https://youtu.be/UT0Wo0tML0g?feature=shared
#ಇವತ್ತು_ಕಾಕ್_ಟೈಲ್_ಬಗ್ಗೆ_ಚರ್ಚೆ_ಮಾಡಿದ್ದೆವು.
#ನಮ್ಮ_ಸಂಸ್ಥೆಯ_ವ್ಯವಸ್ಥಾಪಕರಾದ_ಅನಿಲ್_ಈ_ಬಗ್ಗೆ_ಹೆಚ್ಚಿನ_ಮಾಹಿತಿ_ನೀಡಿದರು.
#ಕಾಕ್_ಟೈಲ್_ಆಲ್ಕೋಹಾಲ್_ಪೇಯದ_ಮಿಶ್ರಣ
#ಮೊಕ್_ಟೈಲ್_ನಾನ್_ಆಲ್ಕೋಹಾಲ್_ಪೇಯದ_ಮಿಶ್ರಣ.
#ಬ್ಲಡಿ_ಮೇರಿ_ಕಾಕ್_ಟೈಲ್_ಸರಳ_ರೆಸಿಪಿ_ಇಲ್ಲಿದೆ.
ವೋಡ್ಕಾ - ವಿಸ್ಕಿ -ರಮ್ - ವೈನ್ ಗಳ ಸಮ ಮಿಶ್ರಣಕ್ಕೆ ನಿಂಬೆಹಣ್ಣಿನ ರಸ, ಸಕ್ಕರೆ ಕರಗಿಸಿದ ನೀರು, ಕಾಳು ಮೆಣಸಿನ ಪುಡಿ, ಎರೆಡು ಸಿಗಿದ ಹಸಿಮೆಣಸು ಇವುಗಳ ಜೊತೆ ಐಸ್ ಕ್ಯೂಬ್ ಸೇರಿಸಿ ಚೆನ್ನಾಗಿ ಶೇಖ್ ಮಾಡಿ ಗ್ಲಾಸಿಗೆ ತುಂಬಿದರೆ ಬ್ಲಡಿ ಮೇರಿ ತಯಾರು ಇದಕ್ಕೆ ಟೋಮೋಟೊ ಜ್ಯೂಸ್ / ಕೆಚಪ್ ಬಣ್ಣಕ್ಕಾಗಿ ಸೇರಿಸುತ್ತಾರೆ ಇದು ಹುಳಿ ಸಿಹಿ ಖಾರದ ಸಮ ರುಚಿಯ ತಂಪಾದ ಮಾದಕ ಪೇಯವಾಗಿದೆ.
ಈ ಕಾಕ್ ಟೈಲ್ ಎಂಬ ಆಲ್ಕೋಹಾಲ್ ಮಿಶ್ರಣದ ಮಾದಕ ಪೇಯಕ್ಕೆ ಅನೇಕ ಇತಿಹಾಸ ಇದೆ ವಿಶೇಷವಾದ ಕಾಕ್ ಟೈಲ್ ಗಳಾದ ಮಾರ್ಟಿನಾ - ಬ್ಲಡಿ ಮೇರಿ - ಮಾರ್ಗೆರಿಟಾ - ಓಲ್ಡ್ ಪ್ಯಾಶನ್ ಗಳು ಪ್ರಖ್ಯಾತಿ ಪಡೆದಿದೆ.
ನ್ಯೂಯಾರ್ಕ್ ನ ಬಾರ್ ಟೆಂಡರ್ ಜೆರ್ರಿ ಥಾಮಸ್ 1860 ರಲ್ಲಿ ಈ ಬ್ಲಡಿ ಮೇರಿ ಕಂಡು ಹಿಡಿದನೆಂಬ ದಾಖಲೆ ಇದೆ ಅವನಿಗೆ ಪ್ರೋಪೆಸರ್ ಎಂಬ ನಿಕ್ ನೇಮ್ ಇತ್ತು.
ಬೆಂಗಳೂರಿನ ರಾಜ ಭವನದ ಸಮೀಪ ಪೋಲಿಸ್ ಕಮೀಷನರ್ ಕಚೇರಿ ರಸ್ತೆಯ ಹೋಟೆಲ್ ಒಂದರಲ್ಲಿ ಪುದೀನಾ ಸೊಪ್ಪು ಬಳಸಿ ತಯಾರಿಸುತ್ತಿದ್ದ ಕಾಕ್ ಟೈಲ್ 2004 - 05 ರಲ್ಲಿ ಪ್ರಸಿದ್ದಿ ಪಡೆದಿತ್ತು ಅದನ್ನು ತಯಾರಿಸುತ್ತಿದ್ದ ಬಾರ್ ಟೆಂಡರ್ ಗೆ ಡಾಕ್ಟರ್ ಎಂಬ ನಿಕ್ ನೇಮ್ ಇತ್ತು.
ಕಡಿಮೆ ದರ್ಜೆಯ ಆಲ್ಕೋಹಾಲ್ ಬಳಸಿಯೂ ಅತಿ ಹೆಚ್ಚು ಬೆಲೆಯಲ್ಲಿ ಮಾರಾಟ ಆಗುವ ಕಾಕ್ ಟೈಲ್ ಗಳ ಪ್ರಪಂಚವೇ ವಿಶಾಲವಾಗಿದೆ.
ಬ್ಲಡಿ ಮೇರಿ ಸ್ಪೈಸಿ (ಖಾರವಾಗಿ) ಮಧ್ಯಪಾನಿಗಳಿಗೆ ಹೊಸ ಆರೋಮಾ ಮತ್ತು ಕಿಕ್ ನೀಡುತ್ತದೆ ಆದರೆ ಭಾರತೀಯ ಮಧ್ಯಪಾನಿಗಳಿಗೆ ಈ ಕಾಕ್ ಟೈಲ್ ಪ್ರಪಂಚ ಇನ್ನೂ ಹೆಚ್ಚು ಪರಿಚಯ ಆಗಿಲ್ಲ.
ಇವತ್ತು ನಾನು ತಯಾರಿಸಿದ ಬ್ಲಡಿ ಮೇರಿ ಕಾಕ್ ಟೈಲ್ ಅತ್ಯುತ್ತಮವಾಗಿದೆ ಇದರ ಸ್ವಾದವೇ ವಿಶೇಷ ಮುಂದಿನ ಬಾರಿ ಇನ್ನೂ ರುಚಿಕರವಾಗಿಸುವ ಭರವಸೆ ಇದೆ.
Comments
Post a Comment