ನಿರಾಶೆ ಬೇಡ, ಭಾರತ ಸೂಪರ್ ಪವರ್ ಆಗಿ ಹೊರಹೊಮ್ಮಲಿದೆ ಲಾಕ್ ಡೌನ್ ನಂತರ ಆಶಾದಾಯಕ ಜೀವನ ಖಂಡಿತಾ ಬಂದೇ ಬರುತ್ತದೆ ರೈತರು, ವ್ಯಾಪರಸ್ಥರು, ಉದ್ಯಮಿಗಳು ಹತಾಶರಾಗಬೇಕಾಗಿಲ್ಲ.
#ಕೊರಾನಾ_ಲಾಕ್_ಡೌನ್_ಡೈರಿ_2020
#ಲೆಟರ್_ನOಬರ್_27
#ದಿನಾ೦ಕ_01_ಮೇ_2020
ಕೊರಾನ ವೈರಸ್ ನಿOದ ಇಡೀ ದೇಶ ಸ್ಥಬ್ದ, ಆಥಿ೯ಕ ಸಂಕಷ್ಟದಲ್ಲಿ ಸಾವು ನೋವು, ಉದ್ಯೋಗ ನಷ್ಟ ಇವುಗಳು ಯುದ್ಧ ಪೀಡಿತ ದೇಶಗಳಿಗಿಂತ ಸಮಸ್ಯೆ ಬೇರೆ ಆಗಿಲ್ಲ.
ಕೊರಾನಾ ವೈರಸ್ ಇನ್ನೆಷ್ಟು ದಿನ ಅಥವ ತಿಂಗಳು ನಮ್ಮನ್ನ ಕಾಡಬಹುದು? ಅದಕ್ಕೂ ಒಂದು ಕೊನೆ ಇರಲೇಬೇಕಲ್ಲ? ಮುಂದಿನ ಆಗಸ್ಟ್ ಒಳಗೆ ಇಡೀ ದೇಶ ಕೊರಾನ ಮುಕ್ತ ಆಗೇ ಆಗುತ್ತದೆಂಬ ಆಶಾಭಾವನೆ ಇದೆ.
ಮಾಚ್೯ 25 ರಿಂದ ಲಾಕ್ ಡೌನ್ ಆಗಿದ್ದರಿಂದ ದೇಶ ಆಥಿ೯ಕ ಸಂಕಷ್ಟಕ್ಕೆ ಒಳಗಾದರೂ ಈ ಸಾಂಕ್ರಮಿಕ ರೋಗ ಹರಡುವುದನ್ನ ಒಂದು ರೀತಿಯಲ್ಲಿ ತಡೆಯಲಾಯಿತು.
ಜಪಾನ್ ದೇಶದ ಮೇಲೆ ಅಣು ಬಾಂಬ್ ಬಿದ್ದು ಆದೇಶ ಸಾಮಾಜಿಕ, ಆಥಿ೯ಕ ಮತ್ತು ರಾಜಕೀಯ ಸಂಕಷ್ಟಕ್ಕೆ ಈಡಾದದ್ದು ನಂತರ ಸ್ವಯಂ ಪ್ರೇರಣೆಯಿ೦ದ ಆದೇಶ ಸಂಪೂಣ೯ ಪುನರ್ ನಿಮಾ೯ಣವಾಗಿ ಇಡೀ ವಿಶ್ವಕ್ಕೆ ಮಾದರಿ ಆಗಿದೆ.
ಬೃಹತ್ ಭಾರತ ದೇಶ ಈ ಆರೋಗ್ಯ ತುತು೯ ಪರಿಸ್ಥಿತಿಯಿಂದ ಎಲ್ಲಾ ರೀತಿಯ ಸಂಕಷ್ಟದಲ್ಲಿದೆ ಆದರೆ ಮುಂದಿನ ದಿನದಲ್ಲಿ ಇದನ್ನೆಲ್ಲ ಮೀರಿ ವಿಶ್ವದಲ್ಲೇ ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮು ಎಲ್ಲಾ ಸಾಧ್ಯತೆಗಳಿದೆ.
ದೇಶದ ಆಥಿ೯ಕ ಸ್ಥಿರತೆ, ಕೃಷಿ, ಕೈಗಾರಿಕೆಗಳು ಮತ್ತು ತಂತ್ರಜ್ಞಾನದ ಆಧುನೀಕರಣದಿಂದ ಬದಲಾಗಲಿದೆ.ದೇಶದ ಆರೋಗ್ಯ, ಶಿಕ್ಷಣ, ಮಾರುಕಟ್ಟೆ, ರಾಜಕೀಯ ವಿದೇಶ ನೀತಿಗಳು ಕೊರಾನಾ ವೈರಸ್ ನ ದೊಡ್ಡ ಸವಾಲಿನಿಂದ ಹೊಸ ರೂಪ ಖಂಡಿತಾ ಪಡೆಯಲಿದೆ.
ಪ್ರತಿ ಭಾರತೀಯನೂ ಹೊಸ ಕನಸು ಕಲ್ಪನೆಯಲ್ಲಿ ಕೃಷಿ ಕೈಗಾರಿಕೆ ವ್ಯವಹಾರಗಳನ್ನ ನಡೆಸುವ ಹೊಸತನದ ಮಾಗ೯ ಅನಿವಾಯ೯ವಾಗಿ ತುಳಿಯುತ್ತಾನೆ ಇದರಿಂದ ಉತ್ತಮ ಪಲಿತಾಂಶ ಪಡೆಯುತ್ತಾನೆ.
ಸಕಾ೯ರಗಳೂ ಈ ಆಪತ್ತಿನಿಂದ ಪಡೆಯುವ ಅನುಭವ ಸಾದಾರಣವೇನಲ್ಲ ಭವಿಷ್ಯದಲ್ಲಿ ಭಾರತದಲ್ಲಿ ಅಳವಡಿಸಿಕೊಳ್ಳಬೇಕಾದ ನೀತಿಯನ್ನ ಸರಿಯಾಗಿ ಕಾಯ೯ರೂಪಕ್ಕೆ ತರಲಿದೆ.
ಹಾಗಾಗಿ ಭಾರತೀಯರು ಹತಾಶರಾಗಬೇಕಾಗಿಲ್ಲ ಅಲ್ಪಕಾಲದ ಈ ಸಂದಿಗ್ದ ಪರಿಸ್ಥಿತಿಯನ್ನ ಎಚ್ಚರಿಕೆಯಿಂದ ಎದುರಿಸಬೇಕು, ಆರೋಗ್ಯದ ಮುಂಜಾಗುರುಕತೆ ವಹಿಸಿ ಮುಂದಿನ ಒಳ್ಳೆಯ ದಿನಕ್ಕೆ ಕಾಯಬೇಕು.
ಕಳೆದದ್ದಕ್ಕಿ೦ತ ಹೆಚ್ಚು ಗಳಿಸುವ ಭವಿಷ್ಯ ಕಾಲಕ್ಕಾಗಿ ನಿರೀಕ್ಷಿಸಬೇಕು.
Comments
Post a Comment