https://youtu.be/QvYnCsnTv1M?feature=shared
#ನಾನು_ಧರಿಸುವ_ತುಳಸಿ_ಮಾಲೆ_ಬೆಂಗಳೂರಿನ_ಇಸ್ಕಾನಿಂದ_ಖರೀದಿಸಿದ್ದು.
#ಇಪ್ಪತ್ತೈದು_ವರ್ಷದಿಂದ_ಧರಿಸುತ್ತಿದ್ದೇನೆ.
#ತುಳಸಿ_ಮಾಲೆಯೇ_ನನ್ನ_ಬಂಗಾರ.
#ನನ್ನಲ್ಲಿರುವ_ಚಿನ್ನ_ಗುಲಗುಂಜಿ_ಗಾತ್ರದ_ಪುಷ್ಯರಾಗದ_ಹರಳು_ಪೊಣಿಸಿದ_ಕೊಂಡಿ_ಮಾತ್ರ.
#ವಿದೇಶದಲ್ಲಿ_ಅಡುಗೆಯಲ್ಲಿ_ತುಳಸಿ_ಬಳಸುತ್ತಾರೆ
#ನನ್ನ_ದೀರ್ಘಕಾಲದ_ಗಂಟಲು_ಸೋಂಕು_ಗುಣವಾಗಿದ್ದು_ನಿತ್ಯ_ಬೆಳಿಗ್ಗೆ_ತುಳಸಿ_ಕುಡಿ_ಸೇವಿಸಿದ್ದರಿಂದ .
ತುಳಸಿ ಭಾರತ ಮೂಲದ ಔಷದಿ ಸಸ್ಯ ಇದರ ಸುವಾಸನೆ, ಔಷದಿಯುಕ್ತ ರುಚಿ ವಿಬಿನ್ನ , ಭಾರತದಲ್ಲಿ 5000 ವರ್ಷದಿಂದ ಬಳಕೆಯಲ್ಲಿದೆಯಂತೆ.
ಹಿಂದೂ ಧರ್ಮದಲ್ಲಿ ತುಳಸಿಗೆ ಪವಿತ್ರ ಸ್ಥಾನ ನೀಡಿದೆ, ಪೂಜಾ ವಿಧಾನಗಳಲ್ಲಿ ತುಳಸಿ ಬೇಕೇ ಬೇಕು, ಪ್ರತಿಯೊಬ್ಬ ಹಿಂದು ಧರ್ಮಿಯರ ಮನೆಯಲ್ಲಿ ತುಳಸಿ ಗಿಡ ಇರದೇ ಇರದು.
ತುಳಸಿ ಮಾಲೆ ಧರಿಸಿದರೆ ಯಾವುದೇ ಸಾಂಕ್ರಮಿಕ ರೋಗ ಅಥವ ಅಕಾಲಿಕ ಮರಣ ಎದುರಾಗುವುದಿಲ್ಲ ಎಂಬ ಹಿಂದೂ ಧಾರ್ಮಿಕ ನಂಬಿಕೆ ಆಚರಣೆಯಲ್ಲಿದೆ.
ತುಳಸಿ ಮಾಲೆ ಜ್ವರ - ನೆಗಡಿ-ತಲೆನೋವು - ಚರ್ಮ ರೋಗ ನಿವಾರಣೆ ಮಾಡುವ ಆಯುರ್ವೇದ ಔಷದಿ ಶಕ್ತಿ ಹೊಂದಿದೆ.
108 ತುಳಿಸಿ ಮಣಿಯ ಹಾರ ನಾನು 1995 ರಿಂದ ಧರಿಸುತ್ತಿದ್ದೇನೆ ಮತ್ತು ಇದನ್ನು ನಾನು ಖರೀದಿಸುವುದು ಬೆಂಗಳೂರಿನ ಇಂಟರನ್ಯಾಷನಲ್ ಸೊಸೈಟಿ ಪಾರ್ ಕೃಷ್ಣ ಕಾನ್ಷಿಯಸ್ನೆಸ್ (ISKON) ಸಂಸ್ಥೆಯಲ್ಲಿ.
ಹೋದಾಗೆಲ್ಲ 5-6 ತುಳಸಿ ಮಣಿ ಹಾರ ಖರೀದಿಸಿ ತರುತ್ತೇನೆ ಅದು ಶಿಥಿಲವಾದಾಗ ಅಥವ ಮಣಿಗಳು ಕಳಚಿ ಹೋದಾಗ ಮತ್ತೆ ಹೊಸದನ್ನು ಧರಿಸುತ್ತೇನೆ.
