Blog number 1774. ನಮ್ಮ ರೆಸ್ಟೋರೆಂಟ್ ಉದ್ಯೋಗದಲ್ಲಿ ಇಂತಹ ಪೀಡ್ ಬ್ಯಾಕ್ ನಮಗೆ ಚೇತೋಹಾರಿ ಮತ್ತು ಹುಮ್ಮಸ್ಸು ಹೆಚ್ಚಿಸುತ್ತದೆ ಆದರೆ ಅದಕ್ಕಾಗಿ ನಾವು ಸತತ ಶ್ರಮ ಮತ್ತು ಶ್ರದ್ದೆಯಿಂದ ಶುಚಿ ರುಚಿಯ ಆಹಾರ ತಯಾರಿಸಬೇಕು.https://maps.app.goo.gl/i75z12kpoypzB7fK7
#ನಮ್ಮ_ಮಲ್ಲಿಕಾ_ವೆಜ್_ಉಪಹಾರ_ಸವಿದ_ರಿನೂ_ಎನ್ನುವವರ_ಪೀಡ್_ಬ್ಯಾಕ್.
#ಯಾವುದೇ_ಉದ್ಯಮದಲ್ಲಿ_ಗ್ರಾಹಕರ_ಪೀಡ್_ಬ್ಯಾಕ್_ಅತಿ_ಮುಖ್ಯ
#ಗ್ರಾಹಕರೆ_ದೇವರು_ಅವರ_ಸಂತೃಪ್ತಿಯೇ_ಹೋಟೆಲ್_ಮಾಲಿಕರ_ಗುರಿಯಾಗ_ಬೇಕು.
#ಶುಚಿ_ಮೊದಲು_ನಂತರ_ರುಚಿ_ಅದರ_ನಂತರ_ಗ್ರಾಹಕರ_ತೃಪ್ತಿ_ಕೊನೆಯದಾಗಿ_ಲಾಭ.
#ನಿತ್ಯ_ಮಲ್ಲಿಕಾ_ವೆಜ್_ರೇಷನ್_ತರಕಾರಿ_ವಿತರಿಸುವುದು_ಮೊದಲ_ಗುಣಮಟ್ಟ_ರುಚಿ_ಪರೀಕ್ಷೆ_ನನ್ನದೆ .
ಈಗಷ್ಟೆ ನಮ್ಮ ಮಲ್ಲಿಕಾ ವೆಜ್ ರೆಸ್ಟೋರೆಂಟ್ ನಲ್ಲಿ ಕುಟುಂಬ ಸಮೇತ ಉಪಹಾರ ಸೇವಿಸಿದ ಗ್ರಾಹಕ ದೇವರು (ನಾವು ಗ್ರಾಹಕರನ್ನು ಆ ರೀತಿ ಪರಿಗಣಿಸಬೇಕು) ರಿನೂ ಅನ್ನುವವರು ನಮ್ಮಲ್ಲಿ ನಿತ್ಯ ಸಿಗುವ ಮಲೆನಾಡಿನ ವಿಶೇಷ ತಿನಿಸು ಹಲಸಿನ ಎಲೆಯ ಕಡಬು ಅದರ ಜೊತೆ ಹೆಸರುಕಾಳಿನ ಸಾಗು, ಕೆಂಪು ಮೆಣಸಿನ ಕಾರದ ಚಟ್ನಿ ಮತ್ತು ಕಾಯಿ ಚಟ್ನಿ ಜೊತೆಗೆ ಸವಿದಿದ್ದಾರೆ ಮತ್ತು ಬಿಸಿ ಬಿಸಿ ಬಿಸಿ ಬೇಳೆ ಬಾತ್ ಕೂಡ.
ಇದನ್ನು ಚಿತ್ರ ಸಹಿತ ಮತ್ತು ಅವರು ಮಲ್ಲಿಕಾ ವೆಜ್ ಎದುರಿಗೆ ತೆಗೆದ ಸೆಲ್ಫಿ ಜೊತೆ ನಿಮ್ಮ ಮಲ್ಲಿಕಾ ವೆಜ್ ನಲ್ಲಿ ಈಗ ಉಪಹಾರ ಸೇವಿಸಿ ಎಂಜಾಯ್ ಮಾಡಿದ್ದೇವೆ ಎಂದು ಪ್ರತಿಕ್ರಿಯೆ ಕೂಡ ದಾಖಲಿಸಿದ್ದಾರೆ.
