Skip to main content

Posts

Showing posts from 2026

4163.ವಿಶ್ವ_ಜೇನುನೊಣ_ದಿನ_ಮೇ_20.ಭಾಗ_5_ಕುಂದಾಪುರ_ಕನ್ನಡಿಗ_ರಾಜ್ಯಸಭಾ_ಸದಸ್ಯರಾಗಿದ್ದ ಅನಿಲ್_ಪ್ರಸಾದ್_ಹೆಗ್ಡೆ_ಸಂದರ್ಶನ.

ವಿಶ್ವ_ಜೇನುನೊಣ_ದಿನ_ಮೇ_20. ಭಾಗ_5_ಕುಂದಾಪುರ_ಕನ್ನಡಿಗ_ರಾಜ್ಯಸಭಾ_ಸದಸ್ಯರಾಗಿದ್ದ  ಅನಿಲ್_ಪ್ರಸಾದ್_ಹೆಗ್ಡೆ_ಸಂದರ್ಶನ.   ದೇಶಿ ಬೀಜ - ಜೇನು ಸಂರಕ್ಷಣೆ ಬಗ್ಗೆ ವಿಶ್ವ ಮಟ್ಟದಲ್ಲಿ ಭಾರತ ದೇಶದ ಗಟ್ಟಿ ಧ್ವನಿಯಾಗಿರುವ ಜಾರ್ಜ್ ಪರ್ನಾಂಡಿಸರ ಶಿಷ್ಯ ಹೋರಾಟಗಾರ ಕುಂದಾಪುರದ ಕನ್ನಡಿಗ, ಬಿಹಾರದಿಂದ ರಾಜ್ಯ ಸಭಾ ಸದಸ್ಯರಾಗಿದ್ದ ಅನಿಲ್ ಪ್ರಸಾದ್ ಹೆಗ್ಡೆ ಸಂದರ್ಶನ ನೋಡಿ.  ಈ ವರ್ಷ ಸ್ಲೋವೇನಿಯಾದಲ್ಲಿ ನಡೆದ ಜೇನು ಕೃಷಿಯ ಪಯೋನೀರ್ #ಆ0ಟೆನ್_ಜೊನ್ಸಾ ಅವರ 292ನೇ ಹುಟ್ಟು ಹಬ್ಬದಲ್ಲಿ ಅನಿಲ್ ಹೆಗ್ಡೆ ಬಾಗಿಯಾಗಿದ್ದರು.   ಈ ಪೋಸ್ಟ್ ನಿಮ್ಮ ಪರಿಚಿತ ಜೇನು ಕೃಷಿಕರಿಗೆ ತಲುಪಿಸಲು ಶೇರ್ ಮಾಡಬೇಕಾಗಿ ವಿನಂತಿ.   ಆಂಟನ್ ಜಾನ್ಸಾ ಅವರ 292ನೇ #ಜನ್ಮದಿನ ಹಾಗೂ ವಿಶ್ವ ಜೇನು ದಿನದ  ಪ್ರಮುಖ ಕಾರ್ಯಕ್ರಮಗಳು ಸ್ಲೋವೇನಿಯಾದಲ್ಲಿ ನಡೆದವು.  ಸ್ಲೋವೇನಿಯಾ ಸರ್ಕಾರದ ಕೃಷಿ ಸಚಿವಾಲಯ, ವಿಶ್ವಸಂಸ್ಥೆಯ ಎಫ್‌ಎಒ (FAO) ಮತ್ತು ಅಪಿಯಾಮಾಂಡಿಯಾ (APIMONDIA) ಸಂಯುಕ್ತವಾಗಿ ಆಯೋಜಿಸಿದ್ದ "3ನೇ ಸುಸ್ಥಿರ ಜೇನುಸಾಕಣೆ ಮತ್ತು ಪರಾಗಸ್ಪರ್ಶ ಅಂತರರಾಷ್ಟ್ರೀಯ ವೇದಿಕೆ" (3rd International Forum) ಮೇ 20–21, 2026 ರಂದು ಸ್ಲೋವೇನಿಯಾದ ಮಾರಿಬೋರ್ ನಗರದಲ್ಲಿ ನಡೆಯಿತು.    ​ ಆಂಟನ್ ಜಾನ್ಸಾ ಅವರ ಜನ್ಮಸ್ಥಳವಾದ ಬ್ರೆಜ್ನಿಕಾದಲ್ಲಿರುವ ಐತಿಹಾಸಿಕ ಜೇನುಗೂಡಿನ ತಾಣದಲ್ಲಿ  ಸಾಂ...

4162.ನೇಪಾಳದ_ಕಾಳಿಗಂಡಿಕೆ_ನದಿಯಲ್ಲಿನಸಾಲಿಗ್ರಾಮದ_ಬೃಹತ್_ಪ್ರತಿಕೃತಿ.

ನೇಪಾಳದ_ಕಾಳಿಗಂಡಿಕೆ_ನದಿಯಲ್ಲಿನ ಸಾಲಿಗ್ರಾಮದ_ಬೃಹತ್_ಪ್ರತಿಕೃತಿ.   ಪ್ರವಾಹ ಬರುವ ಹಲವು ತಿಂಗಳುಗಳ ಹಿಂದೆಯೇ ಇದು ಯಾತ್ರಿಕರ ಪ್ರಮುಖ ಫೋಟೋ ಸ್ಪಾಟ್ ಆಗಿತ್ತು ಆದರೆ ಸಾಮಾಜಿಕ ಜಾಲತಾಣದಲ್ಲಿ 26- ಆಗಸ್ಟ್ -2026ರಂದು ನೇಪಾಳದಲ್ಲಿ ಸಂಭವಿದ ಮಹಾ ದುರಂತ ಬೋಟಿ ಕೋಶಿ ನದಿಯಲ್ಲಿ ತೇಲಿ ಬಂದ ಬೃಹತ್  ಸಾಲಿಗ್ರಾಮದ ಶಿಲೆ ಎಂದು ಹರಿದಾಡುತ್ತಿದೆ ಆದರೆ ಇದು ತಪ್ಪು ಮಾಹಿತಿ.   ನಾನು ಸಾಲಿಗ್ರಾಮದ ಮೇಲೆ ಒಂದು ಪುಸ್ತಕ ಪ್ರಕಟ ಮಾಡಲಿದ್ದೇನೆ ಆದ್ದರಿಂದ ವಿಶ್ವದ ಸಾಲಿಗ್ರಾಮದ ಬಗ್ಗೆ ಅನೇಕ ಮಾಹಿತಿ ಸಂಗ್ರಹಿಸಿ ಬರೆದಿದ್ದೇನೆ ಆದ್ದರಿಂದ ಈ ಸಾಮಾಜಿಕ ಜಾಲತಾಣದ ಈ ತಪ್ಪು ಸಂದೇಶಕ್ಕೆ ಸರಿಯಾದ ಮಾಹಿತಿ ನೀಡಲು ಈ ಲೇಖನ ಬರೆದಿದ್ದೇನೆ, ನನ್ನ ಪುಸ್ತಕದ ಒಂದೆರೆಡು ಅದ್ಯಾಯ ಕೂಡ ಮುಂದಿನ ದಿನಗಳಲ್ಲಿ ಪೇಸ್ ಬುಕ್ ನಲ್ಲಿ ಪೋಸ್ಟ್ ಮಾಡುತ್ತೇನೆ ....  ಈ ಬೃಹತ್ ಸಾಲಿಗ್ರಾಮದ ಪ್ರತಿಕೃತಿ ಇರುವುದು #ನೇಪಾಳದ_ಮುಸ್ತಾಂಗ್_ಜಿಲ್ಲೆಯ_ಕಾಳಿಗಂಡಕಿ_ನದಿಯ_ತೀರದಲ್ಲಿರುವ_ಜೋಮ್ಸೋಮ್ ಪ್ರದೇಶದಲ್ಲಿದೆ.    ನೇಪಾಳ ರಾಜ್ಯದ ಮುಸ್ತಾಂಗ್ ಜಿಲ್ಲೆಯ ಕಾಳಿಗಂಡಕಿ ನದಿಯ ಜೋಮ್ಸಮ್ ಪ್ರದೇಶದಲ್ಲಿ 2026ರ ಏಪ್ರಿಲ್ 20 ರಿಂದ ಮೇ 4ರವರೆಗೆ ನಡೆದ #ನೇಪಾಳ_ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಕಾರ್ಯಾಗಾರದಲ್ಲಿ ನದಿ ದಂಡೆಯ ಬೃಹತ್ ಬಂಡೆ ಕೆತ್ತಿ ರಚಿಸಿದ ಸಾಲಿಗ್ರಾಮದ ಪ್ರತಿ ಕೃತಿ ಇದು,ಅಲ್ಲಿ ಇದೊಂದೆ ಅಲ್ಲ ಇಂತಹ ಸುಮಾರು 18 ಶಿಲ...

