https://youtu.be/KgWnBHzPvXA?feature=shared
#ಇಬ್ಬುಡಲ_ಹಣ್ಣಿನ_ಪಾನಕದ_ಸ್ವಾದ_ಘಮ_ಬೇರಾವ_ಪೇಯಕ್ಕೂ_ಇರಲಿಕ್ಕಿಲ್ಲ.
#ಕರಬೂಜದ_ಪ್ರಭೇದದ_ಇಬ್ಬುಡಲಕ್ಕೆ_ಇಂಗ್ಲೀಷ್ನಲ್ಲಿ_ಸ್ನ್ಯಾಪ್_ಮೆಲನ್
#ಮಲೆನಾಡಿನಲ್ಲಿ_ದಸರಾ_ಹಬ್ಬದಲ್ಲಿ_ಸಿಗುವ_ವಿಶೇಷ_ಫಲ.
ನಮ್ಮ ಸಂಸ್ಥೆಯ ಮಹಿಳಾ ಸಿಬ್ಬಂದಿ ಹೊಸಕೊಪ್ಪದ ಇಂದಿರಮ್ಮ ಇಬ್ಬುಡಲ ಹಣ್ಣು ತಂದುಕೊಟ್ಟಿದ್ದನ್ನ ಇವತ್ತು ಅದರ ತಿರುಳಿಗೆ ಮಲೆನಾಡಿನ ಆಲೇಮನೆ ಬೆಲ್ಲ, ಏಲಕ್ಕಿ ಮತ್ತು ಕಾಳುಮೆಣಸಿನ ಪುಡಿ ಸೇರಿಸಿದ ಪಾನಕ ಇವತ್ತಿನ ವಿಶೇಷ.
ಇಬ್ಬುಡಲ ಹಣ್ಣು ಕರಬೂಜ ಪ್ರಬೇದಕ್ಕೆ ಸೇರಿದೆ ಇದರ ಅತಿ ಹೆಚ್ಚು ಉತ್ಪಾದನೆ ಚೀನಾ ದೇಶದಲ್ಲಿದೆ.
ಇಬ್ಬುಡಲ ಹಣ್ಣು ಡಿಸೆಂಬರ್ ನಿಂದ ಮೇ ತನಕ ಕೋಯ್ಲುಗೆ ಬರುತ್ತದೆ ಆದರೆ ಇದರ ಅಪರೂಪದ ಕೆಲವು ಮಲೆನಾಡಿನ ತಳಿಗಳು ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಣ್ಣಾಗಿ ಸಿಗುತ್ತದೆ ಅಂತಹ ಒಂದು ಇಬ್ಬಡಲ ಹಣ್ಣನ್ನು ಇಂದಿರಮ್ಮ ತಂದಿದ್ದು.
Comments
Post a Comment