ಕೊರಾನ ಲಾಕ್ ಡೌನ್ ಡೈರಿ, ಸಣ್ಣ ಪುಟ್ಟ ಕಾಯಿಲೆ ಮಾಯ, ಸಾಯುವವರು ಕಡಿಮೆ ಆಸ್ಪತ್ರೆಗೆ ಹೋಗದೆ ಔಷದಿ ಕುಡಿಯದೆ ಜನರ ಆರೋಗ್ಯ ಸುಧಾರಿಸುತ್ತಿರುವುದಾದರು ಹೇಗೆ?
#ಕೊರಾನಾ_ಲಾಕ್_ಡೌನ್_ಡೈರಿ_2020
#ಲೆಟರ್_ನOಬರ್_20
#ದಿನಾ0ಕ_23_ಏಪ್ರಿಲ್_2020
* ಶೇಕಡಾ 3% ಮಾತ್ರ ದೇಹದ ಕಾಯಿಲೆ ಉಳಿದ 97% ಮಾನಸಿಕ ಕಾಯಿಲೆ ಎಂಬುದು ಸಾಬೀತಾಯಿತು!
* ವೈದ್ಯರ ಬೇಟಿ ಮಾಡಲಿಲ್ಲ ಚಿಕಿತ್ಸೆ ಪಡೆಯಲಿಲ್ಲ ಆದರೂ ಸಾವಿನ ಸಂಖ್ಯೆ ಕಡಿಮೆ ಏಕೆ?!.
ಇಂಥಹ ಪ್ರಶ್ನೆ ಒಂದು ಕೊರಾನ ವೈರಸ್ ನಿಯ೦ತ್ರಿಸಲಿಕ್ಕಾಗಿ ಲಾಕ್ ಡೌನ್ ಪ್ರಾರಂಭ ಆದ 15 ದಿನದಲ್ಲೇ ಸಾವ೯ಜನಿಕರಲ್ಲಿ ಉ೦ಟಾಗಿದೆ.
ಹಳ್ಳಿಗಳಲ್ಲೂ ಕ್ಲೀನಿಕ್ ಗಳಲ್ಲಿ ಒಳಹೋಗಲಾರದಷ್ಟು ರೋಗಿಗಳಿರುತ್ತಿದ್ದದ್ದು ಮಾಮೂಲಾಗಿತ್ತು ಹಾಗಂತ ಹೊಬಳಿ ಕೇಂದ್ರದ ಹಳ್ಳಿಗಳಲ್ಲಿ 5-6 ಕ್ಲೀನಿಕ್ ಗಳು, ಸಕಾ೯ರಿ ಆಸ್ಪತ್ರೆ, ಮೆಡಿಕಲ್ ಶಾಪ್, ಲ್ಯಾಬೊರೇಟರಿಗಳಿಗೆ ಪುರುಸೊತ್ತೆ ಇರಲಿಲ್ಲ.
ಇಲ್ಲಿನ ವೈದ್ಯರು ಹೆಚ್ಚಿನ ಪರೀಕ್ಷೆ ಚಿಕಿತ್ಸೆ ಅಂತ ತಾಲ್ಲೂಕ್ ಕೇ೦ದ್ರಕ್ಕೆ ಅಲ್ಲಿನವರು ಜಿಲ್ಲಾ ಕೇಂದ್ರದ ಮಲ್ಟಿ ಸ್ಪೆಷಲ್ ಆಸ್ಪತ್ರೆಗಳಿಗೆ ರವಾನಿಸುತ್ತಿದ್ದರು.
ಎಲ್ಲಾ ಜಿಲ್ಲಾ ಕೇಂದ್ರಗಳು ಮೆಡಿಕಲ್ ಹಬ್ ಗಳಾಗಿದೆ ಇದರ ಮಧ್ಯ ಖಾಸಾಗಿ ಮೆಡಿಕಲ್ ಕಾಲೇಜ್ ಗಳು ಸಕಾ೯ರಿ ಮೆಡಿಕಲ್ ಕಾಲೇಜ್ ಗಳು ಅವುಗಳ ಆಸ್ಪತ್ರೆ ಎಲ್ಲವೂ ಅಸಾಧ್ಯ ಜನಜಂಗುಳಿಯಿಂದ ತುಳುಕುತ್ತಿತ್ತು.
