#ಕೊರಾನಾ_ಲಾಕ್_ಡೌನ್_ಡೈರಿ_2020
#ಲೆಟರ್_ನOಬರ್_22
#ದಿನಾ0ಕ_25_ಏಪ್ರಿಲ್_2020
ನಮ್ಮ ನಿಮ್ಮ ಸುತ್ತಲಲ್ಲಿ ಏಪ್ರಿಲ್ - ಮೇ ತಿಂಗಳಲ್ಲಿ ಪುರುಸೊತ್ತೆ ಇಲ್ಲದಂತೆ ಮದುವೆಗಳು ನಡೆಯುತ್ತಿದ್ದವು, ಮದುವೆಯ ಮನೆಯವರಿಗೆ,ಬಂಗಾರದ ಮಳಿಗೆಗೆ , ಪುರೋಹಿತರಿಗೆ, ಬಾಸಿಂಗ ಮಾಡುವವರಿಗೆ, ಮಂಗಳವಾದ್ಯದವರಿಗೆ, ಬಳೆ ಇಡುವವರಿಗೆ, ಶಾಮಿಯಾನದವರಿಗೆ, ಡೆಕೋರೇಷನ್ ರವರಿಗೆ, ಬ್ಯೂಟಿ ಪಾಲ೯ರ್ ನವರಿಗೆ, ಅಡುಗೆಯವರಿಗೆ, ಹೂವಿನ ವ್ಯಾಪಾರಿಗಳಿಗೆ, ಬಡಿಸುವವರಿಗೆ, ದಿನಸಿ ಮಾರಾಟಗಾರರಿಗೆ, ತರಕಾರಿ ಮಂಡಿಯವರಿಗೆ, ಪೋಟೋ ಗ್ರಾಪರ್ ಗೆ, ಪ್ರಿOಟಿOಗ್ ಪ್ರೆಸ್, ಕಲ್ಯಾಣ ಮ೦ಟಪದವರಿಗೆ, ಲಾಡ್ಜಗಳಿಗೆ, ಟ್ಯಾಕ್ಸಿಗಳಿಗೆ, ಮದರಂಗಿ ಬಿಡಿಸುವವರಿಗೆ, ಚಪ್ಪರ ಹಾಕುವವರಿಗೆ, ಚಪ್ಪಲಿ ಅಂಗಡಿಯವರಿಗೆ, ರೈಲು, ಬಸ್, ವಿಮಾನಗಳಿಗೆ ಮತ್ತು ಪೆಟ್ರೋಲ್ ಪoಪ್ ಹೀಗೆ ಎಲ್ಲರಿಗೂ ಕೈತುಂಬಾ ಕೆಲಸ ಕಾಸು ಇರುತ್ತಿದ್ದ ತಿಂಗಳು ಈ ವಷ೯ ಸಂಪೂಣ೯ ಸ್ಥಬ್ದ ಆಗಿದೆ.
ಏಪ್ರಿಲ್ - ಮೆ ತಿಂಗಳಲ್ಲಿ ಪರೀಕ್ಷೆಗಳು ಮುಗಿದು ಶಾಲೆಗಳಿಗೆ ರಜೆ, ವಿವಾಹಕ್ಕೆ ಅನುಕೂಲ ಮಹೂತ೯ಗಳು, ಕೃಷಿ ಕೆಲಸಗಳಿಗೂ ವಿರಾಮ, ಪ್ರಶಸ್ತವಾದ ಹವಾಮಾನಗಳು ಈ ಎರೆಡು ತಿಂಗಳಲ್ಲಿ ಹೆಚ್ಚಿನ ಮದುವೆಗೆ ಕಾರಣ.