4161.ಬೇಬಿ_ಬೂಮರ್ಸ್_1946_ರಿಂದ_1964. ನಿಮ್ಮ ಜನ್ಮ ವರ್ಷ 1946 ರಿಂದ 1964 ರ ಒಳಗಿನವರಾಗಿದ್ದರೆ ನೀವು ಬೇಬಿ ಬೂಮರ್ಸ್ ತಲೆಮಾರಿನವರಾಗಿರುತ್ತೀರಿ.

ಬೇಬಿ_ಬೂಮರ್ಸ್_1946_ರಿಂದ_1964.   ನಿಮ್ಮ ಜನ್ಮ ವರ್ಷ 1946 ರಿಂದ 1964 ರ ಒಳಗಿನವರಾಗಿದ್ದರೆ ನೀವು ಬೇಬಿ ಬೂಮರ್ಸ್ ತಲೆಮಾರಿನವರಾಗಿರುತ್ತೀರಿ.    ಈ ತಲೆಮಾರು ವರ್ಗೀಕರಣ ಮಾಡಿದ್ದು ಹೇಗೆ? ಈ ಹೆಸರು ಬರಲು ಕಾರಣ? ಅವರ ನಡೆ-ನುಡಿ- ಸ್ವಭಾವ ಹೇಗೆ?  ಇತ್ಯಾದಿ ಮಾಹಿತಿ ಈ ಲೇಖನದಲ್ಲಿದೆ.   ಈ ಕಾಲಮಾನದವರಿಗೆ ಈ ಲೇಖನವನ್ನು ಶೇರ್ ಮಾಡಿ ಅವರಿಗೆ ಈ ಮಾಹಿತಿ ಉಪಯುಕ್ತವಾಗಲಿ, ನೀವು ಈ ಕಾಲಮಾನದವರ ಗುಣ ಸ್ವಭಾವ ಅರಿಯಲು ಈ ಲೇಖನ ಪೂರ್ಣ ಓದಿ.   ಜನರ ಹುಟ್ಟಿದ ವರ್ಷ ಮತ್ತು ಆ ಕಾಲಘಟ್ಟದ ಸಾಮಾಜಿಕ-ಆರ್ಥಿಕ ಬದಲಾವಣೆಗಳ ಆಧಾರದ ಮೇಲೆ ಸಮಾಜಶಾಸ್ತ್ರಜ್ಞರು, ಜನಸಂಖ್ಯಾಶಾಸ್ತ್ರಜ್ಞರು ಮತ್ತು ಸಂಶೋಧನಾ ಸಂಸ್ಥೆಗಳು ಮುಖ್ಯವಾಗಿ ಅಮೆರಿಕದ Pew Research Center, US Census Bureau ಈ ಪೀಳಿಗೆಯ ವರ್ಗೀಕರಣವನ್ನು ಮಾಡಿವೆ. ​ ಅವುಗಳ ವರ್ಗೀಕರಣದ ಮಾನದಂಡಗಳು  #ಬೇಬಿ_ಬೂಮರ್ಸ್1946 – 1964ಎರಡನೇ ಮಹಾಯುದ್ಧದ ನಂತರ ಜನನ ಪ್ರಮಾಣ ದಿಢೀರ್ ಹೆಚ್ಚಾದ ಕಾಲ ಸಾಂಪ್ರದಾಯಿಕ ಕೆಲಸದ ಸಂಸ್ಕೃತಿ ಮತ್ತು ಆರ್ಥಿಕ ಸ್ಥಿರತೆಗೆ ಹೆಚ್ಚು ಒತ್ತು.   #ಜನರೇಷನ್_X (Gen X)1965 – 1980ಕಂಪ್ಯೂಟರ್ ಮತ್ತು ತಂತ್ರಜ್ಞಾನದ ಆರಂಭಿಕ ಬೆಳವಣಿಗೆಯನ್ನು ಕಂಡವರು, ಸ್ವಾವಲಂಬನೆಗೆ ಹೆಸರುವಾಸಿ. #ಮಿಲೇನಿಯಲ್ಸ್ (Millennials / Gen Y)1981 – 1996,ಇಂಟರ್ನೆಟ್ ಕ್ರಾಂತಿಯ ನಡುವೆ ಬೆಳೆದವರು,ಡಿಜಿಟಲ್ ತ...

4160.ಹ್ಯೂಯನ್_ತ್ಸಾಂಗ್ ಬನವಾಸಿಗೆ_ಬಂದಿದ್ದ_ದಾಖಲೆ. ಎಲ್ಲಿಯ ಚೀನಾ.. ಎಲ್ಲಿಯ ಬನವಾಸಿ? ನಮ್ಮ ವರದಾ ನದಿ ದಂಡೆಗೆ.

ಹ್ಯೂಯನ್_ತ್ಸಾಂಗ್  ಬನವಾಸಿಗೆ_ಬಂದಿದ್ದ_ದಾಖಲೆ.   ಎಲ್ಲಿಯ ಚೀನಾ.. ಎಲ್ಲಿಯ ಬನವಾಸಿ? ನಮ್ಮ ವರದಾ ನದಿ ದಂಡೆಗೆ.   ಹ್ಯೂಯನ್ ತ್ಸಂಗ್ 7ನೇ ಶತಮಾನದಲ್ಲಿ ಬನವಾಸಿಗೆ ಭೇಟಿ ನೀಡಿದಾಗ ಇಲ್ಲಿ ಅಶೋಕ ನಿರ್ಮಿಸಿದ್ದ ಸುಮಾರು 100 ಅಡಿ ಎತ್ತರದ ಇಟ್ಟಿಗೆಯ ಸ್ತೂಪವಿತ್ತು ಎಂದು ತಮ್ಮ 'ಸಿ-ಯು-ಕಿ' ಗ್ರಂಥದಲ್ಲಿ ದಾಖಲಿಸಿದ್ದಾರೆ.  ​ಇಂದು ಸ್ತೂಪವು ಪೂರ್ಣ ಪ್ರಮಾಣದ ಗೋಪುರದ ರೂಪದಲ್ಲಿ ಉಳಿದಿಲ್ಲದಿದ್ದರೂ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ನಡೆಸಿದ ಉತ್ಖನನದಲ್ಲಿ ದೊರೆತ ಸ್ತೂಪದ ಭದ್ರ ಬುನಾದಿ, ಚೈತ್ಯ ಗೃಹಗಳ ಕಲ್ಲು-ಇಟ್ಟಿಗೆಯ ರಚನೆಗಳು ಹಾಗೂ ಬೌದ್ಧ ಕಲಾಕೃತಿಗಳನ್ನು ಬನವಾಸಿ ಮತ್ತು ಸಮೀಪದ ವಸ್ತುಸಂಗ್ರಹಾಲಯಗಳಲ್ಲಿ ಸಂರಕ್ಷಿಸಲಾಗಿದೆ.   ಕ್ರಿ.ಶ. 7ನೇ ಶತಮಾನದಲ್ಲಿ ಭಾರತಕ್ಕೆ ಭೇಟಿ ನೀಡಿದ ಪ್ರಸಿದ್ಧ ಚೀನೀ ಬೌದ್ಧ ಭಿಕ್ಷು, ವಿದ್ವಾಂಸ ಮತ್ತು ಪ್ರವಾಸಿ. ಇವರನ್ನು "ಯಾತ್ರಿಕರ ರಾಜ" ಎಂದೂ ಕರೆಯಲಾಗುತ್ತದೆ. ಅವರ ಈ ಏಕಾಂಗಿ ದೀರ್ಘ ಭಾರತದ ಪ್ರವಾಸ​ದ ಉದ್ದೇಶ ಭಾರತದಿಂದ ಬೌದ್ಧ ಧರ್ಮದ ಮೂಲ ಗ್ರಂಥಗಳನ್ನು ಅಧ್ಯಯನ ಮಾಡುವುದು ಹಾಗೂ ಬೌದ್ಧ ಧರ್ಮಗ್ರಂಥಗಳನ್ನು ಸಂಗ್ರಹಿಸಿ ಅವರ ತಾಯಿ ನಾಡು ಚೀನಾಕ್ಕೆ ತೆಗೆದುಕೊಂಡು ಹೋಗುವುದು. ​  ಅವರು ಕ್ರಿ.ಶ. 629 ರಿಂದ 645 ರವರೆಗೆ ಸುಮಾರು 16 ವರ್ಷಗಳ ಕಾಲ ಭಾರತದಲ್ಲಿದ್ದರು. ​ ಉತ್ತರ ಭಾರತದ ಸಾಮ್ರಾಟ #ಹರ್ಷವರ್ಧನನ ಆಸ್ಥಾನಕ್ಕೆ ಭೇ...

