ಕೊರಾನಾ ಲಾಕ್ ಡೌನ್ ಡೈರಿ 24,ಕೊರಾನಾ ವೈರಸ್ ಪತ್ರಿಕೆಗಳು, ಟಿವಿ ಚಾನಲ್ ಗಳು ಮತ್ತು ಸಿನಿಮಾಗಳನ್ನ ಅಪೋಷನಕ್ಕೆ ತೆಗೆದುಕೊಳ್ಳದೇ ಬಿಡುವುದಿಲ್ಲ!?
#ಕೊರಾನಾ_ಲಾಕ್_ಡೌನ್_ಡೈರಿ_2020
#ಲೆಟರ್_ನOಬರ್_24
ಕೊರಾನಾ ವೈರಸ್ ಏನೇನಲ್ಲ ಆಪೋಷನ ತೆಗೆದುಕೊಂಡು ಹೋಗುತ್ತದೋ ಗೊತ್ತಿಲ್ಲ ಆದರೆ ಪತ್ರಿಕೆ, ಸಿನೆಮಾ ಮತ್ತು ಟಿವಿ ಚಾನಲ್ ಗಳು ಮಾತ್ರ ಇದಕ್ಕೆ ಬಲಿಯಾಗುವುದಂತು ಸುಳ್ಳಲ್ಲ.
ಪತ್ರಿಕೆಗಳು ಬೇಕು ಆದರೆ ಬೆಲೆ ಜಾಸ್ತಿ ಆಗಬಾರದೆಂದರೆ ಪತ್ರಿಕೆಗಳಿಗೆ ಜಾಹಿರಾತು ಬೇಕು, ಉತ್ಪಾದನ ಸಂಸ್ಥೆಗೆ ಹೆಚ್ಚು ವ್ಯಾಪಾರ ಆಗಲು ಜಾಹಿರಾತು ನೀಡುವುದು ಅನಿವಾಯ೯ ಆದರೆ ಈಗ ಎಲ್ಲದೂ ತದ್ವಿರುದ್ಧ ಲಾಕ್ ಡೌನ್ ನಿಂದ ಉತ್ಪಾದನೆ ನಿಲ್ಲಿಸಿದ್ದಾರೆ, ವ್ಯಾಪಾರ ಮಾಡುವ ಮಾಲ್ ಪ್ರಾವಿಜನ್ ಸ್ಟೋರ್ ತೆರೆಯುವಂತಿಲ್ಲ ಆನ್ಲೈನ್ ಮಾರಾಟ ಮಾಡುವ ಕಮಷಿ೯ಯಲ್ ಕೋರಿಯರ್ ಇಲ್ಲ, ದೇಶ ವಿದೇಶದಿಂದ ಕಚ್ಚಾ ವಸ್ತು ಸಾಗಾಣಿಕೆ ಇಲ್ಲ, ತಯಾರಾದ ವಸ್ತು ಖರೀದಿಸುವವರೂ ಇಲ್ಲ ಹಾಗಾಗಿ ಉತ್ಪಾದನಾ ಸಂಸ್ಥೆಗೆ ಜಾಹಿರಾತು ಬೇಡ ಜಾಹಿರಾತು ಇಲ್ಲದೆ ದಿನ ಪತ್ರಿಕೆ ಆದರೂ ಎಷ್ಟು ದಿನ ನಷ್ಟದಲ್ಲಿ ನಡೆಸಲು ಸಾಧ್ಯ?
ಪತ್ರಿಕೆ ಮಾರಾಟದ ಸ್ಟಾಲ್ ಗಳು ತೆಗೆಯುವಂತಿಲ್ಲ, ಪತ್ರಿಕೆ ಖರೀದಿಸುವವರೂ ಇಲ್ಲ ಹಾಗಾಗಿ ಸದ್ಯ ಪತ್ರಿಕೆ ನಿಲ್ಲಿಸಿದರೆ ಬಚಾವ್ ಎಂಬ ತೀಮಾ೯ನಕ್ಕೆ ಬಂದವರು ಪತ್ರಿಕೆ ನಿಲ್ಲಿಸಿದ್ದಾರೆ.
