#ದೇಶದೊಂದಿಗೆ ನಾವು, ಕೊರಾನಾ ವೈರಸ್ ನಿಮೂ೯ಲನೆಗೆ ದೇಶದ ಎಲ್ಲಾ ಪ್ರಯತ್ನಕ್ಕೆ ಅದರ ಯಶಸ್ವಿಗೆ ಭಾರತೀಯರೆಲ್ಲರೂ ಒಗ್ಗಟ್ಟು ದೀಪ ಹಚ್ಚುವ ಮೂಲಕ ಪ್ರದಶಿ೯ಸಿದ ಐತಿಹಾಸಿಕ ಕ್ಷಣ#
ದಿನಾಂಕ 9 ಏಪ್ರಿಲ್ 2020 ಭಾನುವಾರ ರಾತ್ರಿ 9ರಿಂದ 9 ನಿಮಿಷದ ದೀಪ ಬೆಳಗುವ ಇಡೀ ದೇಶದ ಪ್ರದಾನ ಮOತ್ರಿ ಕರೆ ಒಂದು ಐತಿಹಾಸಿಕ ಕ್ಷಣ, ಇನ್ನೆರೆಡು ತಿಂಗಳಲ್ಲಿ ಕೊರಾನಾ ವೈರಸ್ ಏನೆಲ್ಲ ಅನಾಹುತ ಮಾಡಬಹುದು ಯಾರಿಗೆ ಗೊತ್ತು?
ಆದರೆ ಒಂದು ಸಕಾ೯ರ ದೇಶದ ಜನರ ಜೀವ ರಕ್ಷಿಸಲು ಏನೆಲ್ಲ ಮುಂಜಾಗೃತೆ ವಹಿಸಲಿದೆಯೋ ಅದನ್ನೆಲ್ಲ ಪ್ರಜೆಗಳು ಒಳ್ಳೆಯ ಮನಸ್ಸಿನಿಂದ ಒಂದೇ ದೃಡ ನಿದಾ೯ರದಿಂದ ಬೆಂಬಲಿಸಿದರೆ ಅದಕ್ಕೂ ಒಂದು ಸಾಮೂಹಿಕ ಪ್ರಾಥ೯ನೆಯ ಶಕ್ತಿ ಬರತ್ತದೆ ಅಲ್ಲಿ ಒಂದು ಧನಾತ್ಮಕವಾದ ವಾತಾವರಣ ಸೃಷ್ಟಿ ಸಾಧ್ಯವಿದೆ.
ಇಲ್ಲಿ ಪ್ರದಾನ ಮಂತ್ರಿಗಳ ಸದುದ್ದೇಶದ ವಿನಂತಿ ನಿರಾಕರಿಸಿ ಮಾಡುವುದಾದರೂ ಏನು? ಇದು ಸರಿ ಅಲ್ಲ ಹೀಗೆ ಮಾಡಿ ಅನ್ನಲು ಬೇರೆ ಯಾವ ಪರಿಹಾರ ಗೊತ್ತಿದೆ ವಿಶ್ವದ ದೊಡ್ಡಣ್ಣನಂತ ದೇಶಗಳೇ ಕೈ ಚೆಲ್ಲಿದೆ, ಕೇವಲ ರಾಜಕೀಯ, ಜಾತಿ ಮತ್ತು ದಮ೯ ಆದಾರ ಬಿಟ್ಟು ಎಲ್ಲರೂ ಒಂದಾಗಿ ಸಕಾ೯ರ ಬೆಂಬಲಿಸಬೇಕಾದ ಸಂದಭ೯ದಲ್ಲಿ ಕೆಲವರು ಅಪಹಾಸ್ಯ ಮಾಡುವುದು ಪ್ರದಾನ ಮಂತ್ರಿಯನ್ನೆ ವಿರೋದಿಸುವಂತ ನಡೆ ನೋಡಿದರೆ ದೇಶದ ಸಂಕಷ್ಟ ಸಂದಭ೯ದಲ್ಲೂ ಇವರ ಸಣ್ಣತನ ಬೇಸರ ತರಿಸುತ್ತದೆ.
ಕೊರಾನಾ ವೈರಸ್ ದೂರದಲ್ಲಿಲ್ಲ ನಮ್ಮ ನಿಮ್ಮ ಮನೆಯ ಗೇಟಿನಲ್ಲೇ ಹೊಂಚು ಹಾಕಿದೆ ನಿಮ್ಮ ನಿಲ೯ಕ್ಷ ಅಪಾಯಕ್ಕೆ ಆಮOತ್ರಣ ನೀಡಿದಂತೆ, ಬುದ್ಧಿಹೀನರಿಗೆ ಮಾತಾಂದರಿಗೆ ಪ್ರೋತ್ಸಾಹ ನೀಡುವಂತ ಸಣ್ಣ ನಡವಳಿಕೆ ಕೂಡ ದೊಡ್ಡ ದುರ೦ತಕ್ಕೆ ಕಾರಣವಾದೀತು ಎಚ್ಚರ.
ಇವತ್ತು ನಮ್ಮ ಮನೆಯಲ್ಲಿನ ಬಾಲ್ಕಾನಿಯಲ್ಲಿ ರಾತ್ರಿ 9ಕ್ಕೆ ವಿದ್ಯುತ್ ದೀಪ ನಂದಿಸಿ ದೇಶದ ಸಮಸ್ತ ಜನರ ಆರೋಗ್ಯಕ್ಕಾಗಿ ನಮ್ಮ ದೇಶದ ಪ್ರದಾನ ಮಂತ್ರಿಗಳ ಎಲ್ಲಾ ಮು೦ಜಾಗೃತ ಕ್ರಮಗಳಿಗೆ ನಾವೆಲ್ಲರೂ ಒಗ್ಗಟ್ಟಿನ ಬೆಂಬಲವಿದೆ ಎ೦ದು ಸಾ೦ಕೇತಿಕವಾಗಿ 9 ನಿಮಿಷ ದೀಪ ಬೆಳಗಿ ಬೆಂಬಲ ಸೂಚಿಸಿದೆವು.
ಈಶ್ವರ ಅಲ್ಲಾ ಏಸು ಬುದ್ಧ ಮಹಾವೀರರಲ್ಲಿ ಈ ದೊಡ್ಡ ವಿಪತ್ತಿನಿಂದ ದೇಶವನ್ನ ಪಾರು ಮಾಡಿರೆಂದು ಪ್ರಾಥಿ೯ಸಿದೆ.
Comments
Post a Comment