ಇಡುತ್ತೇನೆ ಮತ್ತು ಉಡುಗೊರೆ ನೀಡಿದವರ ನೆನಪಿಸುವ ಲೇಖನ ಕೂಡ ಬರೆದು ಬ್ಲಾಗ್ ನಲ್ಲಿ ಸಂರಕ್ಷಿಸಿದ್ದೇನೆ.
ಇವತ್ತು ಮನೆಯಿಂದ ಹೊರ ಹೋಗುವಾಗ ಭಾಗಿಲ ಮೇಲೆ ಇರುವ ಗಣಪತಿಯ ಪೆನ್ಸಿಲ್ ಸ್ಕೆಚ್ ಆರ್ಟ್ ನೋಡಿದಾಗಲೇ ಇದನ್ನು ಮರೆತಿದ್ದೆ ಅಂತ ಗೊತ್ತಾಯಿತು.
ದಿನಾಂಕ 8 - ಮಾರ್ಚ್ - 2018 ರಂದು ಖ್ಯಾತ ಚಿತ್ರ ಕಲಾವಿದೆ ಶ್ರೀಮತಿ ಮಧು ಪ್ರೋದಾನ್ ನಮ್ಮಲ್ಲಿ ತಂಗಿದ್ದಾಗ ಅವರೇ ಬರೆದು ನನಗೆ ನೀಡಿದ ಈ ಪೆನ್ಸಿಲ್ ಸ್ಕೆಚ್ ಆರ್ಟ್ ನ ಗಣಪತಿ ಪೋಟೋ ಇದು.
Comments
Post a Comment