4159.ಗಾಯಿತ್ರಿ_ಮಂತ್ರಮಹರ್ಷಿ_ವಿಶ್ವಾಮಿತ್ರರುಭಾಗ_3.

ಗಾಯಿತ್ರಿ_ಮಂತ್ರ ಮಹರ್ಷಿ_ವಿಶ್ವಾಮಿತ್ರರು ಭಾಗ_3. ಶೂದ್ರ ದಲಿತರಿಗೆ ಗಾಯಿತ್ರಿ ಮಂತ್ರ ಸಲ್ಲದು, ವೇದಾದಿಕಾರ ಇಲ್ಲ ಎಂಬುದು ಎಷ್ಟು ಸತ್ಯ?...   ಗಾಯಿತ್ರಿ ಮಂತ್ರ ರಚಿಸಿದ ವಿಶ್ವಾಮಿತ್ರ ಮಹರ್ಷಿಗಳು ಗಾಯತ್ರಿ ಮಂತ್ರವು ಶೂದ್ರರಿಗೆ ಸಲ್ಲದು ಎಂದು ಎಲ್ಲಿಯೂ ಹೇಳಿಲ್ಲ.   ​ವಾಸ್ತವದಲ್ಲಿ ವೇದಗಳ ಮೂಲ ಸಾಹಿತ್ಯ ಮತ್ತು ವಿಶ್ವಾಮಿತ್ರರ ಜೀವನ ಚರಿತ್ರೆಯನ್ನು ಗಮನಿಸಿದರೆ ಇದಕ್ಕೆ ವಿರುದ್ಧವಾದ ಸತ್ಯಗಳು ಕಂಡುಬರುತ್ತವೆ.   ಋಗ್ವೇದದಲ್ಲಿ ಯಾವುದೇ ಜಾತಿ ನಿರ್ಬಂಧವಿಲ್ಲ ​ಗಾಯತ್ರಿ ಮಂತ್ರವು ಋಗ್ವೇದದ 3ನೇ ಮಂಡಲದಲ್ಲಿದೆ (3.62.10) ಇದರ ದ್ರಷ್ಟಾರರು ವಿಶ್ವಾಮಿತ್ರ ಋಷಿಗಳು.  ​ ಋಗ್ವೇದದ ಮೂಲ ಮಂತ್ರಗಳಲ್ಲಿ ಯಾವುದೇ ಒಂದು ವರ್ಣ ಅಥವಾ ಜಾತಿಗೆ ಮಾತ್ರ ಮಂತ್ರ ಸೀಮಿತವೆಂಬ ಉಲ್ಲೇಖವಿಲ್ಲ.    ​ಗಾಯತ್ರಿ ಮಂತ್ರವು ಸೂರ್ಯದೇವನ ತೇಜಸ್ಸನ್ನು ಪ್ರಾರ್ಥಿಸುತ್ತಾ "ನಮ್ಮ ಎಲ್ಲರ ಬುದ್ಧಿಯನ್ನು ಸನ್ಮಾರ್ಗದಲ್ಲಿ ನಡೆಸು" (ಧಿಯೋ ಯೋ ನಃ ಪ್ರಚೋದಯಾತ್) ಎಂದು ಸಮಸ್ತ ಮಾನವಕುಲದ ಪ್ರಜ್ಞೆಯ ವಿಕಾಸಕ್ಕಾಗಿ ಸಾಮೂಹಿಕವಾಗಿ ಬೇಡುವ ಸಾರ್ವತ್ರಿಕ ಪ್ರಾರ್ಥನೆಯಾಗಿದೆ. ​  ವಿಶ್ವಾಮಿತ್ರರ ಸ್ವಂತ ವ್ಯಕ್ತಿತ್ವವೇ ಜಾತಿ ವ್ಯವಸ್ಥೆಗೆ ವಿರುದ್ಧವಾದದ್ದು,​ವಿಶ್ವಾಮಿತ್ರರು ಹುಟ್ಟಿನಿಂದ ಬ್ರಾಹ್ಮಣರಲ್ಲ ಅವರು ಕ್ಷತ್ರಿಯ ರಾಜರಾಗಿದ್ದವರು (ಕೌಶಿಕ ರಾಜ) ತಪಸ್ಸಿನ ಬಲದಿಂದ ಬ್ರಹ್ಮರ್ಷಿ ಪಟ್ಟವನ್ನು ಪಡೆದವರ...

4158.ಧಪ್ಕೇರಳ_ಕರಾವಳಿಯ_ಮುಸ್ಲಿಂ_ಸಮುದಾಯಿಕ_ಕಲೆ_ಮತ್ತು_ನೃತ್ಯ

ಧಪ್ ಕೇರಳ_ಕರಾವಳಿಯ_ಮುಸ್ಲಿಂ_ಸಮುದಾಯಿಕ_ಕಲೆ_ಮತ್ತು_ನೃತ್ಯ   ನಮ್ಮ ಬಾಲ್ಯದಲ್ಲಿ ನಮ್ಮ ಹಳ್ಳಿಗಳಲ್ಲಿ #ಸೂಪಿ_ಸಂತರ ಪರಿವಾರ ನಡೆದುಕೊಂಡು ಹಾದು ಹೋಗುವಾಗ ಅವರ ಕೈಯಲ್ಲಿನ ದಪ್ ನೋಡಿದ್ದೆ ಈಗ ಅಂತವರು ಹಳ್ಳಿಗಳಿಗೆ ಬರುವುದಿಲ್ಲ, #ಜಾವಗಲ್ ದರ್ಗಾದಲ್ಲಿ ಈಗ ನೋಡಬಹುದು.   ಕರಾವಳಿಯಲ್ಲಿ ಈ ದಪ್ ತಂಡಗಳನ್ನು ನೋಡುತ್ತೇವೆ ಆದರೆ ಮಲೆನಾಡಿನಲ್ಲಿ ಇದು ಕಾಣ ಸಿಗುವುದಿಲ್ಲ ಯಾಕೆ? ಗೊತ್ತಿರುವವರು ದಯಮಾಡಿ ಕಾಮೆಂಟ್ ಮಾಡಲು ವಿನಂತಿ.  #ದಪ್_ಎಂದರೇನು? ಇಲ್ಲಿದೆ ಮಾಹಿತಿ ಓದಿ....   ದಫ್ ಮುಟ್ಟು ಅಥವಾ ದಫ್ ಕಲಿ ಎಂಬುದು ಮುಸ್ಲಿಂ ಸಮುದಾಯದ ಅತ್ಯಂತ ಪ್ರಸಿದ್ಧ ಸಾಂಪ್ರದಾಯಿಕ ಕಲೆ ಮತ್ತು ನೃತ್ಯ ಪ್ರಕಾರವಾಗಿದೆ.    ಕರ್ನಾಟಕದ ಕರಾವಳಿ (ದಕ್ಷಿಣ ಕನ್ನಡ, ಉಡುಪಿ, ಭಟ್ಕಳ) ಹಾಗೂ ಕೇರಳದ ಮಲಬಾರ್ ಪ್ರದೇಶಗಳಲ್ಲಿ ಇದು ಬಹಳ ಜನಪ್ರಿಯ.  ಇದು ಮರದ ಚೌಕಟ್ಟು ಹಾಗೂ ಮೇಕೆ ಅಥವಾ ಪ್ರಾಣಿಯ ಚರ್ಮದಿಂದ ಮಾಡಲಾದ ಒಂದು ಮುಖದ ಚರ್ಮವಾದ್ಯ, ಕೈಯ ಬೆರಳುಗಳು ಮತ್ತು ಅಂಗೈಯಿಂದ ಇದನ್ನು ನುಡಿಸಲಾಗುತ್ತದೆ. ​  ಸಾಮಾನ್ಯವಾಗಿ 8 ರಿಂದ 10 ಅಥವಾ ಅದಕ್ಕಿಂತ ಹೆಚ್ಚು ಕಲಾವಿದರು ವೃತ್ತಾಕಾರದಲ್ಲಿ ಅಥವಾ ಸಾಲಾಗಿ ನಿಂತು, ದಫ್ ಬಡಿಯುತ್ತಾ ಲಯಬದ್ಧವಾಗಿ ಹೆಜ್ಜೆ ಹಾಕಿ ನೃತ್ಯ ಮಾಡುತ್ತಾರೆ. ​  ಪ್ರವಾದಿ ಮುಹಮ್ಮದ್ ಅವರ ಸ್ತುತಿಗೀತೆಗಳು (ಮದ್ಹ್), ಸೂಫಿ ಗೀತೆಗಳು ಹಾಗೂ ಐತಿಹಾಸಿಕ ಘಟನೆಗಳನ್ನು ವ...