ಲಕ್ಷಾ೦ತರ ಓದುಗರನ್ನ ಪಡೆದಿದ್ದ ರಾಜ್ಯ ಮಟ್ಟದ ಪತ್ರಿಕೆಗಳು ಪುಟ ಸಂಖ್ಯೆ ಕಡಿಮೆ ಮಾಡಿದೆ, ಸಪ್ಲಿಮೆoಟ್ ಗಳನ್ನ ರದ್ದು ಮಾಡಿದೆ ಸದ್ಯಕ್ಕೆ ಅಲ್ಲದಿದ್ದರೂ ಸ್ವಲ್ಪ ದಿನದ ನಂತರ ಪತ್ರಿಕೆ ನಿಲ್ಲಲೇ ಬೇಕಾದ ಪರಿಸ್ಥಿತಿ ಬರಲಿದೆ.
ಕೊರಾನಾ ಲಾಕ್ ಡೌನ್ ನಂತರ ರಾಜ್ಯದ ಪ್ರತಿಷ್ಟಿತ ವಾರ ಪತ್ರಿಕೆ ರವಿ ಬೆಳೆಗೆರೆಯವರ ಹಾಯ್ ಬೆಂಗಳೂರು ಮೂರು ವಾರದಿಂದ ಅಚ್ಚಾಗಲಿಲ್ಲ ಮತ್ತು ಇದನ್ನ ನಿಲ್ಲಿಸುತ್ತಾರೆ ಎಂಬ ಸುದ್ದಿ ಹರಡಿದೆ.
ಪ್ರತಿವಾರ ಬಿಡುಗಡೆಯಾಗಲು ಪೈಪೋಟಿ ಇರುತ್ತಿದ್ದ ಸಿನಿಮಾ ಲಾಕ್ ಡೌನ್ ನಂತರ ಚಿತ್ರಮಂದಿರ ರದ್ದಾಗಿದ್ದರಿಂದ ಬಿಡುಗಡೆ ಆಗುವ ಹಾಗಿಲ್ಲ.
ಟಿ.ಆರ್.ಪಿ ಗಳಿ೦ದ ಜಾಹಿರಾತು ಲಾಭದಿಂದ ನಿತ್ಯ ಬರುತ್ತಿದ್ದ ಟಿ.ವಿ.ದಾರಾವಾಹಿಗಳು ಈಗ ಜಾಹೀರಾತು ಇಲ್ಲದೆ ನಿಂತಿದೆ ಹೊಸ ಸೀರಿಯಲ್ ಸಿನಿಮಾ ಚಿತ್ರಿಕರಣ ಕೂಡ ನಿಂತಿದೆ.
ಜಿಲ್ಲಾ ಮತ್ತು ತಾಲ್ಲೂಕ ಮಟ್ಟದ ಪತ್ರಿಕೆಗಳನ್ನ ಬದುಕದಂತೆ ಮಾಡಿದ ರಾಜ್ಯ ಮಟ್ಟದ ಪತ್ರಿಕೆಗಳು ಕರೋನಾ ವೈರಸ್ ಕಾರಣದಿಂದ ವೆಂಟಿಲೇಟರ್ ನಲ್ಲಿ ಉಸಿರಾಡುವ೦ತಾಗಿದೆ.
ಸುದ್ದಿಗಿಂತ ವರದಿಗಾರ ಎಂಬ ಪ್ರಿವಿಲೈಸ್ ನಲ್ಲಿ ಮೈಮರೆತ ಟಿವಿ ರಿಪೋಟ್೯ರ್ ಗಳಲ್ಲಿ ಕೊರಾನ ಪಾಸಿಟಿವ್ ಬೇರೆ ಕಂಡು ಬಂದಿರುವುದು ಮುಂದಿನ ದಿನದಲ್ಲಿ ಟೀವಿ ವರದಿಗಾರರ ಕೊರತೆಗೂ ಕಾರಣವಾದೀತು.
ಏನೇ ಆದರೂ ಈಗ ಹಾಳಾಗಿರುವ ಆಥಿ೯ಕ ವ್ಯವಸ್ಥೆ ಸರಿ ಆಗಲು ಒಂದು ವಷ೯ವಾದರೂ ಬೇಕಾದೀತು, ಅದೂ ಆದಷ್ಟು ಬೇಗ ಕೊರಾನಾ ವೈರಸ್ ತಹಬಂದಿಗೆ ಬಂದರೆ ಮತ್ತು ಜುಲೈ ತಿಂಗಳ ಒಳಗೆ ವ್ಯಾಕ್ಸಿನ್ ಕಂಡು ಹಿಡಿದು ಬಳಸುವಂತಾದರೆ ಮಾತ್ರ.
ಇಲ್ಲದಿದ್ದರೆ ಮಾತ್ರ ಪರಿಸ್ಥಿತಿ ಮಾತ್ರ ಉಹಿಸಲಾರದ್ದು.
Comments
Post a Comment