ಜನ ಸಾಮಾನ್ಯರು ವೈದ್ಯಕಿಯ ಚಿಕಿತ್ಸೆ ಪರೀಕ್ಷೆಗೆ ಒಗ್ಗಿ ಬಿಟ್ಟಿದ್ದರು ಹಾಗೆ ವೈದ್ಯರು ನಿರಂತರ ರೋಗಿಗಳು ಬರುವ೦ತೆ ಒಂದು ಪರೀಕ್ಷೆ ನಂತರ ಇನ್ನೂoದು, 15 ದಿನ ಈ ಮಾತ್ರೆ ತಿಂದು ಪುನಃ ಬನ್ನಿ ಎನ್ನುವ ಅಸೈನ್ ಮೆ೦ಟ್ ಕೊಟ್ಟು ರೋಗಿಗಳು ತಪ್ಪಿಹೋಗದಂತೆ ಮಾಡುತ್ತಾರೆ ಅಂತ ಕೆಲ ಒಳ್ಳೆ ವೈದ್ಯರು ಹೇಳುವುದು ಸುಳ್ಳು ಇರಲಿಕ್ಕಿಲ್ಲ.
ಇದೇ ರೀತಿ 2018 ರ ಒಂದು ಸಮೀಕ್ಷೆ ಭಾರತದಲ್ಲಿ ವಷ೯ಕ್ಕೆ 16 ಲಕ್ಷ ಜನ ಸರಿಯಾದ ಚಿಕಿತ್ಸೆ ದೊರೆಯದೆ ಸಾಯುತ್ತಾರೆ ಅಂತ ವರದಿ ನೀಡಿದೆ ಆದರ ಪ್ರಕಾರ ದಿನಕ್ಕೆ 4500 ಜನ ಸಾಯುತ್ತಾರೆ.
ಆದರೆ ಕೊರಾನಾ ಲಾಕ್ ಡೌನ್ ಪ್ರಾರಂಭದ ನಂತರ ಜನರು ವೈದ್ಯರ ಹತ್ತಿರ ಹೋಗಲಿಲ್ಲ ವೈದ್ಯರೂ ಕೊರಾನ ವೈರಸ್ ಗೆ ಹೆದರಿ ಕ್ಲೀನಿಕ್ ತೆರೆಯುತ್ತಿಲ್ಲ ಆದರೆ ಜನ ಮಾತ್ರ ಆರೋಗ್ಯದಿಂದ ಇದ್ದಾರೆ ಮೈ ಕೈ ನೋವು, ಜ್ವರ, ಹೊಟ್ಟೆ ನೋವು, ಕಾಲು ನೋವು ಮತ್ತು ಗ್ಯಾಸ್ಟ್ರಿಕ್ ಆಂತ ನಿತ್ಯ ವೈದ್ಯರನ್ನ ಹುಡುಕಿ ಹೋಗುತ್ತಿಲ್ಲ.
ಇದರ ಮದ್ಯೆ ಸಾಯುವವರ ಸಂಖ್ಯೆ ಕಡಿಮೆ ಆಗಿದೆ ಅನ್ನುವ ಅಂಕಿ ಅಂಶಗಳನ್ನ ನೋಡಿದರೆ ನಾವು ತಿನ್ನುವ ಔಷದಿ ಮತ್ತು ಚಿಕಿತ್ಸೆ ನೀಡುವ ವೈದ್ಯ ಪದ್ಧತಿಯನ್ನೆ ಅನುಮಾನಿಸುವಂತಿದೆ.
ಹಣದಾಹದ ಕಾಪೊ೯ರೇಟ್ ಆಸ್ಪತ್ರೆ ವ್ಯವಸ್ಥೆ 3% ಮಾತ್ರ ಇರುವ ರೋಗಿಗಳಿ೦ದ ಲಾಭವಿಲ್ಲ ಅಂತ 97% ಇರುವ ನಿರೋಗಿಗಳನ್ನು ಕಾಯಿಲೆ, ಪರೀಕ್ಷೆ ಮತ್ತು ಚಿಕಿತ್ಸೆ ಎನ್ನುವ ಜಾಲದಲ್ಲಿ ಸಿಲುಕಿಸಿರುವುದು ಇದರಿಂದ ಹೆಚ್ಚಿನ ಸಾವು ಸಂಬವಿಸುತ್ತಿದೆ ಅಂತ ಡಾ.ಬಿ.ಎಂ.ಹೆಗಡೆ ಉಪನ್ಯಾಸ ನೀಡುತ್ತಿರುವುದು ಸುಳ್ಳಲ್ಲ.
ಕೊರಾನಾ ಲಾಕ್ ಡೌನ್ ಅವದಿಯಲ್ಲಿ ಇದು ಸಾಬೀತಾಗಿದೆ ಗಮನಿಸಿ.
Comments
Post a Comment