4157.ರಾಣಿ_ಚೆನ್ನಭೈರಾದೇವಿ_ಸೆರೆಮನೆ_ವಾಸದನಿಜವಾದ_ಅವಧಿ_ಎಷ್ಟು?...

ರಾಣಿ_ಚೆನ್ನಭೈರಾದೇವಿ_ಸೆರೆಮನೆ_ವಾಸದ ನಿಜವಾದ_ಅವಧಿ_ಎಷ್ಟು?...    ಕಾಳು ಮೆಣಸಿನ ರಾಣಿ ಬಿರುದಾಂಕಿತ ಗೇರುಸೊಪ್ಪೆಯ ಸಾಳ್ವ ಕುಲದ #ಮಹಾ_ಮಂಡಲೇಶ್ವರಿ ರಾಣಿ ಚೆನ್ನ ಬೈರಾದೇವಿ ಕೆಳದಿ ರಾಜ ವೆಂಕಟಪ್ಪ ನಾಯಕರಿಂದ ಪರಾಭವಗೊಂಡು ಅವರ ರಾಜಧಾನಿ ಇಕ್ಕೇರಿಯ ಸೆರೆಮನೆಯಲ್ಲಿ ಬಂದನದಲ್ಲಿದ್ದರು.    ರಾಣಿ ಚೆನ್ನ ಬೈರಾದೇವಿ ಯುದ್ಧದಲ್ಲಿ ಸೋತು ಬಂದನಕ್ಕೆ ಒಳಗಾಗಿದ್ದು 1606ರಲ್ಲಿ ಹಾಗಾದರೆ ಅವರು ಎಷ್ಟು ದಿನ ಬಂದನದಲ್ಲಿದ್ದರು ಎಂಬ ಜಿಜ್ಞಾಸೆಗೆ ಕಾರಣ ಆಗಿದ್ದು ಅವರು ಮರಣ ಕೂಡ 1606 ಎಂದು ಇತಿಹಾಸದ ಬರವಣಿಗೆಯಲ್ಲಿ ತಪ್ಪಾಗಿ ಅನೇಕರು ಬರೆಯುತ್ತಿದ್ದರಿಂದ ಇದರಿಂದ ರಾಣಿ ಚೆನ್ನ ಬೈರಾದೇವಿ ಹೆಚ್ಚು ದಿನ ಇಕ್ಕೇರಿ ಕೋಟೆಯಲ್ಲಿ ಬಂದನದಲ್ಲಿರಲಿಲ್ಲ ಎನ್ನುವಂತಾಗಿತ್ತು.    ಆದರೆ ಇದು ತಪ್ಪು ಮಾಹಿತಿ ಆಗಿದೆ, ರಾಣಿ ಅವರು ಸುಮಾರು ಎರೆಡು ವರ್ಷ ಕಾಲ ಇಕ್ಕೇರಿಯಲ್ಲಿ ಸೆರೆವಾಸದಲ್ಲಿ ಇರುತ್ತಾರೆ ಅದಕ್ಕೆ ಇಲ್ಲಿರುವ ದಾಖಲೆ ನೋಡಿ.   ಬಂದನದಲ್ಲಿ ಅವರಿಗೆ ಯಾರೊಂದಿಗೂ ಬೇಟಿಗೆ ಅವಕಾಶ ಇರಲಿಲ್ಲ ಆದರೆ ಅವರಿಗೆ ಆ ಸಮಯದಲ್ಲಿ ಜೈನ ಮುನಿಗಳು ಹಾಗೂ ಗುರುಗಳ ದರ್ಶನ ಪಡೆದು ಸಲ್ಲೇಖನ ವ್ರತ ಕೈಗೊಳ್ಳಲು ಅವಕಾಶ ರಾಜ ವೆಂಕಟಪ್ಪ ನಾಯಕರು ನೀಡುತ್ತಾರೆ.   ​ ​ಕೆಳದಿಯ ವೆಂಕಟಪ್ಪ ನಾಯಕರು ವೀರಶೈವ ಧರ್ಮೀಯರಾಗಿದ್ದರೂ ಜೈನ ಧರ್ಮ ಮತ್ತು ಮುನಿಗಳಿಗೆ ಅತ್ಯಂತ ಗೌರವ ನೀಡುತ್ತಿದ್ದರು.  ರಾಣಿ ಚೆನ್...

4156.ಕಲಬೆರಕೆ_ಪ್ರಪಂಚಹಳ್ಳಿಗಳಲ್ಲಿ_ಯುವಕರು_ಹಾರ್ಟ್_ಅಟ್ಯಾಕ್_ಕಿಡ್ನಿ_ಪೈಲೂರ್_ಗೆ_ಕಾರಣವಾಗಿರುವಡ್ರಗ್_ಮಿಶ್ರಿತ_ಗಾಂಜ_ಕಳಪೆ_ಮಧ್ಯ_ಕಳಪೆ_ಚಹಾಪುಡಿ.

ಕಲಬೆರಕೆ_ಪ್ರಪಂಚ ಹಳ್ಳಿಗಳಲ್ಲಿ_ಯುವಕರು_ಹಾರ್ಟ್_ಅಟ್ಯಾಕ್_ಕಿಡ್ನಿ_ಪೈಲೂರ್_ಗೆ_ಕಾರಣವಾಗಿರುವ ಡ್ರಗ್_ಮಿಶ್ರಿತ_ಗಾಂಜ_ಕಳಪೆ_ಮಧ್ಯ_ಕಳಪೆ_ಚಹಾಪುಡಿ.   ನಿಮ್ಮ ಸುತ್ತ ಮುತ್ತಲಿನಲ್ಲಿ ಇಂತಹ ದುರಂತಗಳು ನಡೆದಿರಬಹುದು ಇದಕ್ಕೆಲ್ಲ ಕಾರಣ ಏನು ಎಂದು ಯೋಚಿಸಿದ್ದೀರಾ? ....   ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಯೇ ಇರದ ಯುವಕರು ದಿಡೀರ್ ಹಾರ್ಟ್ ಅಟ್ಯಾಕ್ ನಿಂದ ಮರಣ ಹೊಂದುವುದು, ಮಧ್ಯಪಾನ ಮಾಡದವರಿಗೂ ಕಿಡ್ನಿ ಪೈಲ್ಯೂರ್ ಆಗಿ ಡಯಾಲಿಸಿಸ್ ಮಾಡುವುದು ಹೆಚ್ಚಾಗುತ್ತಿದೆ.   ಇದಕ್ಕೆಲ್ಲ ಕಾರಣ ಮಾದಕ ದ್ರವ್ಯ ಮಿಶ್ರ ಮಾಡಿದ ಗಾಂಜಾ, ಕಳಪೆ ಚಹಾ ಪುಡಿಯಿಂದ ತಯಾರಿಸುವ ಟೀಯಿಂದ ಮತ್ತು ನಕಲಿ ಕಳಪೆ ಮಧ್ಯಗಳು ಕಾರಣ ಆಗುತ್ತಿದೆ.   ಇಂತಹ ವ್ಯಸನಗಳಿoದ ತಕ್ಷಣ ಹೊರ ಬರದಿದ್ದರೆ ಅಪಾಯ ಕೂಡ ಹೆಚ್ಚು, ಮೊದಲೆಲ್ಲ ಹಳ್ಳಿಗಳಲ್ಲಿ ನೈಜಗಾಂಜಾ ಸೇವಿಸಿದವರು ಭಯಪಡುವ ಕಲ್ಪನಾ ಲೋಕಕ್ಕೆ ಹೋಗುತ್ತಿದ್ದರು ಆದರೆ ಈಗ ಅದೇ ಗಾಂಜಾಕ್ಕೆ ಏನೇನೆಲ್ಲಾ ಕಲಬೆರಕೆ ಮಾಡುತ್ತಾರೆ ನೋಡಿ...ಅದರಿಂದ ಹೃದಯವೇ ಅಲ್ಲೋಲ ಕಲ್ಲೋಲವಾಗಿ ಜೀವವೇ ಕಳೆದು ಕೊಳ್ಳುತ್ತಾರೆ.    ಕಲಬೆರಕೆ ಗಾಂಜಾ ಸೇವನೆಯಿಂದ ಹೃದಯ ಸ್ತಂಭನ (Cardiac Arrest) ಮತ್ತು ಹೃದಯಾಘಾತ (Heart Attack) ಸಂಭವಿಸುವ ಸಾಧ್ಯತೆ ಅತ್ಯಂತ ಹೆಚ್ಚು.   ​ಸಾಮಾನ್ಯ ಗಾಂಜಾವೇ ಹೃದಯದ ಬಡಿತವನ್ನು (Heart Rate) ತೀವ್ರವಾಗಿ ಹೆಚ್ಚಿಸುತ್ತದೆ ಇನ್ನು ಅದರ...