ತಮ್ಮ ಪ್ರಯಾಣದಲ್ಲಿ ಬೆಳಗಿನ ಉಪಹಾರಕ್ಕೆ ನಮ್ಮ ಮಲ್ಲಿಕಾ ವೆಜ್ ಆಯ್ಕೆ ಮಾಡಿದ್ದಕ್ಕೆ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಮತ್ತು ಇನ್ನೊಮ್ಮೆ ಇಲ್ಲಿಗೆ ಬೇಟಿ ನೀಡಿ ಎಂದು ಮನವಿ ಮಾಡಿದ್ದೇನೆ.
ಉದ್ಯೋಗ ವ್ಯವಹಾರಕ್ಕೆ ಹುಟ್ಟಿದ ಊರು ತೊರೆದು ದೂರದೂರಿಗೆ ಹೋಗುವ ಈ ಕಾಲದಲ್ಲಿ ನಾವು ಹುಟ್ಟಿದ ಊರಿನಲ್ಲಿಯೇ ಉದ್ಯೋಗ ವ್ಯವಹಾರ ಮಾಡುವುದು ಕಷ್ಟ ಸಾಧ್ಯವೇ ಆಗಿದ್ದರೂ ನಾನು ಇಲ್ಲೇ ನನ್ನ ಸ್ಪಗ೯ ಸೃಷ್ಟಿಸಿಕೊಂಡಿದ್ದೇನೆ, ಜೀವನ ಪರ್ಯಂತ ಸಾಧನೆ ಎಂಬಂತೆ ನಾವು ಮಾಡುವ ಕೆಲಸದ ಬಗ್ಗೆ ಪ್ರೀತಿ ಅಭಿಮಾನ ಗೌರವ ಹೊಂದಿ ಸತತ ಸಾಧನೆ ಮಾಡಿದರೆ ಯಶಸ್ಸು ಖಂಡಿತಾ ಸಾಧ್ಯವಿದೆ ಇದಕ್ಕೆ ತಾಳ್ಮೆ ಬೇಕು.
ಕಲಬೆರಕೆ ಇಲ್ಲದ ವಸ್ತುಗಳ ಸಂಗ್ರಹಿಸಿ ಬಳಸುವುದು, ಕೃತಕ ರುಚಿಯ ಟೇಸ್ಟಿಂಗ್ ಪೌಡರ್, ಕೃತಕ ಬಣ್ಣ ಬಳಸದೇ ಇರುವುದು, ಶುಚಿ ರುಚಿಯಾಗಿ ಅಡುಗೆ ಮಾಡುವ ತರಬೇತಿಯ ಸಿಬ್ಬಂದಿಗೆ ನೀಡಿ ನಿತ್ಯ ಪರಿಶೀಲಿಸುವುದು ಹಾಗೂ ತಯಾರಾದ ಆಹಾರದ ಗುಣಮಟ್ಟ ಮತ್ತು ರುಚಿ ಮೊದಲಿಗೆ ನಾನೇ ಪರೀಕ್ಷೆ ಮಾಡುವುದರಿಂದ ನಮ್ಮ ರೆಸ್ಟೋರೆಂಟ್ ಗೆ ಅತ್ಯುತ್ತಮ ರೇಟಿಂಗ್ ಮತ್ತು ಫೀಡ್ ಬ್ಯಾಕ್ ದೊರಕುತ್ತಿದೆ ಅಷ್ಟೇ ಅಲ್ಲ ಗ್ರಾಹಕರು ಹುಡುಕಿಕೊಂಡು ಬರುತ್ತಾರೆ.
ಇವತ್ತಿನ ಬೆಳಗಿನ ಈ ಪೀಡ್ ಬ್ಯಾಕ್ ನಾವು ಮಾಡುವ ಕೆಲಸದಲ್ಲಿ ಇನ್ನೂ ಹೆಚ್ಚಿನ ಹುಮ್ಮಸ್ಸು ತುಂಬಿದೆ.
Comments
Post a Comment