ಈ ಎರೆಡು ತಿಂಗಳಲ್ಲಿ ಮದುವೆ ಆಗುವವರೆಲ್ಲ ಡಿಸೆಂಬರ್ ನಲ್ಲೆ ಹೆಚ್ಚು ಕಡಿಮೆ ಮಾತುಕತೆ, ನಿಶ್ಚಿತಾಥ೯ ಮುಗಿಸಿ ಮದುವೆ ತಯಾರಿ ಮಾಡಿಕೊಂಡು ಕಲ್ಯಾಣ ಮಂಟಪ ನಿಗದಿ ಮಾಡಿ ಲಗ್ನ ಪತ್ರಿಕೆ ಮುದ್ರಿಸಿ ಅಂದು ಬಾ೦ದವರನ್ನ ಗೆಳೆಯರನ್ನ ಕರೆದಿರುತ್ತಾರೆ.
ವದು ವರರು ಅವರ ಭವಿಷ್ಯದ ಬಗ್ಗೆ ದಾ೦ಪತ್ಯ ಜೀವನದ ಬಗ್ಗೆ ಕನಸು ಕಾಣುವ ಕಾಲದಲ್ಲೇ ಈ ಕೊರಾನ ವೈರಸ್ ನಿಂದ ಇಡೀ ದೇಶ ಲಾಕ್ ಡೌನ್ ಆಗಿ ಆಗಬೇಕಾದ ಮದುವೆಗಳು ಸ್ಥಗಿತವಾಗಿದೆ.
ಜೂನ್ ನಂತರ ಮದುವೆ ಕಷ್ಟ ಸಾಧ್ಯ ಕಾರಣ ಮುಂಗಾರು, ಶಾಲೆ ಪ್ರಾರಂಭ ಕೃಷಿ ಕೆಲಸ ಮತ್ತು ಪ್ರಶಸ್ತ ಮಹೂತ೯ದ ಕೊರತೆ.
2020 ರ ಮದುವೆ ಕನಸಾಗಿದೆ.
ಭಾರತ ದೇಶದಲ್ಲಿ ವಷ೯ಕ್ಕೆ 10 ಲಕ್ಷ ಮದುವೆ ಆಗುತ್ತೆ ಅಂತಾರೆ (ಇನ್ನು ಕೆಲವರು ಜನಸಂಖ್ಯೆ ಆದಾರದಲ್ಲಿ 1 ಕೋಟಿ ಮದುವೆ ಅನ್ನುತ್ತಾರೆ) ಇದರಿಂದ ವಾಷಿ೯ಕ 70 ರಿಂದ 80 ಲಕ್ಷ ಕೋಟಿ ಹಣದ ದೊಡ್ಡ ವಹಿವಾಟು ಈ ವಷ೯ ಕೊರಾನಗಾಗಿ ಇಲ್ಲವಾಗಿದೆ.
ಇದರಿಂದ ಅವಲಂಬಿಸಿದ ಎಷ್ಟು ಜನರಿದ್ದಾರೆ, ಉದ್ದಿಮೆಗಳಿದೆ ಅವುಗಳೆಲ್ಲ ಇದರಿಂದ ಉದ್ಯೋಗ ವ್ಯವಹಾರ ಕಳೆದುಕೊಂಡಿರುವುದು ನಮ್ಮ ಕಣ್ಣ ಎದುರೇ ಇದೆ.
ನಿದ೯ರಿಸಿದ ಮದುವೆ ಆಗದಿದ್ದರೆ ಆಯಾ ಕುಟುಂಬದ ಆಥಿ೯ಕ ನಷ್ಟ, ಮಾನಸಿಕ ನೋವುಗಳು ಸಮಾಜದಲ್ಲಿ ಏನೇಲ್ಲ ಪರಿಣಾಮ ಬೀರಲಿದೆ ಎಂದು ಯೋಚಿಸಿದರೆ ಭಯ ಉoಟಾಗುವುದಿಲ್ಲವೆ?
ಕಣ್ಣಿಗೆ ಕಾಣದ ವೈರಸ್ ನಿಂದ ಇನ್ನು ಏನೇನೆಲ್ಲ ಎದುರಿಸಬೇಕೊ ದೇವರೆ ಬಲ್ಲ.
Comments
Post a Comment