4155.ಸರ್_ಹರ್ಬರ್ಟ್_ಹೋಪ್_ರಿಸ್ಲೆ Sir_Herbert_Hope_Risley, (1851–1911)ಭಾರತೀಯ_ಜನಗಣತಿ_1901

ಸರ್_ಹರ್ಬರ್ಟ್_ಹೋಪ್_ರಿಸ್ಲೆ  Sir_Herbert_Hope_Risley, (1851–1911) ಭಾರತೀಯ_ಜನಗಣತಿ_1901    ಜಾತಿಗಳನ್ನು ವರ್ಗೀಕರಿಸಲು ಇವರು ದೈಹಿಕ ಮಾನದಂಡಗಳನ್ನು ವಿಶೇಷವಾಗಿ #ಮೂಗಿನ_ಅಳತೆ  ಮತ್ತು ತಲೆಬುರುಡೆಯ ಆಕಾರ ಬಳಸಿದರು.  ಆರ್ಯ ಮತ್ತು ದ್ರಾವಿಡ ಜನಾಂಗಗಳ ಮಿಶ್ರಣವೇ ಜಾತಿ ವ್ಯವಸ್ಥೆಯ ಆಧಾರ ಎಂದು ವಾದಿಸಿದರು.   ಇದು ಆಕ್ಷೇಪಣೆಗೆ ಕಾರಣ ಆಗಿತ್ತು ಈಗಿನ ಆಧುನಿಕ ವಿಜ್ಞಾನ ಇದನ್ನು ತಪ್ಪು ಎಂದು ಇವರ ವಾದ ನಿರಾಕರಿಸಿದೆ ಇದೊಂದು ವಿಚಿತ್ರವಾದ ಜನಗಣತಿ ನಮ್ಮ ದೇಶದಲ್ಲಿ ಬ್ರಿಟೀಷ್ ಸರ್ಕಾರ ನಡೆಸಿತ್ತು ಈಗ ಯೋಚಿಸಿದರೆ ಹೀಗೂ ಉಂಟಾ ... ಅನ್ನಿಸದೇ ಇರಲಾರದು.    ಭಾರತೀಯರೆಲ್ಲ ಸರ್ ಹರ್ಬರ್ಟ್ ಹೋಪ್ ರಿಸ್ಲೆ ಅವರ 1901ರ ಜನಗಣತಿ ಬಗ್ಗೆ ತಿಳಿಯಲೇ ಬೇಕು ಅವರು ಈ ಜನಗಣತಿಯಲ್ಲಿ ಜಾತಿಗಳ ಸಾಮಾಜಿಕ ಶ್ರೇಣೀಕರಣವನ್ನು ಅಧಿಕೃತವಾಗಿ ದಾಖಲಿಸುವ ಪ್ರಕ್ರಿಯೆಯನ್ನು ಜಾರಿಗೆ ತಂದರು.    ಇದು ಅನೇಕ ವಿರೋದಕ್ಕೆ ಕಾರಣವಾಯಿತು ಆಧುನಿಕ ತಳಿಶಾಸ್ತ್ರ ವಿಜ್ಞಾನ ಇವರ ವಾದ ತಿರಸ್ಕರಿಸಿದೆ.     ಇವರು ಬ್ರಿಟಿಷ್ ಆಡಳಿತಾವಧಿಯ ಪ್ರಮುಖ ಮಾನವಶಾಸ್ತ್ರಜ್ಞ ಮತ್ತು ಭಾರತೀಯ ನಾಗರಿಕ ಸೇವೆ  ಅಧಿಕಾರಿಯಾಗಿದ್ದರು.   ಭಾರತದಲ್ಲಿ ಜಾತಿ ವ್ಯವಸ್ಥೆ ಮತ್ತು ಜನಾಂಗೀಯ ವರ್ಗೀಕರಣವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಪ್ರಯತ್ನಿಸಿದವರಲ್ಲಿ ಇವರು ಪ್ರಮುಖರು...

4154.ಕಸ್ತೂರಿ_ರಂಗನ್_ವರದಿಯನ್ನೇವಿರೋದಿಸಬೇಕಾ? ...ಮಾರ್ಪಾಡಿಗೆ_ಒತ್ತಾಯಿಸಬೇಕಾ? ...

ಕಸ್ತೂರಿ_ರಂಗನ್_ವರದಿಯನ್ನೇ ವಿರೋದಿಸಬೇಕಾ? ... ಮಾರ್ಪಾಡಿಗೆ_ಒತ್ತಾಯಿಸಬೇಕಾ? ...   ತಮ್ಮ ಹಕ್ಕುಗಳಿಗೆ ಹೋರಾಟ ಪ್ರಾರಂಭವಾಗಿದೆ ಎಲ್ಲಾ ಕಡೆ ಕಸ್ತೂರಿ ರಂಗನ್ ವರದಿ ಬಗ್ಗೆಯೇ ಚರ್ಚೆ ಪ್ರಾರಂಭವಾಗಿದೆ.    ಪಶ್ಚಿಮ ಘಟ್ಟಗಳ ಸಂರಕ್ಷಣೆ ಆಗಬೇಕು ಜೊತೆಗೆ ಇಲ್ಲಿನ ನಿವಾಸಿಗಳ ಬದುಕು ಉಳಿಯ ಬೇಕಾದರೆ ಕಸ್ತೂರಿ ರಂಗನ್ ವರದಿ ಸಂಪೂರ್ಣ ವಿರೋದಿಸ ಬೇಕಾ? ಅಥವ ಕಸ್ತೂರಿ ರಂಗನ್ ವರದಿ ಮಾರ್ಪಾಡಿಗೆ ಒತ್ತಾಯಿಸ ಬೇಕಾ?....  ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯದ (ESA) ವ್ಯಾಪ್ತಿಗೆ ಬರುವ ಜನರು ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ವಿರೋಧಿಸುವುದಕ್ಕಿಂತ ವೈಜ್ಞಾನಿಕ ಮರುಪರಿಶೀಲನೆ ಮತ್ತು ಸೂಕ್ತ ಮಾರ್ಪಾಡುಗಳಿಗೆ ಒತ್ತಾಯಿಸುವುದು ಹೆಚ್ಚು ಪ್ರಾಯೋಗಿಕ ಹಾಗೂ ದೀರ್ಘಾವಧಿಯ ಪರಿಹಾರ ನೀಡುವ ಹಾದಿಯಾಗಿದೆ.  ​ಕೇವಲ ವಿರೋಧ ವ್ಯಕ್ತಪಡಿಸುವುದು ಅಥವಾ ಮಾರ್ಪಾಡಿಗೆ ಆಗ್ರಹಿಸುವುದರ ನಡುವಿನ ಪ್ರಮುಖ ವ್ಯತ್ಯಾಸಗಳು ಇಲ್ಲಿವೆ.  ​ಸಂಪೂರ್ಣ ವಿರೋಧದಿಂದಾಗುವ ಮಿತಿಗಳು ​ಕಾನೂನು ಅನಿಶ್ಚಿತತೆಗಳ ಬಗ್ಗೆ ತಿಳಿಯೋಣ, ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (NGT) ಪರಿಸರ ಸಂರಕ್ಷಣೆಗೆ ನಿರಂತರವಾಗಿ ಕಟ್ಟುನಿಟ್ಟಿನ ಆದೇಶಗಳನ್ನು ನೀಡುತ್ತಿವೆ.  ಸಂಪೂರ್ಣ ವಿರೋಧದಿಂದಾಗಿ ಸ್ಥಳೀಯರ ಮಾತುಕತೆಯ ಬಾಗಿಲು ಮುಚ್ಚಿ ಅಂತಿಮವಾಗಿ ನ್ಯಾಯಾಲಯದ ಮೂಲಕ ಕಠಿಣ ನಿಯಮಗಳು ಏಕಪಕ್ಷೀಯವಾಗಿ ...