1966 ರಲ್ಲಿ ಸ್ವಾಮಿ ಪ್ರಭು ಪಾದರು ಸ್ಥಾಪಿಸಿದ ಈ ಕೃಷ್ಣ ಆರಾದನ ಸಂಸ್ಥೆ ವಿಶ್ವದಾದ್ಯಂತ 500 ಕ್ಕೂ ಹೆಚ್ಚು ದೇವಾಲಯ ನಿರ್ಮಿಸಿದೆ ಈ ಸಂಸ್ಥೆ ತುಳಸಿ ಗಿಡದ ಕಾಂಡ ಮತ್ತು ಬೇರುಗಳಿಂದ ತುಳಸಿಮಣಿ ತಯಾರಿಸಿ ಅದಕ್ಕೆ ರಂದ್ರ ಕೊರೆದು ಬಿಸಿಲಲ್ಲಿ ಒಣಗಿಸಿ ಗಟ್ಟಿ ರೇಷ್ಮೆದಾರದಲ್ಲಿ 108 ಮಣಿಗಳನ್ನು ಪೊಣಿಸಿ ತುಳಸಿ ಮಾಲೆ ತಯಾರಿಸಿ ವಿಶ್ವದಾದ್ಯಂತ ಕೃಷ್ಣ ಭಕ್ತರಿಗೆ ತಲುಪಿಸುತ್ತದೆ ಆದ್ದರಿಂದ ನನ್ನ ತುಳಸಿ ಮಾಲೆ ಆಯ್ಕೆ ಖರೀದಿ ಸ್ಥಳ ಇಸ್ಕಾನ್ ಮಾತ್ರ, ಬೇರೆ ಕಡೆ ತುಳಸಿ ಮಾಲೆ ಹೆಸರಲ್ಲಿ ಬಳಸುವುದು ತುಳಸಿಯೇತರ ಕಟ್ಟಿಗೆಯ ನಕಲಿ ತುಳಸಿ ಮಾಲೆ.
ಈ ತುಳಸಿ ಮಾಲೆಗೆ ನಾನು ಪುಷ್ಯ ಹಾರದ ಒಂದು ಹರಳಿನ ಮಣಿ ಗುಲಗುಂಜಿ ತೂಕದ ಬಂಗಾರದ ತಂತಿಯಲ್ಲಿ ಪೊಣಿಸಿದ ಕೊಂಡಿಯನ್ನು ಲಗತ್ತಿಸುತ್ತೇನೆ.
ಈ ಪುಷ್ಯ ಹಾರದ ಮಣಿ ನೀಡಿದವರು ಕೃಷ್ಣ ರಾವ್ ಎಂಬ ನಿವೃತ್ತ ನೇವಿ ಅಧಿಕಾರಿ, ನಂತರ ಅವರು ಶಿವಮೊಗ್ಗ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಸೇವೆ ಮಾಡಿದವರು ಇವರು ಇಂತಹ ಪುರಾತನ ಕಾಲದ ಹರಳುಗಳ ಸಂಗ್ರಹಕಾರರು.
ನಾನು ಚಿನ್ನ ಧರಿಸಬಾರದೆಂಬ ಶಪಥ ತೊಟ್ಟವನಾದ್ದರಿಂದ ನನ್ನ ಹತ್ತಿರ ಯಾವುದೇ ಚಿನ್ನದ ಆಭರಣ ಇಲ್ಲ ಆದರೆ ಈ ಪುಷ್ಯರಾಗದ ಹರಳು ಧರಿಸಲಿಕ್ಕಾಗಿ ಗುಲಗುಂಜೆ ಗಾತ್ರದ ಚಿನ್ನ ಬಳಸಿದ್ದೇನೆ, ನನ್ನ ದೇಹದಲ್ಲಿ ಬೆಳ್ಳಿ ಧರಿಸಿದರೆ ಒಂದೇ ದಿನದಲ್ಲಿ ಬೆಳ್ಳಿ ಕಪ್ಪಾಗುತ್ತದೆ.
ತುಳಸಿ ಮಾಲೆ ಎಲ್ಲರೂ ಧರಿಸುವಂತಿಲ್ಲ, ಮಾಂಸ ಹಾರ ಸೇವಿಸುವವರು ತುಳಸಿ ಮಾಲೆ ಧರಿಸ ಭಾರದು ಎಂತೆಲ್ಲ ಬೂದುಗುಂಬಳ ಕಾಯಿಯ ಬಳಕೆ ಮಾಡಲು ಇಲ್ಲ ಸಲ್ಲದ ಕಾರಣಗಳನ್ನು ಹೇಳುವಂತೆ ಹೇಳುತ್ತಾರೆ ಆದರೆ ಅದೆಲ್ಲ ಮೂಡನಂಬಿಕೆ ಮಾತ್ರ.
ವಿದೇಶಗಳಲ್ಲಿ ತುಳಸಿಯನ್ನು ಅಡಿಗೆಯಲ್ಲಿ ನಾವು ಶುಂಠಿ ಬಳಸುವಂತೆ ಬಳಸುತ್ತಾರೆ.
Comments
Post a Comment