ಕೊರಾನಾ ಲಾಕ್ ಡೌನ್ ಡೈರಿ 24,ಕೊರಾನಾ ವೈರಸ್ ಪತ್ರಿಕೆಗಳು, ಟಿವಿ ಚಾನಲ್ ಗಳು ಮತ್ತು ಸಿನಿಮಾಗಳನ್ನ ಅಪೋಷನಕ್ಕೆ ತೆಗೆದುಕೊಳ್ಳದೇ ಬಿಡುವುದಿಲ್ಲ!?
#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_24 #ದಿನಾ೦ಕ_27_ಏಪ್ರಿಲ್_2020 ಕೊರಾನಾ ವೈರಸ್ ಏನೇನಲ್ಲ ಆಪೋಷನ ತೆಗೆದುಕೊಂಡು ಹೋಗುತ್ತದೋ ಗೊತ್ತಿಲ್ಲ ಆದರೆ ಪತ್ರಿಕೆ, ಸಿನೆಮಾ ಮತ್ತು ಟಿವಿ ಚಾನಲ್ ಗಳು ಮಾತ್ರ ಇದಕ್ಕೆ ಬಲಿಯಾಗುವುದಂತು ಸುಳ್ಳಲ್ಲ. ಪತ್ರಿಕೆಗಳು ಬೇಕು ಆದರೆ ಬೆಲೆ ಜಾಸ್ತಿ ಆಗಬಾರದೆಂದರೆ ಪತ್ರಿಕೆಗಳಿಗೆ ಜಾಹಿರಾತು ಬೇಕು, ಉತ್ಪಾದನ ಸಂಸ್ಥೆಗೆ ಹೆಚ್ಚು ವ್ಯಾಪಾರ ಆಗಲು ಜಾಹಿರಾತು ನೀಡುವುದು ಅನಿವಾಯ೯ ಆದರೆ ಈಗ ಎಲ್ಲದೂ ತದ್ವಿರುದ್ಧ ಲಾಕ್ ಡೌನ್ ನಿಂದ ಉತ್ಪಾದನೆ ನಿಲ್ಲಿಸಿದ್ದಾರೆ, ವ್ಯಾಪಾರ ಮಾಡುವ ಮಾಲ್ ಪ್ರಾವಿಜನ್ ಸ್ಟೋರ್ ತೆರೆಯುವಂತಿಲ್ಲ ಆನ್ಲೈನ್ ಮಾರಾಟ ಮಾಡುವ ಕಮಷಿ೯ಯಲ್ ಕೋರಿಯರ್ ಇಲ್ಲ, ದೇಶ ವಿದೇಶದಿಂದ ಕಚ್ಚಾ ವಸ್ತು ಸಾಗಾಣಿಕೆ ಇಲ್ಲ, ತಯಾರಾದ ವಸ್ತು ಖರೀದಿಸುವವರೂ ಇಲ್ಲ ಹಾಗಾಗಿ ಉತ್ಪಾದನಾ ಸಂಸ್ಥೆಗೆ ಜಾಹಿರಾತು ಬೇಡ ಜಾಹಿರಾತು ಇಲ್ಲದೆ ದಿನ ಪತ್ರಿಕೆ ಆದರೂ ಎಷ್ಟು ದಿನ ನಷ್ಟದಲ್ಲಿ ನಡೆಸಲು ಸಾಧ್ಯ? ಪತ್ರಿಕೆ ಮಾರಾಟದ ಸ್ಟಾಲ್ ಗಳು ತೆಗೆಯುವಂತಿಲ್ಲ, ಪತ್ರಿಕೆ ಖರೀದಿಸುವವರೂ ಇಲ್ಲ ಹಾಗಾಗಿ ಸದ್ಯ ಪತ್ರಿಕೆ ನಿಲ್ಲಿಸಿದರೆ ಬಚಾವ್ ಎಂಬ ತೀಮಾ೯ನಕ್ಕೆ ಬಂದವರು ಪತ್ರಿಕೆ ನಿಲ್ಲಿಸಿದ್ದಾರೆ. ಲಕ್ಷಾ೦ತರ ಓದುಗರನ್ನ ಪಡೆದಿದ್ದ ರಾಜ್ಯ ಮಟ್ಟದ ಪತ್ರಿಕೆಗಳು ಪುಟ ಸಂಖ್ಯೆ ಕಡಿಮೆ ಮಾಡಿದೆ, ಸಪ್ಲಿಮೆoಟ್ ಗಳನ್ನ ರದ್ದು ಮಾಡಿದ...