4153.ಜೋಗ್_ಪಾಲ್ಸ್_ನಲ್ಲಿದೆರಾಜಾ_ಕಲ್ಲುಮಡಿಕೇರಿ_ರಾಜಾಸೀಟ್_ನಂತೆ

ಜೋಗ್_ಪಾಲ್ಸ್_ನಲ್ಲಿದೆ ರಾಜಾ_ಕಲ್ಲು ಮಡಿಕೇರಿ_ರಾಜಾಸೀಟ್_ನಂತೆ     ಜೋಗ್ ಫಾಲ್ಸ್ ನ ರಾಜಾ ಕಲ್ಲು ಮತ್ತು ಮಡಿಕೆರೆಯ ರಾಜಾ ಸೀಟ್ ಗೆ ರಾಜರುಗಳ ನಂಟಿದೆ,ಸಾಮ್ಯತೆ ಇದೆ.   ನೀವು ಜೋಗ್ ಫಾಲ್ಸ್ ಗೆ ಹೋದಾಗ ರಾಜಾ ಕಲ್ಲು ಪ್ರದೇಶಕ್ಕೆ ಬೇಟಿ ನೀಡಿದ್ದಿರಾ? ನಿಮಗೆ ಈ ಸ್ಥಳದ ಬಗ್ಗೆ ಮಾಹಿತಿ ಗೊತ್ತಿತ್ತಾ? ...   ಆದರೆ ಜೋಗ್ ಫಾಲ್ಸ್ ಅಬ್ಬರದಲ್ಲಿ ಇದು ಪ್ರವಾಸಿಗರಿಗೆ ಗೊತ್ತೇ ಇಲ್ಲ.    ರಾಜಾಸೀಟ್  ಕೊಡಗು  ಜಿಲ್ಲೆಯ ಮಡಿಕೇರಿಯಲ್ಲಿರುವ ಅತ್ಯಂತ ಪ್ರಸಿದ್ಧ ಹಾಗೂ ಸುಂದರ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ​ ಕೊಡಗನ್ನು ಆಳಿದ ಕೆಳದಿ ವಂಶಸ್ಥರಾದ #ಹಾಲೇರಿ_ರಾಜರು ತಮ್ಮ ರಾಣಿಯರೊಂದಿಗೆ ಸಂಜೆಯ ವೇಳೆ ವಿಶ್ರಾಂತಿ ಪಡೆಯಲು ಹಾಗೂ ಸೂರ್ಯಾಸ್ತದ ಸುಂದರ ನೋಟವನ್ನು ಕಣ್ತುಂಬಿಕೊಳ್ಳಲು ಅಲ್ಲಿಗೆ ಬರುತ್ತಿದ್ದರು.    ಆದ್ದರಿಂದ ಅದಕ್ಕೆ ‘ರಾಜಾಸೀಟ್’ (ರಾಜನ ಆಸನ) ಎಂಬ ಹೆಸರು ಬಂದಿದೆ.    ಇದೇ ರೀತಿ ಇತಿಹಾಸ ಇರುವ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ​ಜೋಗ ಜಲಪಾತದ ಸಮೀಪವಿರುವ #ರಾಜಾ'ಕಲ್ಲು ಒಂದು ಸುಂದರ ಹಾಗೂ ಐತಿಹಾಸಿಕ ವೀಕ್ಷಣಾ ತಾಣವಾಗಿದೆ.  ​ಈ ಸ್ಥಳವು ಮೈಸೂರಿನ ಮಹಾರಾಜರಾದ #ನಾಲ್ವಡಿ_ಕೃಷ್ಣರಾಜ_ಒಡೆಯರ್ ಅವರ ನೆಚ್ಚಿನ ವೀಕ್ಷಣಾ ತಾಣವಾಗಿತ್ತು.   1939 ರಲ್ಲಿ ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶರಾವತಿ ಕಣಿವೆಯ...

4152.ಶಿವಮೊಗ್ಗ_ಮ್ಯಾಮ್_ಕೋಸ್_ಚರಿತ್ರೆMAMCOS.

ಶಿವಮೊಗ್ಗ_ಮ್ಯಾಮ್_ಕೋಸ್_ಚರಿತ್ರೆ MAMCOS.    ಶಿವಮೊಗ್ಗ ಜಿಲ್ಲೆಯ #ತೀರ್ಥಹಳ್ಳಿಯ ಆ ಕಾಲದ 1930ರ ದಶಕದ ಪ್ರಮುಖ ನಾಯಕರು ಮತ್ತು ವಿದ್ಯಾಭ್ಯಾಸ ಹೊಂದಿದ್ದ ತೀರ್ಥಹಳ್ಳಿ ಅಡಿಕೆ ಕೃಷಿಕರು ಸಹಕಾರ ತತ್ವದ ಅಗತ್ಯವನ್ನು ಮೊದಲು ಮನಗಂಡು ಪ್ರಾರಂಬಿಸಿದ ಈ ಸಂಸ್ಥೆ 87 ವರ್ಷದಲ್ಲಿ ಬೆಳೆದ ಪರಿ ಸಾಮಾನ್ಯದ್ದಲ್ಲ.  #ಪ್ರಾರಂಭ_ಕೇವಲ_ನಾಲ್ಕು_ಸಾವಿರ_ರೂಪಾಯಿಯಿಂದ ಇಂದು ಮ್ಯಾಮ್‌ಕೋಸ್ 30,000ಕ್ಕೂ ಹೆಚ್ಚು ಸದಸ್ಯ ರೈತರನ್ನು ಹೊಂದಿದ್ದು, ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಸುವ ಬಲಿಷ್ಠ ಸಹಕಾರಿ ಸಂಸ್ಥೆಯಾಗಿ ಬೆಳೆದುನಿಂತಿದೆ.   ಮಲೆನಾಡು ಅರೇಕಾ ಮಾರ್ಕೆಟಿಂಗ್ ಕೋ ಆಪರೇಟೀವ್ ಸೊಸೈಟಿ ಲಿಮಿಟೆಡ್ ಈಗ ದೊಡ್ಡ ಕಾರ್ಪೊರೇಟ್ ಕಂಪನಿ ಆಗಿದೆ ಶತಮಾನದ ಹೊಸ್ತಿಲಲ್ಲಿದೆ, ಇದರ ಪ್ರಾರಂಭದ ಇತಿಹಾಸ ಇಲ್ಲಿದೆ ಓದಿ.   ನೀವು ಅಡಿಕೆ ಬೆಳೆಗಾರರಾಗಿದ್ದರೆ, ಈ ಸಂಸ್ಥೆಯ ಶೇರುದಾರರಾಗಿದ್ದರೆ ಇದನ್ನು ಹೆಚ್ಚು ಶೇರ್ ಮಾಡಿ.   1930ರ ದಶಕದಲ್ಲಿ #ಮಲೆನಾಡು ಭಾಗದ ಅಡಿಕೆ ಬೆಳೆಗಾರರು ಎದುರಿಸುತ್ತಿದ್ದ ತೀವ್ರ ಶೋಷಣೆ ಮತ್ತು ಆರ್ಥಿಕ ಸಂಕಷ್ಟವೇ ಮ್ಯಾಮ್‌ಕೋಸ್ (MAMCOS) ಸ್ಥಾಪನೆಗೆ ಮುಖ್ಯ ಕಾರಣ.    ಅಂದಿನ ಕಾಲದಲ್ಲಿ ಅಡಿಕೆ ವ್ಯಾಪಾರ ಸಂಪೂರ್ಣವಾಗಿ ಖಾಸಗಿ ವರ್ತಕರು ಮತ್ತು ದಲ್ಲಾಳಿಗಳ ಹಿಡಿತದಲ್ಲಿತ್ತು.   ಅವರು ತೂಕದಲ್ಲಿ ಮೋಸ ಮಾಡುವುದು, ಅಡಿಕೆಗೆ ಅತಿ ಕಡಿಮೆ ಬೆಲೆ ನೀಡುವುದು ಮತ...

4151.ಗಾಯತ್ರಿ_ಮಂತ್ರಮಹರ್ಷಿ_ವಿಶ್ವಾಮಿತ್ರರುಭಾಗ_2.

ಗಾಯತ್ರಿ_ಮಂತ್ರ ಮಹರ್ಷಿ_ವಿಶ್ವಾಮಿತ್ರರು ಭಾಗ_2.  ಗಾಯತ್ರಿ ಮಂತ್ರ ಋಗ್ವೇದದ ಅತ್ಯಂತ ಪ್ರಸಿದ್ಧ ಹಾಗೂ ಪ್ರಮುಖವಾದ ಮಂತ್ರ.   ಇದು ಸೂರ್ಯದೇವನ  ಜ್ಞಾನಶಕ್ತಿಯನ್ನು ಆರಾಧಿಸುವ ಪ್ರಾರ್ಥನೆಯಾಗಿದೆ.  ನಿಮಗೆ ಗಾಯಿತ್ರಿ ಮಂತ್ರದ ಬಗ್ಗೆ ಆಸಕ್ತಿ ಇದ್ದರೆ ಈ ಲೇಖನ ಪೂರ್ಣ ಓದಿ ನಿಮ್ಮ ಆತ್ಮೀಯರಿಗೆ ಗಾಯಿತ್ರಿ ಮಂತ್ರದ ಈ ಪೋಸ್ಟ್ ಶೇರ್ ಮಾಡಿ.  ಬ್ರಹ್ಮರ್ಷಿ ವಿಶ್ವಾಮಿತ್ರರು ಪ್ರಾಚೀನ ಭಾರತೀಯ ಇತಿಹಾಸ ಮತ್ತು ಪುರಾಣಗಳಲ್ಲಿ ಅತ್ಯಂತ ಪ್ರಭಾವಶಾಲಿ ಋಷಿಗಳಲ್ಲಿ ಒಬ್ಬರು.     ಹುಟ್ಟಿನಿಂದ ರಾಜನಾಗಿದ್ದರೂ ಕಠಿಣ ತಪಸ್ಸಿನ ಮೂಲಕ ಬ್ರಹ್ಮರ್ಷಿ ಪದವಿ ಪಡೆದ ಅಸಾಧಾರಣ ವ್ಯಕ್ತಿತ್ವ ಇವರದು.   ​ಮೂಲ ಹೆಸರು ಕೌಶಿಕ (ಕುಶಿಕ ವಂಶದ ರಾಜ) ಕನ್ಯಾಕುಬ್ಜದ ಇಂದಿನ ಕನೌಜ್ ಪ್ರಬಲ ಅರಸನಾಗಿದ್ದ ವಿಶ್ವಾಮಿತ್ರರು, ವಸಿಷ್ಠ ಮಹರ್ಷಿಗಳ ಬಳಿಯಿದ್ದ ಕಾಮಧೇನುವನ್ನು ಪಡೆಯಲು ಹೋಗಿ ಪರಾಭವಗೊಂಡರು. ​  ರಾಜಬಲಕ್ಕಿಂತ (ಕ್ಷಾತ್ರ ತೇಜಸ್ಸು) ಆತ್ಮಬಲ ಮತ್ತು ತಪೋಬಲವೇ (ಬ್ರಹ್ಮ ತೇಜಸ್ಸು) ಶ್ರೇಷ್ಠವೆಂದು ಅರಿತು, ರಾಜ್ಯ ತೊರೆದು ಕಠಿಣ ತಪಸ್ಸಿಗೆ ತೆರಳಿದರು.   ಋಗ್ವೇದದ ಅತ್ಯಂತ ಪವಿತ್ರವಾದ 'ಗಾಯತ್ರಿ ಮಂತ್ರ'  ವಿಶ್ವಾಮಿತ್ರರಿಗೆ ತಪಸ್ಸಿನಲ್ಲಿ ದರ್ಶನವಾಯಿತು. ​ ಸಶರೀರವಾಗಿ ಸ್ವರ್ಗಕ್ಕೆ ಹೋಗಬಯಸಿದ ತ್ರಿಶಂಕು ರಾಜನಿಗೆ ಇಂದ್ರ ಪ್ರವೇಶ ನಿರಾಕರಿಸಿದಾಗ ತನ್ನ ತಪೋಶಕ್...

4150.ಈಶಾ_ಸಂಸ್ಥೆಯ_80_ಚಾರಣಿಗರು_ಎಲ್ಲಿ?..ಸದ್ಗುರು_ಜಗ್ಗಿ_ವಾಸುದೇವರ_ಸೃಷ್ಟಿಕರಣ...ನೇಪಾಳದ_ಪ್ಲಾಶ್_ಪ್ಲಡ್_ಕಾರಣ ...

ಈಶಾ_ಸಂಸ್ಥೆಯ_80_ಚಾರಣಿಗರು_ಎಲ್ಲಿ?.. ಸದ್ಗುರು_ಜಗ್ಗಿ_ವಾಸುದೇವರ_ಸೃಷ್ಟಿಕರಣ... ನೇಪಾಳದ_ಪ್ಲಾಶ್_ಪ್ಲಡ್_ಕಾರಣ ...   ಎಲ್ಲಾ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿರುವ ದುರಂತದ ದೃಶ್ಯಗಳು ಎಂತವರನ್ನು ಅಧೀರನಾಗಿಸುತ್ತದೆ.    ಈ ಮಾಹಿತಿ ಪೂರ್ಣ ಲೇಖನ ಪೂರ್ತಿ ಓದಿ ನಿಮ್ಮ ಆಪ್ತರಿಗೆ ಶೇರ್ ಮಾಡಲು ವಿನಂತಿ.    26 ಆಗಸ್ಟ್ 2026 ರಂದು ಟಿಬೆಟ್–ನೇಪಾಳ ಗಡಿ ಭಾಗದಲ್ಲಿ ಭೋಟೆ ಕೋಶಿ ನದಿ  ಪಾತ್ರದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದಲ್ಲಿ #ಈಶಾ_ಫೌಂಡೇಶನ್‌ನ 80 ಯಾತ್ರಿಕರ ತಂಡ ನಾಪತ್ತೆ ಆಗಿದೆ.    ಸದ್ಗುರು ಅವರ ಈಶಾ ಫೌಂಡೇಶನ್ ವತಿಯಿಂದ ಪ್ರತಿವರ್ಷ ಆಯೋಜಿಸುವ 'ಈಶಾ ಸೇಕ್ರೆಡ್ ವಾಕ್ಸ್' ಅಡಿಯಲ್ಲಿ ಯಾತ್ರಿಕರು ಕೈಲಾಶ ಮಾನಸ ಸರೋವರ ಯಾತ್ರೆಗೆ ತೆರಳಿದ್ದರು.     ಈಶಾ ಫೌಂಡೇಶನ್ ಆಯೋಜಿಸುವ '#ಈಶಾ_ಸೇಕ್ರೆಡ್_ವಾಕ್ಸ್'  ಕೈಲಾಶ ಮಾನಸ ಸರೋವರ ಯಾತ್ರೆಯ ಶುಲ್ಕವು ​ಸಾಮಾನ್ಯ (ಭೂಮಾರ್ಗ) ಪ್ಯಾಕೇಜ್ ತಲಾ ಸುಮಾರು ₹3.5 ಲಕ್ಷದಿಂದ ₹4.5 ಲಕ್ಷ ಭಾರತೀಯ ನಾಗರಿಕರಿಗೆ. ​ಹೆಲಿಕಾಪ್ಟರ್ ಮಾರ್ಗ / ಪ್ರೀಮಿಯಂ ಪ್ಯಾಕೇಜ್ ತಲಾ ಸುಮಾರು ₹5 ಲಕ್ಷದಿಂದ ₹6.5 ಲಕ್ಷ.   ​ವಿದೇಶಿ ಪೌರತ್ವ ಹೊಂದಿದವರಿಗೆ (NRI / Foreigners) ಸುಮಾರು $5,000 ದಿಂದ $6,500 ಡಾಲರ್,ಭಾರತೀಯ ರೂಪಾಯಿಗಳಲ್ಲಿ ಸುಮಾರು ₹4.2 ಲಕ್ಷದಿಂದ ₹5.5 ಲಕ್ಷಕ್ಕೂ ಹೆಚ್ಚು.  ​...

4149.ಗಾಯತ್ರಿ_ಮಂತ್ರಭಾಗ_1.

ಗಾಯತ್ರಿ_ಮಂತ್ರ ಭಾಗ_1.   ಮಹರ್ಷಿ ವಿಶ್ವಾಮಿತ್ರರಿಂದ ಬಂದ ಗಾಯಿತ್ರಿ ಮಂತ್ರದ ಅರ್ಥ ಮತ್ತು ಮೂಲ ಗೊತ್ತಾ? ... ಇದನ್ನು ಗಂಡು- ಹೆಣ್ಣು-ತೃತೀಯ ಲಿಂಗಿ- ಶೂದ್ರ ಮತ್ತು ದಲಿತರೂ ಪಠಿಸಬಹುದು, ಉಪನಯನವಾದವರು,ಜನಿವಾರ ಧರಿಸುವವರು ಮಾತ್ರ ನಿತ್ಯ ತಪ್ಪದೆ ಪಠಣ ಮಾಡಲೇ ಬೇಕು.  ಅನೇಕರು ಗಾಯಿತ್ರಿ ಮಂತ್ರ ನಿತ್ಯ ಪಠಿಸುತ್ತಾರೆ ಆದರೆ ಅದರ ಅರ್ಥ,ಅದನ್ನು ರಚಿಸಿದ ಕಾಲ ಮತ್ತು ರಚನೆಕಾರರ ಬಗ್ಗೆ ಸೂಕ್ತ ಮಾಹಿತಿ ಪಡೆದಿರುವವರು ಕಡಿಮೆ ಅಂತವರಿಗಾಗಿ ಈ ಗಾಯಿತ್ರಿ ಮಂತ್ರದ ಸರಣಿ ಲೇಖನದ ಮೊದಲ ಭಾಗ ಇದು.   ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಆಪ್ತರಿಗೆ ಶೇರ್ ಮಾಡಲು ವಿನಂತಿ. ಗಾಯತ್ರಿ ಮಂತ್ರ ಋಗ್ವೇದದ ಅತ್ಯಂತ ಪ್ರಸಿದ್ಧ ಹಾಗೂ ಪ್ರಮುಖವಾದ ಮಂತ್ರ.   ಇದು ಸೂರ್ಯದೇವನ  ಜ್ಞಾನಶಕ್ತಿಯನ್ನು ಆರಾಧಿಸುವ ಪ್ರಾರ್ಥನೆಯಾಗಿದೆ. #ಗಾಯಿತ್ರಿ_ಮಂತ್ರ. ​ಓಂ ಭೂರ್ಭುವಸ್ಸುವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ ॥ #ಪ್ರತಿಯೊಂದು_ಪದದ_ಅರ್ಥ: ​ಓಂ: ಪರಬ್ರಹ್ಮ ಪರಮಾತ್ಮನ ಪ್ರಣವ ನಾದ ​ಭೂಃ: ಭೂಲೋಕ (ಭೌತಿಕ ಜಗತ್ತು) ​ಭುವಃ: ಭುವರ್ಲೋಕ (ಅಂತರಿಕ್ಷ) ​ಸುವಃ (ಸ್ವಃ): ಸ್ವರ್ಗಲೋಕ (ಆಧ್ಯಾತ್ಮಿಕ ಲೋಕ) ​ತತ್: ಆ ಪರಮಾತ್ಮನ ​ಸವಿತುಃ: ಸೂರ್ಯದೇವನ / ಸೃಷ್ಟಿಕರ್ತನ ​ವರೇಣ್ಯಂ: ಶ್ರೇಷ್ಠವಾದ / ಪೂಜ್ಯವಾದ ​ಭರ್ಗಃ: ದಿವ್ಯ ತೇಜಸ್ಸು / ಜ್ಞಾನದ ಪ್ರಕಾಶ ​ದೇವಸ್ಯ: ದೈವಿಕ ಶ...

4148.ಮಿಲೇನಿಯಲ್ಸ್_Millennials ಜೆನ್_ಎಕ್ಸ್_Gen_X

ಮಿಲೇನಿಯಲ್ಸ್_Millennials  ಜೆನ್_ಎಕ್ಸ್_Gen_X   ನನ್ನ ಹಿಂದಿನ ಲೇಖನ ಜೆನ್-ಜಿ ಓದಿದ್ದೀರಿ ಈಗ ಇವರಿಗಿಂತ ಹಿಂದಿನ ಎರೆಡು ತಲೆಮಾರುಗಳಾದ ಮಿಲೇನಿಯಲ್ಸ್ ಮತ್ತು ಜೆನ್-ಎಕ್ಸ್ ಬಗ್ಗೆ ಓದಿ ಇದು 1965 ರಿಂದ ನಂತರದ 1996 ರ ಅವಧಿಯಲ್ಲಿ ಜನಿಸಿದ ಜನರ ಎರೆಡು ತಲೆಮಾರು.   ಈ ಲೇಖನ ನಿಮಗೆ ಇಷ್ಟ ಆದರೆ ನಿಮ್ಮ ಸಮಕಾಲಿನವರಿಗೆ ಶೇರ್ ಮಾಡಿ ಅವರಿಗೆ ಈ ಮಾಹಿತಿ ಹಂಚಿ.   #ಮಿಲೇನಿಯಲ್ಸ್ ಎಂದರೆ ಸಾಮಾನ್ಯವಾಗಿ 1981 ರಿಂದ 1996ರ ಅವಧಿಯಲ್ಲಿ ಜನಿಸಿದ ಜನರ ತಲೆಮಾರು.     ಈಗಿನ 30 ರಿಂದ 47 ವರ್ಷದ ಒಳಗಿನ ವಯೋಮಾನದವರು ಈ ಗುಂಪಿನಲ್ಲಿ ಬರುತ್ತಾರೆ.   ಇವರು #ಜೆನ್_ಎಕ್ಸ್' (Gen X) ನಂತರ ಮತ್ತು '#ಜೆನ್_ಜಿ' (Gen Z) ಗಿಂತ ಮುಂಚಿನ ತಲೆಮಾರಿನವರಾಗಿದ್ದಾರೆ.   ಇವರ ​ಮುಖ್ಯ ಲಕ್ಷಣಗಳು ಮತ್ತು ಹಿನ್ನೆಲೆ,​ಡಿಜಿಟಲ್ ಬದಲಾವಣೆಯ ಸಾಕ್ಷಿ ಕಾಲದವರು ಈ ತಲೆಮಾರಿನವರು.   ಇಂಟರ್ನೆಟ್ ಇಲ್ಲದ ಅನಲಾಗ್ ಜಗತ್ತನ್ನು ಲ್ಯಾಂಡ್‌ಲೈನ್, ರೇಡಿಯೋ, ಟಿವಿ ಮತ್ತು ಡಿಜಿಟಲ್ ಕ್ರಾಂತಿಯ ಆರಂಭವನ್ನು (ಡಯಲ್-ಅಪ್ ಇಂಟರ್ನೆಟ್, ಕಂಪ್ಯೂಟರ್, ಮೊಬೈಲ್ ಫೋನ್, Facebook/Orkut) ಕಣ್ಣಾರೆ ಕಂಡ ಏಕೈಕ ತಲೆಮಾರು.      ​ ಇವರು ಆರ್ಥಿಕ ಸವಾಲುಗಳನ್ನ, 2008ರ ಜಾಗತಿಕ ಆರ್ಥಿಕ ಹಿಂಜರಿತ (Great Recession) ಮತ್ತು ಕೋವಿಡ್ ಬಿಕ್ಕಟ್ಟನ್ನು ವೃತ್ತಿಜೀವನದ ಆರಂಭ ಅಥವಾ ಬ...